ಕನ್ನಡಪ್ರಭ ವಾರ್ತೆ ಮೈಸೂರು

ಕೋಟ್ಯಂತರ ರೂ. ಗಳು ತೆರಿಗೆ ಪಾವತಿಸುವ ಸ್ಟಾರ್‌ ಹೋಟೆಲ್ಸ್‌ಗಳ ಗೌರವ, ಮರ್ಯಾದೆ ಬೀದಿಪಾಲು ಮಾಡದಂತೆ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಆಹಾರ ಅಧಿಕಾರಿಗಳು ಇತ್ತೀಚೆಗೆ ಹೋಟೆಲುಗಳ ಮೇಲೆ ದಾಳಿ ನಡೆಸಿ ಕೊಳೆತ ಆಹಾರ ಪಧಾರ್ಥಗಳು, ಎಕ್ಸ್ ಪರಿ ಆದ ಹಾಲು ಹಾಗೂ ಇತರೆ ವಸ್ತುಗಳು ದಾಳಿಯಲ್ಲಿ ಸಿಕ್ಕಿದೆ ಎಂಬ ಮಾಧ್ಯಮಗಳಲ್ಲಿ ಬಿಂಬಿತವಾಗುತ್ತಿರುವುದು ನಿಜಕ್ಕೂ ಸತ್ಯವೇ? ಮನೆಗಳಲ್ಲೇ ಹಾಲಿನ ಪಾಕೇಟ್ ಪ್ರಿಜ್ನಲ್ಲಿಟ್ಟು 2-3ದಿನ ಉಪಯೋಗಿಸುದಿಲ್ಲವೇ? ಪ್ರಿಜ್ ಇರುವುದೇ ಪದಾರ್ಥಗಳು ಕೆಡದಂತೆ ಇಟ್ಟುಕೊಳ್ಳುವುದಕ್ಕಲ್ಲವೇ?. ಕೋಲ್ಡ್ ಸ್ಟೋರೇಜ್ ಅಂತ ಮಾಡಿ ವರ್ಷಗಟ್ಟಲೆ ಪದಾರ್ಥಗಳನ್ನು ಸಂರಕ್ಷಿಸಿ ಇಟ್ಟು ಅನ್ ಸೀಸನ್‌ನಲ್ಲಿ ಮಾರಾಟ ಮಾಡುತ್ತಿಲ್ಲವೇ? ಯಾವುದೇ ತರಕಾರಿಗಳನ್ನು ಕೊಂಡುತಂದಾಗ ಅದರಲ್ಲಿ ಉಪಯೋಗಿಸಲು ಬಾರದಂತಹ ಕೊಳೆತ, ಅರೆ ಕೊಳೆತ ಒಂದೆರಡು ಪದಾರ್ಥಗಳು ಇದ್ದೇ ಇರುತ್ತದೆ, ಅದರಲ್ಲೂ ಈ ಮಳೆಗಾಲದ ಸೀಸನ್ನಲ್ಲಿ ಸ್ವಲ್ಪ ಜಾಸ್ತಿಯೇ ಇರುತ್ತದೆ. ಅಂತಿಮ ಪದಾರ್ಥ ತಯಾರಿಸುವಾಗ, ಕ್ಲೀನ್ ಮಾಡುವಾಗ ಇದನ್ನು ಬೇರ್ಪಡಿಸಿ ಸಾದಾರಣವಾಗಿ ಉಪಯೋಗಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಅದು ಹೋಟೆಲ್ ಆಗಿರಲಿ ಅಧವಾ ಮನೆಯಲ್ಲಾಗಿರಲಿ. ಮಾರ್ಕೇಟ್ ನಿಂದ ತಂದ ಪದಾರ್ಥಗಳನ್ನು ಕೂಡಲೇ ಕ್ಲೀನ್ ಮಾಡಿ ಶೇಖರಿಸಿಟ್ಟರೂ ಹಲವು ವೇಳೆ ಮತ್ತೆ ಕೆಲವು ಪದಾರ್ಧಗಳು ಹಾಳಾಗುತ್ತದೆ.ಆದರೆ ಅಂತಿಮ ಪದಾರ್ಥದ ತಯಾರಿಕೆಯಲ್ಲಿ ಸಾಮಾನ್ಯವಾಗಿ ಯಾರೂಕೂಡ ಉಪಯೋಗಿಸುವುದಿಲ್ಲ,ಕಣ್ತಪ್ಪಿ ಆಗಬೇಕಷ್ಟೆ.ಕಣ್ತಪ್ಪಿ ಆದರೂ ಇಡೀ ಅಂತಿಮ ಪದಾರ್ಧ ಹಾಳಾಗುತ್ತದೆ .ಆದರಿಂದ ಉಧ್ಯಮಿಗೆ ಇನ್ನೂ ಹೆಚ್ಚಿನ ನಷ್ಟವಾಗುತ್ತದೆ.ಸಂಪೂರ್ಣ ಪದಾರ್ಥ ಎಸೆಯಬೇಕಾಗುತ್ತದೆ.

