ರಮೇಶ ಜಿಗಜಿಣಗಿ ಸಂಸದರಾದ ಮೇಲೆ 9 ರಾಷ್ಟ್ರೀಯ ಹೆದ್ದಾರಿಗಳು ವಿಜಯಪುರ ಜಿಲ್ಲೆಗೆ ಮಂಜೂರು

| Published : Aug 09 2024, 12:49 AM IST / Updated: Aug 09 2024, 01:30 PM IST

Ramesh Jigajinagi
ರಮೇಶ ಜಿಗಜಿಣಗಿ ಸಂಸದರಾದ ಮೇಲೆ 9 ರಾಷ್ಟ್ರೀಯ ಹೆದ್ದಾರಿಗಳು ವಿಜಯಪುರ ಜಿಲ್ಲೆಗೆ ಮಂಜೂರು
Share this Article
  • FB
  • TW
  • Linkdin
  • Email

ಸಾರಾಂಶ

ಸಂಸದ ರಮೇಶ ಜಿಗಜಿಣಗಿ ಅವರು ಸತತ ಪ್ರಯತ್ನದಿಂದ ಲಿಂಗಸೂರು-ಶಿರಾಡೋಣ ಹಾಗೂ ಪಂಡರಪುರ-ಗಾಣಗಾಪುರ ರಾಷ್ಟ್ರೀಯ ಹೆದ್ದಾರಿ ಕ್ರಿಯಾಯೋಜನೆ ತಯಾರಾಗಿ ಕೇಂದ್ರದ ಸಾರಿಗೆ ಸಚಿವಾಲಯದ ಮುಂದೆ ಇದ್ದು, 2018ರಲ್ಲಿ ತಾತ್ವಿಕ ಅನುಮೋದನೆ ಪಡೆದುಕೊಂಡಿದೆ.

ಖಾಜು ಸಿಂಗೆಗೋಳ

 ಇಂಡಿ :  ರಮೇಶ ಜಿಗಜಿಣಗಿ ಅವರು ಸಂಸದರಾದ ಮೇಲೆ 9 ರಾಷ್ಟ್ರೀಯ ಹೆದ್ದಾರಿಗಳು ವಿಜಯಪುರ ಜಿಲ್ಲೆಗೆ ಬಂದಿವೆ. ಅದರಲ್ಲೂ ಅಕ್ಕಲಕೋಟ-ಇಂಡಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಇಂಡಿ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಸದ್ಯ ಅದು ರಸ್ತೆ ನಿರ್ಮಾಣದ ಕಾಮಗಾರಿ ಆರಂಭದ ಹಂತದಲ್ಲಿದೆ. ಆದರೆ, ಸಂಸದ ರಮೇಶ ಜಿಗಜಿಣಗಿ ಅವರು ಸತತ ಪ್ರಯತ್ನದಿಂದ ಲಿಂಗಸೂರು-ಶಿರಾಡೋಣ ಹಾಗೂ ಪಂಡರಪುರ-ಗಾಣಗಾಪುರ ರಾಷ್ಟ್ರೀಯ ಹೆದ್ದಾರಿ ಕ್ರಿಯಾಯೋಜನೆ ತಯಾರಾಗಿ ಕೇಂದ್ರದ ಸಾರಿಗೆ ಸಚಿವಾಲಯದ ಮುಂದೆ ಇದ್ದು, 2018ರಲ್ಲಿ ತಾತ್ವಿಕ ಅನುಮೋದನೆ ಪಡೆದುಕೊಂಡಿದೆ.

2020ರಿಂದಲೂ ಈ ಹೆದ್ದಾರಿಗಳು ನೀತಿ ಆಯೋಗದ ಮುಂದೆ ಇದ್ದಿದ್ದು, ನೀತಿ ಆಯೋಗ ಈ ಎರಡು ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮಾರ್ಪಡಿಸಬೇಕಿದೆ. ಲೋಕಸಭೆ ಅಧಿವೇಶನದಲ್ಲಿ ಈ ಎರಡು ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವವನ್ನು ನೀತಿ ಆಯೋಗ ಮುಂದೆ ಮಂಡಿಸಿ ಶಿರಾಡೋಣ-ಲಿಂಗಸೂರು ಹಾಗೂ ಪಂಡರಪುರ-ಗಾಣಗಾಪುರ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ನಿರ್ಮಾಣ ಮಾಡಿದರೆ ಹಲವು ಗ್ರಾಮಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ.

2018 ರಿಂದ ಲಿಂಗಸೂರು-ಶಿರಾಡೋಣ-ಪಂಢರಪುರ-ಗಾಣಗಾಪುರ ರಾಜ್ಯ ರಸ್ತೆ ಮೇಲ್ದರ್ಜೆಗೆರಿಸಲು ಸತತ ಪ್ರಯತ್ನದಲ್ಲಿರುವ ರಸ್ತೆ 2020 ರಿಂದ ಕೇಂದ್ರದ ನೀತಿ ಆಯೋಗದ ಮುಂದಿದೆ. ಮೂರು ವರ್ಷದಿಂದಲೂ ನೀತಿ ಆಯೋಗ ಈ ರಸ್ತೆಗಳಿಗೆ ಗ್ರೀನ್‌ಸಿಗ್ನಲ್‌ ನೀಡುತ್ತಿಲ್ಲ. ಹೀಗಾಗಿ ಈ ಎರಡು ರಸ್ತೆಗಳು ನನೆಗುದಿಗೆ ಬಿದ್ದಿರುವುದರಿಂದ ಎಲ್ಲ ರಂಗದಲ್ಲಿಯೂ ಹಿಂದುಳಿದ ಇಂಡಿ ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮಗಳ ಗ್ರಾಮಸ್ಥರಿಗೆ ತೊಂದರೆಯಾಗಿದೆ.

ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ತೆರಳಲು ಭಕ್ತರ ಹರಸಾಹಸ:

ಲಿಂಗಸಗೂರ-ಶಿರಾಢೋಣ ಮತ್ತು ಪಂಢರಪುರ-ಗಾಣಗಾಪುರ ರಾಜ್ಯ ಹೆದ್ದಾರಿಗಳು ಐತಿಹಾಸಿಕ ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಹೋಗುವ ರಸ್ತೆಗಳಾಗಿವೆ. ಶ್ರೀ ವಿಠ್ಠಲ ರುಕ್ಮಿಣಿ ಸಾನ್ನಿಧ್ಯದ ಪಂಢರಪುರ ಹಾಗೂ ದತ್ತಾತ್ರೇಯ ಸಾನ್ನಿಧ್ಯದ ಗಾಣಗಾಪುರ ಪ್ರಸಿದ್ಧ ಯಾತ್ರಾ ಸ್ಥಳವಾಗಿದ್ದು, ವರ್ಷದ ಪ್ರತಿ ನಿತ್ಯ ಸಾವಿರಾರು ಜನ ಭಕ್ತರು ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶಗಳಿಂದ ದರ್ಶನಕ್ಕೆ ಆಗಮಿಸುತ್ತಿದ್ದು, ಭಕ್ತರ ಪ್ರವಾಸಕ್ಕಾಗಿ ಸರಿಯಾದ ರಸ್ತೆ ಇರದೇ ಇರುವುದರಿಂದ ತುಂಬಾ ತೊಂದರೆ ಅನುಭವಿಸಬೇಕಿದೆ.

ಪಂಢರಪುರ-ಗಾಣಗಾಪುರ ಮತ್ತು ಲಿಂಗಸಗೂರ-ಶಿರಾಢೋಣ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೆರಿಸಲು 2018ರಲ್ಲಿ ಈಗಾಗಲೇ ಈ ರಸ್ತೆಗಳು ಮೇಲ್ದರ್ಜೆಗೆರಿಸಲು ತಾತ್ವಿಕ ಅನುಮೊದನೆಗೊಂಡು ಕೇಂದ್ರ ಸರ್ಕಾರದ ನೀತಿ ಆಯೋಗ ಮುಂದೆ ಇರುವುದರಿಂದ ಕೂಡಲೇ ಕ್ರಮಕೈಗೊಂಡು ಮೇಲ್ದರ್ಜೆಗೆರಿಸುವುದು ಅಗತ್ಯವಾಗಿದೆ. 

ಈ ಎರಡು ರಸ್ತೆಗಳನ್ನು ಮೇಲ್ದರ್ಜೆಗೆರಿಸಲು ಅಗತ್ಯವಾದ ಭೂಮಿ ಲಭ್ಯತೆ ಇರುತ್ತದೆ. ಆದರೆ, ಇದುವರೆಗೂ ಮೇಲ್ದರ್ಜೆಗೆರಿಸಲು ಕೇಂದ್ರ ಸರ್ಕಾರ ಆಸಕ್ತಿ ವಹಿಸುತ್ತಿಲ್ಲ ಎಂಬ ಆರೋಪ ಸಾರ್ವಜನಿಕರದ್ದು.ಈ ರಸ್ತೆಗಳು ಮೇಲ್ದರ್ಜೆಗೆರಿಸುವುದರಿಂದ ಲಕ್ಷಾಂತರ ಭಕ್ತಾದಿಗಳಿಗೆ ಅನಕೂಲವಾಗುತ್ತದೆ. 

