ಸಾರಾಂಶ
- ದೂಡಾ ಅಧ್ಯಕ್ಷ ದಿನೇಶ ಶೆಟ್ಟಿ ಸಲಹೆ । ದೇವನಗರಿ ಪ್ರೋ ಇಮೇಜ್- 2025, ವಿಶ್ವ ಛಾಯಾಗ್ರಹಣ ದಿನಾಚರಣೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಪಿಯುಸಿ, ಪದವಿ ಶಿಕ್ಷಣ ಮುಗಿಸಿದ ಕೂಡಲೇ ಎಲ್ಲರಿಗೂ ಸರ್ಕಾರಿ ಕೆಲಸ ಸಿಗಲ್ಲ. ಆದರೆ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ನೈಪುಣ್ಯತೆಯಿಂದ ಖಾಸಗಿಯಾಗಿ ಸ್ವತಃ ತಾವೇ ಮಾಲೀಕರಾಗಿ ಸ್ಟುಡಿಯೋ ನಿರ್ಮಿಸಿಕೊಂಡು ಹತ್ತಾರು ಜನರಿಗೆ ಕೆಲಸ ಕೊಡಲು ಸಾಧ್ಯವಿದೆ ಎಂದು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳಿದರು.ನಗರದ ಶಾಮನೂರು ರಸ್ತೆಯ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಮಂಗಳವಾರ ದಾವಣಗೆರೆ ಜಿಲ್ಲಾ ಫೋಟೋಗ್ರಾಫರ್ ಅಂಡ್ ವೀಡಿಯೋಗ್ರಾಫರ್ಸ್, ಫೋಟೋಗ್ರಾಫರ್ಸ್ ಯೂತ್ ವೆಲ್ ಫೇರ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ 2 ದಿನಗಳ ದೇವನಗರಿ ಪ್ರೋ ಇಮೇಜ್- 2025, 186ನೇ ವಿಶ್ವ ಛಾಯಾಗ್ರಹಣ ದಿನಾಚರಣೆ- 2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ದೇವನಗರಿ ಪ್ರೊ ಇಮೇಜ್-2025 ಫೋಟೋ ವೀಡಿಯೋಗ್ರಾಫರ್ಸ್‌ಗಳಿಗೆ ದಾರಿದೀಪವಾಗಿದೆ. ಜೀವನ ನಡೆಸಲು ಏನಾದರೂ ಒಂದು ಉದ್ಯೋಗ ಬೇಕೇಬೇಕು. ಹೊಸ ಆವಿಷ್ಕಾರಕ್ಕೆ ತಕ್ಕಂತೆ ವರ್ಷ ವರ್ಷವೂ ನಾವು ಅಪ್‌ಗ್ರೇಡ್ ಆಗಬೇಕಾಗುತ್ತದೆ. ಪ್ರತಿವರ್ಷ ಹೊಸ ಹುಡುಗರು ಈ ವೃತ್ತಿಗೆ ಬರುತ್ತಾರೆ. ತಂತ್ರಜ್ಞಾನಕ್ಕೆ ತಕ್ಕಂತೆ ಹೇಗೆ ಬದಲಾಗಬೇಕು ಎಂಬುದರ ಬಗ್ಗೆ ಇಲ್ಲಿ ಕಾರ್ಯಾಗಾರ ಸಹಾ ಮಾಡಲಾಗುತ್ತಿದೆ ಎಂದರು.ದೇವನಗರಿ ಪ್ರೊ. ಇಮೇಜ್-2025ರ ಉದ್ದೇಶ ಹೊಸ ಹೊಸ ನವೀನ ತಂತ್ರಜ್ಞಾನಗಳಿಂದ ಕೂಡಿದ ಹೊಸ ಕ್ಯಾಮರಾ, ಆಲ್ಬಮ್, ಫ್ರೇಮ್, ಫೋಟೋ ಪ್ರಿಂಟಿಂಗ್‌ಗಳ ಪರಿಚಯದ ಜೊತೆಗೆ ಫೋಟೋ ವೀಡಿಯೋಗ್ರಾಫರ್ಸ್‌ಗಳ ಆರೋಗ್ಯ ತಪಾಸಣೆ- ಶ್ರಮ್ ಕಾರ್ಡ್ ವಿತರಣೆ, ರಕ್ತದಾನ ಶಿಬಿರ ಸಹಾ ಹಮ್ಮಿಕೊಳ್ಳಲಾಗಿದೆ. ಇಂದಿನ ಹೊಸ ಹೊಸ ಹುಡುಗರು ಇಂತಹ ತಾಂತ್ರಿಕತೆಗೆ ತಕ್ಕಂತೆ ಫಲಿತಾಂಶ ನೀಡುವ ತರಬೇತಿಯನ್ನು ಪಡೆಯಬೇಕು. ಅದನ್ನು ಈ ಅಸೋಸಿಯೇಷನ್ ನಮ್ಮ ದಾವಣಗೆರೆಯಲ್ಲಿ ಎರಡು ದಿನಗಳ ಕಾಲ ಮಾಡುತ್ತಿದೆ ಎಂದರು.
