ರಾಜ್ಯ ಕಿರಿಯರ ಕ್ರೀಡಾಕೂಟ: ದ.ಕ. ಜಿಲ್ಲೆ ಚಾಂಪಿಯನ್

| Published : Aug 26 2025, 02:00 AM IST

ಸಾರಾಂಶ

ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಸೋಮವಾರ ಸಂಜೆ ಬಹುಮಾನಗಳನ್ನು ವಿತರಿಸಿದರು. ಈ ಸಂದರ್ಭ ಜಿಲ್ಲಾ ಅಸೋಸಿಯೇಶನ್ ಅಧ್ಯಕ್ಷ ಹರಿಪ್ರಸಾದ್ ರೈ, ಕ್ರೀಡಾಕೂಟದ ಸಂಘಟನಾ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಮತ್ತಿತರರು ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲ ಕ್ರೀಡಾಪಟುಗಳನ್ನು ಅಭಿನಂದಿಸಿ ಶುಭ ಹಾರೈಸಿದರು.

ಕನ್ನಡಪ್ರಭ ವಾರ್ತೆ ಉಡುಪಿಕರ್ನಾಟಕ ರಾಜ್ಯ ಅಥ್ಲೆಟಿಕ್ ಅಸೋಸಿಯೇಷನ್ ಮತ್ತು ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಸಹಯೋಗದಲ್ಲಿ ನಗರದ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಮೂರು ದಿನ ನಡೆದ ಕರ್ನಾಟಕ ರಾಜ್ಯ ಕಿರಿಯರ ಮತ್ತು 23ರ ವಯೋಮಿತಿಯ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಚಾಂಪಿಯನ್ ಶಿಪ್ ಗೆದ್ದುಕೊಂಡಿದೆ.ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಸೋಮವಾರ ಸಂಜೆ ಬಹುಮಾನಗಳನ್ನು ವಿತರಿಸಿದರು. ಈ ಸಂದರ್ಭ ಜಿಲ್ಲಾ ಅಸೋಸಿಯೇಶನ್ ಅಧ್ಯಕ್ಷ ಹರಿಪ್ರಸಾದ್ ರೈ, ಕ್ರೀಡಾಕೂಟದ ಸಂಘಟನಾ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಮತ್ತಿತರರು ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲ ಕ್ರೀಡಾಪಟುಗಳನ್ನು ಅಭಿನಂದಿಸಿ ಶುಭ ಹಾರೈಸಿದರು.

ಫಲಿತಾಂಶ ಹೀಗಿದೆ:

ಕ್ರೀಡಾಕೂಟದ ಒಟ್ಟು ಸಮಗ್ರ ಪ್ರಶಸ್ತಿಯನ್ನು ದ.ಕ. ಜಿಲ್ಲಾ ಕ್ರೀಡಾಪಟುಗಳು ಗೆದ್ದುಕೊಂಡರೆ, ಬೆಂಗಳೂರು ದ್ವಿತೀಯ ಸಮಗ್ರ ಪ್ರಶಸ್ತಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.ತಂಡ ಪ್ರಶಸ್ತಿಗಳು

14 ವರ್ಷ ಪ್ರಥಮ: ದಕ (43 ಅಂಕ), ದ್ವಿತೀಯ: ಶಿವಮೊಗ್ಗ (24), 15 ವರ್ಷ ಪ್ರಥಮ: ದ.ಕ. (77), ದ್ವಿತೀಯ: ಬೆಂಗಳೂರು (66). 18 ವರ್ಷ ಪ್ರಥಮ: ದ.ಕ. (87), ದ್ವಿತೀಯ: ಉಡುಪಿ (80). 20 ವರ್ಷ ಪ್ರಥಮ: ದ.ಕ. (148), ದ್ವಿತೀಯ: ಬೆಂಗಳೂರು (120). 23 ವರ್ಷ ಪ್ರಥಮ: ಬೆಂಗಳೂರು (127), ದ್ವಿತೀಯ ದ.ಕ. (100).ಬೆಸ್ಟ್ ಅಥ್ಲೀಟ್‌ ಪ್ರಶಸ್ತಿ:

ಪುರುಷರ ವಿಭಾಗ: 23 ವರ್ಷ- ಪ್ರಸನ್ನಕುಮಾರ್, ಧಾರವಾಡ- 200 ಮೀ (1021 ಅಂಕ).

20 ವರ್ಷ- ನಿತಿನ್ ಗೌಡ, ಬೆಂಗಳೂರು- 400 ಮೀ. (981).

18 ವರ್ಷ- ಚಿರಂತ್ ಮೈಸೂರು- 200 ಮೀ. (1012).

16 ವರ್ಷ- ಶರತ್ ಕೆ.ಜೆ., ಶಿವಮೊಗ್ಗ - 600 ಮೀ. (802).

14 ವರ್ಷ- ಆದರ್ಶ್ ಮೈಸೂರು- ಟ್ರೈಥ್ಲಾನ್.ಮಹಿಳ‍ೆಯ ವಿಭಾಗ:

23 ವರ್ಷ- ಸಿಂಚನ ಎಂ.ಎಸ್., ದ.ಕ. - ಲಾಂಗ್‌ ಜಂಪ್ (1003).

20 ವರ್ಷ- ಸ್ತುತಿ ಪಿ. ಶೆಟ್ಟಿ, ಉಡುಪಿ- 100 ಮೀ. (980).

18 ವರ್ಷ- ಸುಚಿತ್ರಾ ಎಸ್., ಬೆಂಗಳೂರು- 100 ಮೀ. (962).

16 ವರ್ಷ- ಶಮತಾ ಮಿಕ, ಬೆಂಗಳೂರು - 600 ಮೀ. (961).

14 ವರ್ಷ- ಅದ್ವಿಕಾ ಕೆ.ಪಿ., ದ.ಕ. - ಟ್ರೈಥ್ಲಾನ್