ಸಣ್‌ಸುದ್ದಿ........ಚಂದನ್‌ಗೆ ಕನ್ನಡ ರತ್ನ ರಾಜ್ಯ ಪ್ರದಾನ

| Published : Oct 08 2023, 12:02 AM IST

ಸಣ್‌ಸುದ್ದಿ........ಚಂದನ್‌ಗೆ ಕನ್ನಡ ರತ್ನ ರಾಜ್ಯ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ಚಂದನ್‌ಗೆ ಕನ್ನಡ ರತ್ನ ರಾಜ್ಯ ಪ್ರದಾನ
ಚಿಕ್ಕಬಳ್ಳಾಪುರ: ಗೌರಿಬಿದನೂರಿನ ಶಿಕ್ಷಕ ದಂಪತಿ ಕೆ. ಸುನಂದ ಹಾಗೂ ಕೆ.ಪೂಜಪ್ಪರವರ ಪುತ್ರ ಪಿ.ಎಸ್. ಚಂದನ್ ಗೆ ರಾಜ್ಯ ಮಟ್ಟದ ಕನ್ನಡ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ವಿಜಯನಗರ ಜಿಲ್ಲೆ ಹರಪನಹಳ್ಳಿಯ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ 2022-23ನೇ ಸಾಲಿನ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಗೌರಿಬಿದನೂರಿನ ಬಿ ಜಿ ಎಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ಎಸ್ಎಸ್ಎಲ್ ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ 125 ಕ್ಕೆ 121 ಅಂಕಗಳನ್ನು ಪಡೆದಿದ್ದ ಪಿ.ಎಸ್.ಚಂದನ್ ಪ್ರಶಸ್ತಿ ಹಾಗೂ ಸನ್ಮಾನ ಸ್ವೀಕರಿಸಿದ್ದಾರೆ. ಚಂದನ್ ಸಾಧನೆಗೆ ಪೋಷಕರು ಶಾಲೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ........................................... ಫೋಟೋ ಪ್ಯಾನೆಲ್‌ಗೆ ಬಳಸಿ ಸಿಕೆಬಿ-8..ಎಸ್ಸೆಸ್ಸೆಲ್ಸಿ ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಪಡೆದ ಗೌರಿಬಿದನೂರಿನ ಬಿಜಿಎಸ್ ಶಾಲೆಯ ಚಂದನ್‌ಗೆ ವಿಜಯನಗರ ಜಿಲ್ಲೆ ಹರಪನಹಳ್ಳಿಯ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆ ಕನ್ನಡ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿತು.