ಸಾರಾಂಶ
ಜಗಳೂರಿನ ಜೆ.ಎಂ. ಇಮಾಂ ಟ್ರಸ್ಟ್, ಜೆ.ಎಂ. ಇಮಾಂ ಸ್ಮಾರಕ ಶಾಲೆ ವತಿಯಿಂದ ಜ.4ರಂದು ಪಟ್ಟಣದ ಜೆ.ಎಂ. ಇಮಾಂ ಶಾಲೆ ಆವರಣದ ಸಂತ ಶಿಶುನಾಳ ಶರೀಫ್ ಸಾಹೇಬರ ರಂಗ ಮಂದಿರದಲ್ಲಿ 6ನೇ ವರ್ಷದ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಜೆ.ಎಂ. ಇಮಾಂ ಪ್ರಶಸ್ತಿ ಸಲಹಾ ಸಮಿತಿ ಅಧ್ಯಕ್ಷ ಎನ್.ಟಿ.ಎರ್ರಿಸ್ವಾಮಿ ದಾವಣಗೆರೆಯಲ್ಲಿ ಹೇಳಿದ್ದಾರೆ.
- ಡಾ.ಬಂಜಗೆರೆ ಜಯಪ್ರಕಾಶ್‌ರಿಂದ ಉದ್ಘಾಟನೆ: ಎರ್ರಿಸ್ವಾಮಿ - - - ದಾವಣಗೆರೆ: ಜಗಳೂರಿನ ಜೆ.ಎಂ. ಇಮಾಂ ಟ್ರಸ್ಟ್, ಜೆ.ಎಂ. ಇಮಾಂ ಸ್ಮಾರಕ ಶಾಲೆ ವತಿಯಿಂದ ಜ.4ರಂದು ಪಟ್ಟಣದ ಜೆ.ಎಂ. ಇಮಾಂ ಶಾಲೆ ಆವರಣದ ಸಂತ ಶಿಶುನಾಳ ಶರೀಫ್ ಸಾಹೇಬರ ರಂಗ ಮಂದಿರದಲ್ಲಿ 6ನೇ ವರ್ಷದ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಜೆ.ಎಂ. ಇಮಾಂ ಪ್ರಶಸ್ತಿ ಸಲಹಾ ಸಮಿತಿ ಅಧ್ಯಕ್ಷ ಎನ್.ಟಿ.ಎರ್ರಿಸ್ವಾಮಿ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ 4 ಗಂಟೆಗೆ ಜನಪರ ಹೋರಾಟಗಾರ ಡಾ.ಬಂಜಗೆರೆ ಜಯಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸುವರು. ಟ್ರಸ್ಟ್ ಗೌರವಾಧ್ಯಕ್ಷ ಜೆ.ಕೆ.ಹುಸೇನ್ ಮಿಯ್ಯಾ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಗಳೂರು ಶಾಸಕ ಚಿಮ್ಮನಹಟ್ಟಿ ಬಿ.ದೇವೇಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಈ.ಹಾಲಮೂರ್ತಿ, ಜಗಳೂರು ತಾಲೂಕಿನ ರಾಜ್ಯ ಪಿಂಜಾರ್, ನಧಾಪ್ ಸಂಘದ ಅಧ್ಯಕ್ಷ ಜಲೀಲ್ ಸಾಬ್, ಉದ್ಯಮಿ ಎಚ್.ಇ. ದಾದಾ ಖಲಂದರ್, ಟ್ರಸ್ಟಿನ ಅಧ್ಯಕ್ಷ ಎಸ್.ಎಚ್. ಮಸ್ತಾನ್ ಸಾಬ್, ಕಾರ್ಯದರ್ಶಿ ಜೆ.ಬಿ.ಖಲೀಲ್ ಸಾಬ್, ಖಜಾಂಚಿ ಜೆ.ಕೆ.ಮಹಮ್ಮದ್ ಶರೀಫ್ ಭಾಗವಹಿಸುವರು ಎಂದು ಮಾಹಿತಿ ನೀಡಿದರು.ಸಮಾರಂಭದಲ್ಲಿ 2023- 2024ನೇ ಸಾಲಿನ ಎಸ್.ಎಸ್.ಎಲ್.ಸಿ.ಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ.ದಾದಾಪೀರ್ ನವಿಲೇಹಾಳ್, ಎಸ್.ಹಾಲಪ್ಪ, ಖಾಸಿಂ ಸಾಬ್ ಇದ್ದರು.- - - -30ಕೆಡಿವಿಜಿ35: