ಸಾರಾಂಶ
ಸರ್ಕಾರ ಹೊಸ ಜಿಲ್ಲೆ ಸೃಜಿಸುವುದಿದ್ದರೆ ನಮ್ಮ ತಾಲೂಕನ್ನು ವಿಜಯಪುರ ಜಿಲ್ಲೆಯಲ್ಲೇ ಮುಂದುವರಿಸಿ, ಇಂಡಿಗೆ ಸೇರಿಸಬೇಡಿ. ವಿಜಯಪುರ ಜಿಲ್ಲೆ ನಮಗೆ ಹತ್ತಿರವಾಗಿದ್ದು, ಈ ಭಾಗದ ರೈತರು, ವ್ಯಾಪಾರಸ್ಥರು ಹಾಗೂ ಜನಸಾಮಾನ್ಯರು ವಿಜಯಪುರಕ್ಕೆ ಅವಲಂಬನೆ ಆಗಿದ್ದಾರೆ.
ದೇವರಹಿಪ್ಪರಗಿ: ದೇವರಹಿಪ್ಪರಗಿ ತಾಲೂಕನ್ನು ವಿಜಯಪುರ ಜಿಲ್ಲೆಯಲ್ಲೇ ಮುಂದುವರಿಸಲು ತಾಲೂಕು ಬಣಜಿಗ ಸಂಘದಿಂದ ತಹಸೀಲ್ದಾರ್ ಗೆ ಶುಕ್ರವಾರ ಮನವಿ ಸಲ್ಲಿಸಿ ಆಗ್ರಹಿಸಿದರು.
ತಾಲೂಕು ಘಟಕದ ಅಧ್ಯಕ್ಷ ಬಸವರಾಜ ತಾಳಿಕೋಟಿ ಮಾತನಾಡಿ, ಸರ್ಕಾರ ಹೊಸ ಜಿಲ್ಲೆ ಸೃಜಿಸುವುದಿದ್ದರೆ ನಮ್ಮ ತಾಲೂಕನ್ನು ವಿಜಯಪುರ ಜಿಲ್ಲೆಯಲ್ಲೇ ಮುಂದುವರಿಸಿ, ಇಂಡಿಗೆ ಸೇರಿಸಬೇಡಿ. ವಿಜಯಪುರ ಜಿಲ್ಲೆ ನಮಗೆ ಹತ್ತಿರವಾಗಿದ್ದು, ಈ ಭಾಗದ ರೈತರು, ವ್ಯಾಪಾರಸ್ಥರು ಹಾಗೂ ಜನಸಾಮಾನ್ಯರು ವಿಜಯಪುರಕ್ಕೆ ಅವಲಂಬನೆ ಆಗಿದ್ದಾರೆ. ಹೊಸ ತಾಲೂಕು ಮಾಡಿ ಹಲವು ವರ್ಷಗಳೇ ಕಳೆದರೂ ಸರ್ಕಾರಿ ಕಚೇರಿಗಳು ಕಾರ್ಯಾರಂಭ ಮಾಡಿಲ್ಲ. ಇದರಿಂದ ಜನರಿಗೆ ಸಮಸ್ಯೆ ಆಗಿದೆ. ಈಗ ಮತ್ತೆ ಹೊಸ ಜಿಲ್ಲೆ ಸೃಜಿಸಿ ನಮ್ಮನ್ನು ಬೇರೆಡೆ ಹಾಕದೆ ವಿಜಯಪುರ ಜಿಲ್ಲೆಯಲ್ಲಿ ಮುಂದುವರಿಸಬೇಕು. ತಾಲೂಕಿನ ಅಭಿವೃದ್ಧಿ ಕುಂಠಿತ ವಾಗುವುದರ ಜೊತೆ ಜನಸಾಮಾನ್ಯರಿಗೆ ತೊಂದರೆ ಆಗುತ್ತದೆ. ಈಗಾಗಲೇ ಹಲವಾರು ರಾಜಕೀಯ ಮುಖಂಡರು, ಸಂಘ -ಸಂಸ್ಥೆಗಳು ಇಂಡಿ ಜಿಲ್ಲೆಯಲ್ಲಿ ನಮ್ಮ ತಾಲೂಕು ಸೇರ್ಪಡೆ ಮಾಡುವುದು ಅವೈಜ್ಞಾನಿಕ. ದೇವರಹಿಪ್ಪರಗಿ ತಾಲೂಕನ್ನು ವಿಜಯಪುರ ಜಿಲ್ಲೆಯಲ್ಲೇ ಮುಂದುವರಿಸಲು ಮನವಿ ಮಾಡುತ್ತಿದ್ದೇವೆ ಎಂದು ಹೇಳಿದರು.ಮುಖಂಡರಾದ ಕಾಶಿನಾಥ ಕೋರಿ, ಕಾಶಿನಾಥ ಸಾಲಕ್ಕಿ, ಚಿನ್ಮಯಿ ಕೋರಿ, ಗಂಗಾಧರ ಬಬಲೇಶ್ವರ, ಬಿ.ಎಂ.ಕೋರಿ, ಸದಾಶಿವ ಪಟ್ಟಣಶೆಟ್ಟಿ, ರಾಜು ಕೋರಿ, ಸಚೀನ ಕೋರಿ, ಜಿ.ಎನ್. ಕೋರಿ ಸೇರಿದಂತೆ ತಾಲೂಕು ಬಣಜಿಗ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.