ಸಾರಾಂಶ
ಮಡಿಕೇರಿ: ಬೆಂಗಳೂರಿನ ಶಿಕ್ಷಣ ಜ್ಞಾನ ಮಾಸ ಪತ್ರಿಕೆಯ 21ನೇ ವಾರ್ಷಿಕೋತ್ಸವದ ಪ್ರಯುಕ್ತ ನೀಡಲಾಗುವ ರಾಜ್ಯ ಮಟ್ಟದ ಅತ್ಯುತ್ತಮ ಪ್ರಶಸ್ತಿಗೆ ಆಯ್ಕೆಯಾದ ಕೊಡಗು ಜಿಲ್ಲೆಯ ಶಿಕ್ಷಕರಿಗೆ ಶಿವಮೊಗ್ಗದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾಲೇಜು ವಿಭಾಗದಲ್ಲಿ ಮಡಿಕೇರಿಯ ಸಂತ ಜೋಸೇಫರ ಕಾಲೇಜಿನ ಉಪನ್ಯಾಸಕಿ ಕೆ.ಕೆ. ಜಯಲಕ್ಷ್ಮೀ ಕುಮಾರ್ ಅವರಿಗೆ ಜ್ಞಾನ ಸಂಜೀವಿನಿ ಪ್ರಶಸ್ತಿ, ಅತ್ಯುತ್ತಮ ಶಾಲೆಯಾಗಿ ಮಡಿಕೇರಿ ತಾಲೂಕಿನ ಹಾಕತ್ತೂರು ಸರ್ಕಾರಿ ಪ್ರೌಢಶಾಲೆ ಆಯ್ಕೆಯಾಗಿದ್ದು ಶಾಲೆಯ ಮುಖ್ಯ ಶಿಕ್ಷಕಿ ಬಿ.ಎಸ್. ನೀತಕುಮಾರಿ ಪ್ರಶಸ್ತಿ ಪಡೆದಿದ್ದಾರೆ.ಗೋಣಿಕೊಪ್ಪದ ಹರಿಶ್ಚಂದ್ರಪುರ ವಿಭಾಗದ ಅಂಗನವಾಡಿ ಶಿಕ್ಷಕಿ ಆರ್. ಲತಾ ಅವರಿಗೆ ಜ್ಞಾನ ಚಿಗುರು ಕವಚ ಪ್ರಶಸ್ತಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮತ್ತು ಪೊನ್ನಂಪೇಟೆ ಕ್ಲಸ್ಟರ್‌ನ ನಿಯೋಜಿತ ಸಮೂಹ ಸಂಪನ್ಮೂಲ ವ್ಯಕ್ತಿ ತಿರುನೆಲ್ಲಿಮಡ ಜೀವನ್ ಅವರಿಗೆ ಜ್ಞಾನ ಜ್ಯೋತಿ ಪ್ರಶಸ್ತಿ, ಶಿರಂಗಾಲದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಆರ್.ಡಿ. ಲೋಕೇಶ್ ಅವರಿಗೆ ‘ಜ್ಞಾನ ಸಿಂಧು’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅನುದಾನಿತ ಪ್ರೌಢ ಶಾಲೆ ಗೋಣಿಕೊಪ್ಪದಲ್ಲಿ ಶಿಕ್ಷಕರಾಗಿ ಶಿಕ್ಷಣ ಕ್ಷೇತ್ರದಲ್ಲಿ ಮತ್ತು ವಿವಿಧ ಕ್ಷೇತ್ರದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ವಿಜ್ಞಾನ ಶಿಕ್ಷಕ , ರಾಜ್ಯ ಮಟ್ಟದ ಪ್ರಶಸ್ತಿ ವಿಜೇತರು ಆಗಿರುವ ಶ್ರೀಕೃಷ್ಣ ಚೈತನ್ಯ ಅವರಿಗೆ "ಬಹುಮುಖ ಪ್ರತಿಭೆ " ಪ್ರಶಸ್ತಿ ಸಂದಿದೆ. ಈ ಪ್ರಶಸ್ತಿಗಳನ್ನು ಬಿ ಎಸ್ ಯಡಿಯೂರಪ್ಪ ಅವರಿಗೆ 80 ನೇ ವರ್ಷದ ಅಭಿನಂದನೆ ಕಾರ್ಯಕ್ರಮ ಹಾಗೂ ಶಿಕ್ಷಣ ಜ್ಞಾನ ಪತ್ರಿಕೆಯ 21ನೇ ವಾರ್ಷಿಕೋತ್ಸವದ ಹಾಗೂ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಸಂದಭ೯ ಶಿವಮೊಗ್ಗ ಜಿಲ್ಲೆಯ "ಬೆಕ್ಕಿನ ಕಲ್ಮಠ " ದಲ್ಲಿ ಭಾನುವಾರ ನೀಡಲಾಯಿತು .ಕಾಯ೯ಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಶಿಕ್ಷಕ ಮೈಸೂರಿನ ಲಯನ್ ಗಂಗಾಧರಪ್ಪ, ಶಿಕ್ಷಣ ಜ್ಞಾನ ಪತ್ರಿಕೆ ಸಂಪಾದಕ ನಾಗರಾಜು, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಜೂನಿಯರ್ ವಿಷ್ನುವಧ೯ನ್ ಖ್ಯಾತಿಯ ಅಪೇಕ್ಷ ಮಂಜುನಾಥ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.