ಸಾರಾಂಶ
ತಾಲೂಕಿನ ಮತ್ತಿಹಳ್ಳಿ ಕ್ರಾಸ್ ಬಳಿ ಬರ ಸಮೀಕ್ಷೆ ಪ್ರವಾಸದ ನಿಮಿತ್ತ ಬೊಮ್ಮನಗೌಡರ ಹೊಲದಲ್ಲಿ ಬೆಳೆ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.ಬ್ಯಾಂಕಿನವರು ರೈತರಿಗೆ ಸಾಲ ಮರುಪಾವತಿ ಮಾಡುವಂತೆ ಕಿರುಕುಳ ಕೊಡುತ್ತಿದ್ದಾರೆ ಎಂದು ದೂರಿದರು.
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ರಾಜ್ಯದಲ್ಲಿ ಬರಗಾಲದಿಂದ ರೈತರು ತತ್ತರಿಸಿದ್ದು, ಕೂಡಲೇ ರೈತರಿಗೆ ಬೆಳೆ ಹಾನಿ ಪರಿಹಾರದ ಹಣವನ್ನು ಬಿಡುಗಡೆ ಮಾಡಬೇಕೆಂದು ಹಗರಿಬೊಮ್ಮನಹಳ್ಳಿ ಶಾಸಕ ಕೆ. ನೇಮರಾಜ್ ನಾಯ್ಕ್ ಸರ್ಕಾರಕ್ಕೆ ಒತ್ತಾಯಿಸಿದರು.ತಾಲೂಕಿನ ಮತ್ತಿಹಳ್ಳಿ ಕ್ರಾಸ್ ಬಳಿ ಬರ ಸಮೀಕ್ಷೆ ಪ್ರವಾಸದ ನಿಮಿತ್ತ ಬೊಮ್ಮನಗೌಡರ ಹೊಲದಲ್ಲಿ ಬೆಳೆ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಬ್ಯಾಂಕಿನವರು ರೈತರಿಗೆ ಸಾಲ ಮರುಪಾವತಿ ಮಾಡುವಂತೆ ಕಿರುಕುಳ ಕೊಡುತ್ತಿದ್ದಾರೆ ಎಂದು ದೂರಿದರು.ಧರ್ಮಪರಿಷತ್ ಕಾರ್ಯದರ್ಶಿ ಕೂಲಹಳ್ಳಿಯ ಪಟ್ಟದ ಚಿನ್ಮಯ ಸ್ವಾಮೀಜಿ ಮಾತನಾಡಿದರು. ಧರ್ಮಪರಿಷತ್ ಅಧ್ಯಕ್ಷ ನಂದಿಪುರದ ಮಹೇಶ್ವರ ಸ್ವಾಮೀಜಿ, ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಚಾನುಕೋಟೆ ಸ್ವಾಮೀಜಿ, ಬೆಣ್ಣಿಹಳ್ಳಿ ಸ್ವಾಮೀಜಿ, ಪಂಚಾಕ್ಷರ ಸ್ವಾಮೀಜಿ, ಪ್ರಶಾಂತ ಶಿವಾಚಾರ್ಯ ಸ್ವಾಮೀಜಿ, ಕಲ್ಯಾಣ ಸ್ವಾಮೀಜಿ, ಮುಖಂಡ ಎಂ.ಎಂ.ಜೆ. ಹರ್ಷವರ್ಧನ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ. ಕೊಟ್ರೇಶ್, ಮಲ್ಲಿಕಾರ್ಜುನ, ಸಿದ್ದಣ್ಣ, ಅಂಬಣ್ಣ ನಾಯ್ಕ್, ಬೆಣ್ಣಿಹಳ್ಳಿ ಜಾಕೀರ್ ಸಾಬ್, ಶಿರಹಟ್ಟಿ ವಿಜಯ್ ಕುಮಾರ್, ಕರಿಬಸವನಗೌಡ ಮತ್ತಿತರರು ಇದ್ದರು.