ಕಡೂರು:ಬೆಂಗಳೂರಿನಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಕರ್ನಾಟಕದಿಂದ ನಡೆದ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲೆ ಪ್ರತಿನಿಧಿಸಿದ ಕಡೂರಿನ ಜ್ಞಾನಭಾರತಿ ಶಾಲೆ ಕಬ್ಸ್ ಅಂಡ್ ಬುಲ್ ಬುಲ್ ಮಕ್ಕಳಾದ ಮೌರ್ಯ, ಅನನ್ಯ ಮತ್ತು ತಂಡಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್ ಬುಧವಾರ ರಾಜ್ಯಮಟ್ಟದ ಪ್ರಶಸ್ತಿ ಪತ್ರ ನೀಡಿ ಗೌರವಿಸಿದ್ದಾರೆ ಎಂದು ಜ್ಞಾನಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಶರತ್ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಕಡೂರು ಸ್ಕೌಟ್ ಅಂಡ್ ಗೈಡ್ಸ್ ಗೆ ನಮ್ಮ ಶಾಲೆ ನಾಲ್ಕು ಮಕ್ಕಳು ಮತ್ತು ಹೈವೇ ಶಾಲೆ 8 ವಿದ್ಯಾರ್ಥಿಗಳು ಆಯ್ಕೆ ಯಾಗಿದ್ದಾರೆ. ಫೆಬ್ರವರಿಯಲ್ಲಿ ನಡೆದ ಪರೀಕ್ಷೆಯಲ್ಲಿ ಪಾಸಾಗಿ ಆಯ್ಕೆ ಯಾಗಿದ್ದಾರೆ ಎಂದರು.ನಿರಂತರ ಕಾರ್ಯಕ್ರಮ ನಡೆಯುತ್ತಿರುವ ಸ್ಕೌಟ್ಸ್ ಅಂಡ್ ಗೈಡ್ಸ್ ನ ಕಡೂರು ಘಟಕವನ್ನು ರಾಜ್ಯ ಸರಕಾರ ಗುರುತಿಸಿ ಗೌರವಿಸುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ವಿವಿಧ ಶಾಲೆಗಳಲ್ಲಿ ಸ್ಕೌಟ್ಸ್ ಘಟಕ ಆರಂಭಿಸಲಾಗುವುದು ಎಂದರು.
ಶಾಲೆ ಪ್ರಧಾನ ಕಾರ್ಯದರ್ಶಿ ಭರತ್, ಉಪಾಧ್ಯಕ್ಷರಾದ ಕೃಷ್ಣಮೂರ್ತಿ, ಪ್ರಕಾಶ್ ಮೂರ್ತಿ, ಸಹಕಾರ್ಯದರ್ಶಿ ವಸಂತ್ ಕುಮಾರ್, ಜ್ಞಾನಭಾರತಿ ಶಾಲೆಯ ಪ್ರಾಂಶುಪಾಲೆ ರಜಿಯಾ ಬಾನು ಉಪಸ್ಥಿತಿತರಿದ್ದರು.15ಕೆಕೆಡಿಯು2. ಬೆಂಗಳೂರಿನಲ್ಲಿ ಲೋಕಭವನದಲ್ಲಿ ನಡೆದ ಸ್ಕೌಟ್ಸ್ ಅಂಡ್ ಗೈಡ್ಸ್ ನ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವರಾದ ಯು.ಟಿ. ಖಾದರ್ ರವರು ಕಡೂರಿನ ಜ್ಞಾನಭಾರತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.