ಈ ಭಾಗದಲ್ಲಿರುವ ಪ್ರಮುಖ ವ್ಯಾಪಾರಿ ಕೇಂದ್ರ ಚಡಚಣ ಹಾಗೂ ವಿಶ್ವಕ್ಕೆ ಪರಿಚಯ ನೀಡಿದ ಇಂಡಿ ಲಿಂಬೆ, ಆಲಮೇಲ, ಅಪಜಲಪುರ, ತಾಂಬಾ, ದೇವರಹಿಪ್ಪರಗಿ, ತಾಳಿಕೋಟೆ ಇಂತಹ ಪ್ರಮುಖ ವ್ಯಾಪಾರಿ ಕೇಂದ್ರಗಳು ಈ ಪ್ರಮುಖ ರಸ್ತೆಗಳಿಗೆ ಹೊಂದಿಕೊಂಡಿರುತ್ತವೆ. ಅಲ್ಲದೇ ಧಾರ್ಮಿಕ ಕ್ಷೇತ್ರಗಳಾದ ವಿಠ್ಠಲಮಂದಿರ ಪಂಢರಪುರ, ಗಾಣಗಾಪುರದ ದತ್ತಾತ್ರೇಯ, ಘತ್ತರಗಿ ಭಾಗಮ್ಮ ದೇವಾಲಯ, ದೇವರಹಿಪ್ಪರಗಿ ರಾವುತರಾಯ ದೇವಾಲಯಗಳು ಈ ಭಾಗದಲ್ಲಿದ್ದು ಲಕ್ಷಾಂತರ ಭಕ್ತರು ವರ್ಷವಿಡಿ ದರ್ಶನಕ್ಕೆ ಆಗಮಿಸುತ್ತಾರೆ. ಈ ಎರಡು ರಾಜ್ಯ ಹೆದ್ದಾರಿಗಳು, ರಾಷ್ಟ್ರೀಯ ಹೆದ್ದಾರಿಗಳಾಗಿ ಮೇಲ್ದರ್ಜೆಗೆರಿದರೇ ಧಾರ್ಮಿಕ ಕ್ಷೇತ್ರಗಳಿಗೂ ಹಾಗೂ ವ್ಯಾಪಾರಿ ಕೇಂದ್ರಗಳಿಗೆ ಸಂಚರಿಸಲು ಅನುಕೂಲವಾಗುತ್ತದೆ.

ಲಿಂಗಸೂರು-ಶಿರಾಡೋಣ ರಾಜ್ಯ ಹೆದ್ದಾರಿಗಳು ಮೇಲ್ದರ್ಜೆಗೆ ಏರಿಸಲು ಪ್ರಯತ್ನಿಸಲಾಗುತ್ತದೆ. ಈ ರಸ್ತೆಗಳು ಮೇಲ್ದರ್ಜೆಗೆರಿಸುವ ಪ್ರಸ್ತಾವನೆಗಳು ಕೇಂದ್ರದ ನೀತಿ ಆಯೋಗದ ಮುಂದಿವೆ. ತಾಂತ್ರಿಕ ತೊಂದರೆಯಿಂದ ಇಲ್ಲಿಯವರೆಗೆ ಆಗಿರುವುದಿಲ್ಲ. ಶೀಘ್ರದಲ್ಲಿಯೇ ಈ ಎರಡು ರಸ್ತೆಗಳು ಮೇಲ್ದರ್ಜೆರಿಸಲು ಪ್ರಯತ್ನಿಸಲಾಗುತ್ತದೆ. ಈ ಎರಡು ರಸ್ತೆಗಳು ಸಹ ಹೆದ್ದಾರಿಗಳನ್ನಾಗಿ ಮಾಡಲು ಶ್ರಮಿಸುತ್ತೇನೆ.

-ರಮೇಶ ಜಿಗಜಿಣಗಿ, ಸಂಸದರು ವಿಜಯಪುರ.

ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ಹಾಗೂ ನಿರ್ವಹಣೆಯ ಕುರಿತು ಈಗಾಗಲೇ ಸದನದಲ್ಲಿ ಚರ್ಚಿಸಿ ಸರ್ಕಾರದ ಗಮನ ಸೆಳೆದಿದ್ದೇನೆ. ಪಂಡರಪುರ-ಗಾಣಗಾಪುರ-ಲಿಂಗಸೂರು-ಶಿರಾಡೋನ ಈ ಎರಡು ರಸ್ತೆಗಳು ಧಾರ್ಮಿಕ ಕ್ಷೇತ್ರಗಳಿಗೆ ಹಾಗೂ ವ್ಯಾಪಾರ ವಹಿವಾಟಕ್ಕೆ ತೆರಳಲು ಅನುಕೂಲವಾಗಿವೆ. ಈ ರಸ್ತೆಗಳು ಮೇಲ್ದರ್ಜೆಗೆರಿಸುವುದರಿಂದ ಲಕ್ಷಾಂತರ ಭಕ್ತಾದಿಗಳಿಗೆ ಅನುಕೂಲವಾಗುತ್ತದೆ. ಕೂಡಲೇ ಕೇಂದ್ರದ ನೀತಿ ಆಯೋಗದ ಮುಂದಿರುವ ಈ ಎರಡು ರಾಜ್ಯ ಹೆದ್ದಾರಿಗಳು ಮೇಲ್ದರ್ಜೆಗೆರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಕೇಂದ್ರ ಹೆದ್ದಾರಿ ಸಚಿವ ನಿತೀನ ಗಡ್ಕರಿ ಅವರನ್ನು ಅಭಿನಂದಿಸುತ್ತೇನೆ. ಈ ಎರಡು ರಸ್ಗೆಗಳು ಸಹ ಮೇಲ್ದರ್ಜೆರಿಸಲು ಕ್ರಮ ಕೈಗೊಳ್ಳಬೇಕು.

-ಯಶವಂತರಾಯಗೌಡ ಪಾಟೀಲ, ಶಾಸಕರು, ಇಂಡಿ.

ಪಂಢರಪುರ-ಗಾಣಗಾಪುರ ಮತ್ತು ಲಿಂಗಸಗೂರ-ಶಿರಾಢೋಣ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ ಮೇಲ್ದರ್ಜೆಗೆರಿದರೇ ಧಾರ್ಮಿಕ ಕ್ಷೇತ್ರಗಳಿಗೂ ಹಾಗೂ ವ್ಯಾಪಾರಿ ಕೇಂದ್ರಗಳಿಗೆ ಸಂಚರಿಸಲು ಅನುಕೂಲವಾಗುತ್ತದೆಂದು ಸಂಸದರು ಮೇಲ್ದರ್ಜೆಗೆರಿಸಲು ಪ್ರಯತ್ನಿಸಿದ್ದಾರೆ. ಸಂಸದ ರಮೇಶ ಜಿಗಜಿಣಗಿಯವರು ಪ್ರಚಾರ ಪ್ರಿಯರಲ್ಲ. ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳು ಮಾಡಿದ್ದಾರೆ. ಹೇಳಿ ಮಾಡವರಲ್ಲ, ಹೇಳದೇ ಮಾಡುವ ಗುಣ ಸಂಸದರದ್ದು. ಹೀಗಾಗಿ ನಮ್ಮ ಜನ 7 ಬಾರಿ ಗೆಲ್ಲಿಸಿದ್ದಾರೆ. ಮುಂಬರುವ ದಿನದಲ್ಲಿ ಈ ಎರಡು ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸುವರು ಎನ್ನುವ ವಿಶ್ವಾಸವಿದೆ.

-ರವಿ ವಗ್ಗೆ(ಭುಯ್ಯಾರ), ಬಿಜೆಪಿ ಎಸ್ಟಿ ಮೋರ್ಚಾದ ಜಿಲ್ಲಾಧ್ಯಕ್ಷರು.

ಸಂಸದ ರಮೇಶ ಜಿಗಜಿಣಗಿ ಅವರು ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿದ್ದಾರೆ. ಸಂಸದರಾದ ಮೇಲೆ ಜಿಲ್ಲೆಯಲ್ಲಿ 9 ರಾಷ್ಟ್ರೀಯ ಹೆದ್ದಾರಿಗಳು ನಿರ್ಮಾಣವಾಗಿವೆ. ಶಿರಾಡೋಣ ಲಿಂಗಸೂರು, ಗಾಣಗಾಪೂರ, ಪಂಡರಪೂರ ರಸ್ತೆಯು ಮೇಲ್ದರ್ಜೆಗೆರಿಸಿ, ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತಾರೆ.

-ಅರುಣ ಶಹಾಪುರ, ಮಾಜಿ ಎಂಎಲ್ಸಿ.