ಎಫ್‌ಎಸ್‌ಎಸ್‌ಎಐ ಆಕ್ಟ್‌ ಯಾವ ಆಹಾರೋಧ್ಯಮಿಗೂ ನೂರಕ್ಕೆ ನೂರರಷ್ಟು ಪಾಲನೆ ಮಾಡಲು ಕಷ್ಟ ಸಾಧ್ಯವೇ ಸರಿ ಇದರ ಬಗ್ಗೆ ಆಹಾರೋದ್ಯಮಿಗಳು ಪರಿಹಾರ ಕಂಡುಕೊಳ್ಳದಿದ್ದರೆ ಭವಿಷ್ಯದಲ್ಲಿ ನಮ್ಮ ರೆಸ್ಟೋರೆಂಟ್, ದರ್ಶಿನಿ, ಬೇಕರಿ, ಸ್ವೀಟ್ಸ್, ಕಾಂಡಿಮೆಂಟ್ಸ್ ಉದ್ಯಮಗಳು ಸಂಪೂರ್ಣ ಸ್ಥಗಿತಗೊಳ್ಳುವ ಕಾಲ ದೂರ ಇಲ್ಲ ಎಂದು ಅವರು ಹೇಳಿದ್ದಾರೆ..


ಕಠಿಣ ಕಾನೂನುಗಳನ್ನೇ ನೆಪವಾಗಿಟ್ಟುಕೊಂಡು ಉಧ್ಯಮಿಗಳನ್ವು ಬ್ಲಾಕ್ ಮೇಲ್ ಮಾಡುತ್ತಿರುವ ಇಂತಹ ಸಂಧರ್ಭದಲ್ಲಿ ಈ ಆಹಾರೋಧ್ಯಮವೇ ಬೇಡಾ ಅನ್ನುವಷ್ಟು ಮನಸ್ಸು ರೋಸಿ ಹೋಗುತ್ತಿದೆ.ಮುಂದೆಲ್ಲಾ ಈ ಲೈವ್ ಕಿಚನ್ ಬಿಟ್ಚು ವಿದೇಶಿ ಸಂಸ್ಕೃತಿಯ ಆಹಾರ ಪದಾರ್ಥಗಳಾದ ಪಿಜ್ದಾ,ಬರ್ಗರ್, ಕೆ ಫ್ ಸಿ, ಮ್ಯಾಗ್ಡೊನಾಲ್ಡ್ , ಇತ್ಯಾದಿ ರೆಡಿ-ಟೂ ಈಟ್ ಪದಾರ್ಥಗಳ ತಿನ್ನುವಂತಹ ಕಾಲ ದೂರವಿಲ್ಲ.ಉದ್ದಿಮೆದಾರರ ಸಂಘಗಳು ಇದಕ್ಕೆ ಯಾವರೀತಿಯಲ್ಲಿ ಸ್ಪಂದಿಸುವುದು ನೆರವಾಗುವುದು ಯೋಚಿಸಲಾಗುತ್ತಿದೆ ? ಎಲ್ಲ ಆಹಾರೋದ್ಯಮಿಗಳು ಇದರ ಬಗ್ಗೆ ತೀವ್ರ ಚಿಂತನೆ ಮಾಡಬೇಕಾಗಿರುವುದು ತುಂಬಾ ಅವಶ್ಯಕತೆ ಇದೆ ಅಂತ ಅನಿಸುತ್ತಿದೆ..

ಎಫ್‌ಎಸ್‌ಎಸ್‌ಎಐ ಇಲಾಖೆಯಾಗಲೀ ಅಥವ ಇನ್ಯಾವುದೇ ಇಲಾಖೆಯಾಗಲೀ ಉದ್ಯಮಗಳನ್ನು ಪರಿಶೀಲನೆ ಮಾಡುವಾಗ ಪತ್ರಿಕಾ ಮಾಧ್ಯಮ ಮತ್ತು ದೃಷ್ಯಮಾದ್ಯಮ ಪ್ರತಿನಿಧಿಗಳಿಗೆ ಜತೆಯಲ್ಲೇ ಕರೆದುಕೊಂಡು ಹೋಗುವುದು ಎಷ್ಟು ಸಮಂಜಸವೆಂದು ಅದಿಕಾರಿಗಳೇ ಸ್ಪಸ್ಟಪಡಿಸಬೇಕು.

ಕೋಟ್ಯಂತರ ರೂ. ಗಳು ತೆರಿಗೆ ಪಾವತಿಸುವ ಸ್ಟಾರ್‌ ಹೋಟೆಲ್‌ ಗಳ ಗೌರವ, ಮರ್ಯಾದೆ ಬೀದಿಪಾಲು ಮಾಡದಂತೆ ಸರ್ಕಾರವನ್ನು ಮೈಸೂರು ಹೋಟಲುಗಳ ಸಂಘ ಆಗ್ರಹಪಡಿಸಿದೆ.