ರಾಜ್ಯ ಸರ್ಕಾರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ: ಸಂಸದ ಡಾ.ಕೆ.ಸುಧಾಕರ್ ಆರೋಪ

| Published : Sep 25 2025, 01:00 AM IST

ರಾಜ್ಯ ಸರ್ಕಾರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ: ಸಂಸದ ಡಾ.ಕೆ.ಸುಧಾಕರ್ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ನನಗೆ ಯಾವುದೇ ಧರ್ಮದ ಬಗ್ಗೆ ದ್ವೇಷ ಅಥವಾ ಕೀಳರಿಮೆ ಇಲ್ಲ. ಎಲ್ಲಾ ಧರ್ಮಗಳನ್ನು ಸಮವಾಗಿ ಕಾಣುತ್ತೇನೆ. ಆದರೆ ಯಾವುದೇ ಧರ್ಮಗಳ ಭಾವನೆಗೆ ಯಾರೂ ಧಕ್ಕೆ ತರುವ ಕೆಲಸ ಮಾಡಬಾರದು.

ಚಿಕ್ಕಬಳ್ಳಾಪುರ: ದಸರಾ ಉದ್ಘಾಟಕರಾಗಿ ಸಾಹಿತಿ ಬಾನು ಮುಷ್ತಾಕ್ ಆಯ್ಕೆ ಮಾಡಿ ಅವರಿಂದ ದಸರಾವನ್ನು ಉದ್ಘಾಟಿಸುವ ಮೂಲಕ ರಾಜ್ಯ ಸರ್ಕಾರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಆರೋಪಿಸಿದರು.

ನಗರದ ಸಂಸದರ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಯಾವುದೇ ಧರ್ಮದ ಬಗ್ಗೆ ದ್ವೇಷ ಅಥವಾ ಕೀಳರಿಮೆ ಇಲ್ಲ. ಎಲ್ಲಾ ಧರ್ಮಗಳನ್ನು ಸಮವಾಗಿ ಕಾಣುತ್ತೇನೆ. ಆದರೆ ಯಾವುದೇ ಧರ್ಮಗಳ ಭಾವನೆಗೆ ಯಾರೂ ಧಕ್ಕೆ ತರುವ ಕೆಲಸ ಮಾಡಬಾರದು ಎಂದರು.

ಮೆಕ್ಕಾ, ಮದೀನಾಗೆ ಆಹ್ವಾನಿಸುತ್ತಾರಾ?:

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮೆಕ್ಕಾ ಮದೀನಾಗೆ ಆಹ್ವಾನ ಪತ್ರಿಕೆ ಕೊಡ್ತಾರಾ? ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗ್ತಾರಾ? ಮೆಕ್ಕಾದ ಪ್ರಾರ್ಥನಾ ಸ್ಥಳಕ್ಕೆ ಸಿದ್ದರಾಮಯ್ಯ ಗೆ ಕಾಲಿಡಲು ಬಿಡುವುದಿಲ್ಲ. ದಸರಾ ಜಾತ್ಯತೀತತೆಯ ಪ್ರತೀಕವಲ್ಲ. ಹಿಂದೂ ಧಾರ್ಮಿಕ ಆಚರಣೆಯಾಗಿದೆ. ಸಿದ್ದರಾಮಯ್ಯ ನವರು ಅವರ ಮನೆಯಲ್ಲೇ ಕೇಳಲಿ, ಇದು ನಾಡಹಬ್ಬನಾ, ಧಾರ್ಮಿಕ ಹಬ್ಬನಾ ಅಂತಾ, ಅವರ ಮನೆಯವರೇ ಹೇಳುತ್ತಾರೆ ಧಾರ್ಮಿಕ ಹಬ್ಬ ಅಂತಾ ಎಂದರು.

ದಸರಾ ಉದ್ಘಾಟನೆಗೆ ಆಯ್ಕೆಯಾಗುವವರು ಸಂಪ್ರದಾಯವನ್ನು ಪಾಲಿಸಬೇಕು ಮತ್ತು ಚಾಮುಂಡಿ ಬೆಟ್ಟದ ಇತಿಹಾಸ, ಆರಾಧನೆ ಮತ್ತು ಉತ್ಸವಗಳ ಬಗ್ಗೆ ತಿಳಿವಳಿಕೆ ಹೊಂದಿರಬೇಕು. ಇವರಿಗೆಲ್ಲ ತಾಯಿ ಚಾಮುಂಡೇಶ್ವರಿ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಜಿ.ಪಂ.ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಖಾದಿಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ನಗರಸಭೆ ಅಧ್ಯಕ್ಷ ಎ.ಗಜೇಂದ್ರ,ಮಾಜಿ ಶಾಸಕ ಎಂ.ರಾಜಣ್ಣ, ತಾಪಂ ಮಾಜಿ ಅಧ್ಯಕ್ಷ ಚಿಕ್ಕಗರಿಗರೆಡ್ಡಿ, ಬಿ.ಎಂ.ರಾಮಸ್ವಾಮಿ. ಟಿಎಪಿಸಿಎಂಎಸ್ ಅಧ್ಯಕ್ಷ ಆವುಲಕೊಂಡರಾಯಪ್ಪ, ಮಾಜಿ ಅಧ್ಯಕ್ಷ ಮರಳಕುಂಟೆ ಕೃಷ್ಣಮೂರ್ತಿ ಮತ್ತಿತರರು ಇದ್ದರು.