ಅಸೋಸಿಯೇಷನ್‌ನ ವಿಜಯ ಕುಮಾರ್ ಜಾಧವ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ಶ್ರೀನಾಥ್ ಪಿ. ಅಗಡಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮದಲ್ಲಿ ನಡೆಯಿತು. ಹಿರಿಯ ಛಾಯಾಗ್ರಾಹಕರನ್ನು ಸನ್ಮಾನಿಸಲಾಯಿತು.ರಾಯಚೂರು ಜಿಲ್ಲಾ ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಸಂಘದ ಅಧ್ಯಕ್ಷ ರಾಜು ಇಲ್ಲೂರ್, ಶಿವಮೊಗ್ಗ ಜಿಲ್ಲೆಯ ಸಂಘದ ಉಪಾಧ್ಯಕ್ಷ ಮೋಹನ್, ಹುಬ್ಬಳ್ಳಿ, ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಸಂಘದ ಅಧ್ಯಕ್ಷ ಕಿರಣ ಬಾಕಳೆ, ದಾವಣಗೆರೆ ಛಾಯಾಗ್ರಾಹಕರ ಸಹಕಾರ ಸಂಘದ ಅಧ್ಯಕ್ಷ ಎಸ್.ಆರ್. ತಿಪ್ಪೇಸ್ವಾಮಿ, ದೇವನಗರಿ ಪ್ರೋ ಇಮೇಜಿನ ಖಜಾಂಚಿ ಎಸ್.ದುಗ್ಗಪ್ಪ, ಕೆ.ಪಿ.ನಾಗರಾಜ್, ಬಸವರಾಜ್, ಶಶಿಕುಮಾರ, ಅರುಣ, ಎನ್.ಕೆ.ಕೊಟ್ರೇಶ್, ರಾಜ್ಯದ ವಿವಿಧ ಜಿಲ್ಲೆಗಳ ಫೋಟೋ ವೀಡಿಯೋಗ್ರಾಫರ್ಸ್ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಇತರರು ಭಾಗವಹಿಸಿದ್ದರು.
- - -(ಬಾಕ್ಸ್) * ಎರಡ್ಮೂರು ಅಸೋಸಿಯೇಷನ್ ಸಲ್ಲದು, ಎಲ್ಲರೂ ಒಂದಾಗಿನಮ್ಮ ದಾವಣಗೆರೆಯಲ್ಲಿ ಫೋಟೋ, ವೀಡಿಯೋಗ್ರಫಿಯ ಎರಡು ಮೂರು ಅಸೋಸಿಯೇಷನ್‌ಗಳು ಆಗಿವೆ. ಹಾಗಾಗಬಾರದು. ಎಲ್ಲರೂ ಒಂದಾಗಿ ಕೆಲಸ ನಿರ್ವಹಿಸಬೇಕು. ಆಗ ಮಾತ್ರ ಏನಾದರೂ ಸೈಟು, ಮನೆ ಅಥವಾ ಯಾವುದೇ ರೀತಿಯ ಸಹಾಯ ಪಡೆಯಲು ಸಾಧ್ಯ. ನಿಮ್ಮ ಅಸೋಸಿಯೇಷನ್‌ನ ಎಲ್ಲ ದಾಖಲಾತಿಗಳೊಂದಿಗೆ ಸರಿಯಾದ ಆಡಿಟಿಂಗ್ ಇದ್ದು ಅರ್ಜಿ ಸಲ್ಲಿಸಿದರೆ, ದೂಡಾದಿಂದ ಸೈಟ್ ಕೊಡಬಹುದು. ನಮ್ಮಲ್ಲಿ ದಾನಿಗಳು ಇದ್ದಾರೆ. ಜೊತೆಗೆ ನಿಮ್ಮ ಸಂಘದ, ಅಸೋಸಿಯೇಷನ್ ಸದಸ್ಯರು ಒಬ್ಬೊಬ್ಬರು ಸಹಾ ಇಂತಿಷ್ಟು ಹಣ ಎಂದು ದೇಣಿಗೆ ನೀಡಿದರೆ ನಿಮ್ಮದೇ ಆದ ಕಟ್ಟಡ, ಸಮುದಾಯ ಭವನ ನಿರ್ಮಾಣ ಮಾಡಿಕೊಳ್ಳಲು ಸಾಧ್ಯ ಎಂದರು.
- - --5ಕೆಡಿವಿಜಿ32, 33:
ದಾವಣಗೆರೆಯಲ್ಲಿ ನಡೆದ ದೇವನಗರಿ ಪ್ರೊ ಇಮೇಜ್-2025, ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮವನ್ನು ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಉದ್ಘಾಟಿಸಿದರು. ಅಸೋಸಿಯೇಷನ್ ಅಧ್ಯಕ್ಷ ಶ್ರೀನಾಥ ಪಿ. ಅಗಡಿ, ವಿಜಯಕುಮಾರ್ ಜಾಧವ್ ಇತರರು ಇದ್ದರು.-5ಕೆಡಿವಿಜಿ34: ದಾವಣಗೆರೆಯಲ್ಲಿ ನಡೆಯುತ್ತಿರುವ ದೇವನಗರಿ ಪ್ರೊ ಇಮೇಜ್-2025, ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಪ್ರತಿಷ್ಠಿತ ಕಂಪನಿಗಳ ಕ್ಯಾಮರಾಗಳು, ಆಲ್ಬಂ ಡಿಜೈನ್ ಶಾಪ್, ಫ್ರೇಂ ಮಳಿಗೆಗಳನ್ನು ವೀಕ್ಷಿಸುತ್ತಿರುವ ಫೋಟೋ ಮತ್ತು ವೀಡಿಯೋಗ್ರಾಫರ್ಸ್. -5ಕೆಡಿವಿಜಿ35:
ದಾವಣಗೆರೆಯಲ್ಲಿ ನಡೆಯುತ್ತಿರುವ ದೇವನಗರಿ ಪ್ರೊ ಇಮೇಜ್-2025, ವಿಶ್ವ ಛಾಯಾಗ್ರಹಣ ದಿನ ಕಾರ್ಯಕ್ರಮದಲ್ಲಿ ನವೀನ ಮಾದರಿಯ ಆಲ್ಬಂ ಅನ್ನು ದಿನೇಶ ಶೆಟ್ಟಿ ವೀಕ್ಷಿಸಿದರು.