ಸಾರಾಂಶ
ಸಂತ ಮೇರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಫುಟ್ಬಾಲ್ ತಂಡ ರಾಜ್ಯ ಮಟ್ಟಕ್ಕೆ ಪ್ರಯಾಣ ಬೆಳೆಸಿದೆ.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸಂತ ಮೇರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಫುಟ್ಬಾಲ್ ತಂಡ ರಾಜ್ಯ ಮಟ್ಟಕ್ಕೆ ಪ್ರಯಾಣ ಬೆಳೆಸಿದೆ. ಜಿಲ್ಲಾ ಮಟ್ಟದ ಪಂದ್ಯಾವಳಿಯು ಗೋಣಿಕೊಪ್ಪದ ಕಾಪ್ಸ್ ಶಾಲಾ ಮೈದಾನದಲ್ಲಿ ನಡೆದು ಪಂದ್ಯಾವಳಿಯಲ್ಲಿ ಪದವಿಪೂರ್ವ ಕಾಲೇಜುಗಳ ಫುಟ್ಬಾಲ್ ವಿಭಾಗದಲ್ಲಿ ಸಂತಮೇರಿ ಪದವಿ ಕಾಲೇಜು ಬಾಲಕರು ಜಯಗಳಿಸುವ ಮೂಲಕ 19ರಿಂದ ದಾವಣೆಗೆರೆಯಲ್ಲಿ ಆರಂಭಗೊಳ್ಳಲಿರುವ ರಾಜ್ಯ ಮಟ್ಟದ ಪುಟ್ಬಾಲ್ ಪಂದ್ಯಾವಳಿಗೆ ಸೆ. 18 ರಂದು ಸುಂಟಿಕೊಪ್ಪ ಸಂತ ಮೇರಿ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಪ್ರಯಾಣ ಬೆಳೆಸುತ್ತಿದೆ. ಕಾಲೇಜಿನ ವ್ಯವಸ್ಥಾಪಕರಾದ ರೇ.ಫಾ.ವಿಜಯಕುಮಾರ್ ಹಾಗೂ ಪ್ರಾಚಾರ್ಯರಾದ ಆರ್. ಸೇಲ್ವರಾಜ್ ಅವರು ಬಾಲಕರ ತಂಡಕ್ಕೆ ತರಬೇತುದಾರ ದೈಹಿಕ ಶಿಕ್ಷಣ ಶಿಕ್ಷಕ ಸುನಿಲ್ ಅವರಿಗೆ ಶುಭಹಾರೈಸಿ ವಿದ್ಯಾರ್ಥಿಗಳ ತಂಡಕ್ಕೆ ಬೀಳ್ಕೊಟರು.