ವೇದಿಕೆ ನಿರ್ವಹಣೆ ಒಂದು ಕಲೆ: ತೇಜಸ್ವಿ ಶಂಕರ್

| Published : Apr 30 2024, 02:03 AM IST

ವೇದಿಕೆ ನಿರ್ವಹಣೆ ಒಂದು ಕಲೆ: ತೇಜಸ್ವಿ ಶಂಕರ್
Share this Article
  • FB
  • TW
  • Linkdin
  • Email

ಸಾರಾಂಶ

ಪೂರ್ಣಪ್ರಜ್ಞ (ಸ್ವಾಯತ್ತ) ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಖಾತರಿ ಘಟಕದ ಮಾರ್ಗದರ್ಶನದಲ್ಲಿ ಪೂರ್ಣಪ್ರಜ್ಞ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ವಿದ್ಯಾರ್ಥಿ ತರಬೇತಿ ಘಟಕಗಳ ಜಂಟಿ ಆಶ್ರಯದಲ್ಲಿ ‘ಸ್ಟೇಜ್ ಕ್ರಾಫ್ಟ್ -ವೇದಿಕೆ ನಿರ್ವಹಣೆ’ ಎನ್ನುವ ಕಾರ್ಯಾಗಾರ ನಡೆಯಿತು. ಜಾದೂಗಾರ ಉಡುಪಿಯ ತೇಜಸ್ವಿ ಶಂಕರ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ವೇದಿಕೆ ನಿರ್ವಹಣೆ ಒಂದು ಕಲೆ. ಆ ಕಲೆಯನ್ನು ಕರಗತ ಮಾಡಿಕೊಂಡರೆ ವೇದಿಕೆಯನ್ನು ಸಮರ್ಥವಾಗಿ ನಿರ್ವಹಣೆ ಮಾಡುವುದು ಸುಲಭ ಸಾಧ್ಯ ಎಂದು ಅಂತರಾಷ್ಟ್ರೀಯ ಖ್ಯಾತಿಯ ಗಿಲಿ ಗಿಲಿ ಮ್ಯಾಜಿಕ್ ನ ಜಾದೂಗಾರ ಉಡುಪಿಯ ತೇಜಸ್ವಿ ಶಂಕರ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಅವರು ನಗರದ ಪೂರ್ಣಪ್ರಜ್ಞ (ಸ್ವಾಯತ್ತ) ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಖಾತರಿ ಘಟಕದ ಮಾರ್ಗದರ್ಶನದಲ್ಲಿ ಪೂರ್ಣಪ್ರಜ್ಞ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ವಿದ್ಯಾರ್ಥಿ ತರಬೇತಿ ಘಟಕಗಳ ಜಂಟಿ ಆಶ್ರಯದಲ್ಲಿ ನಡೆದ ‘ಸ್ಟೇಜ್ ಕ್ರಾಫ್ಟ್ -ವೇದಿಕೆ ನಿರ್ವಹಣೆ’ ಎನ್ನುವ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

ಅವರು ವೇದಿಕೆಯನ್ನು ಬಳಸಿಕೊಳ್ಳಬಹುದಾದ ವಿಧಾನಗಳು, ನಿಯಂತ್ರಣ, ಪರಿಕರಗಳ ಸಮರ್ಪಕ ಬಳಕೆ, ದ್ವನಿವರ್ಧಕಗಳ ನಿರ್ವಹಣೆ, ಬೆಳಕಿನ ಗುಣಮಟ್ಟ ನಿರ್ವಹಣೆ, ತಂತ್ರಜ್ಞಾನ ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಗಳ ಮೂಲಕ ಮಾರ್ಗದರ್ಶನ ನೀಡಿದರು.

ಕಾರ್ಯಾಗಾರದಲ್ಲಿ ಅತಿಥಿಯಾಗಿ ಭಾಗವಹಿಸಿದ ಪೂರ್ಣಪ್ರಜ್ಞ ಹಳೆ ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷರಾದ ಡಾ. ಎಂ. ಆರ್. ಹೆಗಡೆ ಇವರು ಕಾರ್ಯಾಗಾರದ ಅಗತ್ಯ ಹಾಗೂ ಉಪಯೋಗಗಳನ್ನು ವಿವರಿಸಿ ಸಮರ್ಪಕವಾಗಿ ವೇದಿಕೆಯನ್ನು ಬಳಸಲು ಕೆಲವೊಂದು ಸಲಹೆಗಳನ್ನು ನೀಡಿದರು.

ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥೆ ವಸಂತ ರವಿಪ್ರಕಾಶ್, ಆಂತರಿಕ ಗುಣಮಟ್ಟ ಖಾತರಿ ಘಟಕದ ಸಂಯೋಜಕ ಡಾ. ವಿನಯ್ ಕುಮಾರ್, ಹಳೆ ವಿದ್ಯಾರ್ಥಿ ಸಂಘದ ಸಂಯೋಜಕರಾದ ಡಾ. ಮಹೇಶ್ ಭಟ್, ಕೋಶಾಧಿಕಾರಿ ಸೌಮ್ಯ ಶೆಟ್ಟಿ, ವಿದ್ಯಾರ್ಥಿ ತರಬೇತಿ ಘಟಕದ ಸಂಯೋಜಕಿ ಜಯಲಕ್ಷ್ಮಿ, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಕಾಲೇಜು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಂಶು ಸ್ವಾಗತಿಸಿ, ರಿಕಿತಾ ವಂದಿಸಿದರು. ಭಾಗ್ಯಶ್ರೀ ಸೇರಿಗಾರ್ ಕಾರ್ಯಕ್ರಮ ನಿರ್ವಹಿಸಿದರು.