ಸಾರಾಂಶ
ಶಿವಮೊಗ್ಗ: ರಾಜ್ಯ ಮತ್ತು ಜಿಲ್ಲಾ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ, ಜಿಲ್ಲಾ ಗಂಗಾಮತ ಸಂಘ, ಜಿಲ್ಲಾ ಮೊಗವೀರ ಮಹಾಜನ ಸಂಘ, ಮತ್ತು ಸಮಾಜದ ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮಾ.23ರಂದು ಬೆಳಗ್ಗೆ 10.30ಕ್ಕೆ ಸಾಗರ ರಸ್ತೆಯ ಮಲ್ಲಿಗೆನಹಳ್ಳಿಯಲ್ಲಿರುವ ವಾಜಪೇಯಿ ಬಡಾವಣೆಯ ಮಾಧವ ಮಂಗಲ ಸಭಾ ಭವನದಲ್ಲಿ ರಾಜ್ಯ ಮಟ್ಟದ ವಧು-ವರರ ಸಮಾವೇಶ ಆಯೋಜಿಸಲಾಗಿದೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಹಾಲೇಶಪ್ಪ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಇದು ಸಮಾಜದ ರಾಜ್ಯ ಮಟ್ಟದ ವಧು-ವರರ ಸಮಾವೇಶವಾಗಿದೆ. ರಾಜ್ಯಾದ್ಯಂತ ನೆಲೆಸಿರುವ ಗಂಗಾಮತ, ಬೆಸ್ತ, ಮೊಗವೀರ, ಸುಣಗಾರ ಸೇರಿದಂತೆ ಪರ್ಯಾಯ ಹೆಸರುಗಳಿಂದ ಕರೆಯಲ್ಪಡುವ ಎಲ್ಲ ಉಪಜಾತಿಗಳ ಅನುಕೂಲಕ್ಕಾಗಿ ಈ ಸಮಾವೇಶ ಆಯೋಜಿಸಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು. ಇದೇ ಪ್ರಥಮ ಬಾರಿಗೆ ಶಿವಮೊಗ್ಗದಲ್ಲಿ ಈ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು.ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಎಚ್.ಎಸ್.ಚಂದ್ರಶೇಖರ್ ಮಾತನಾಡಿ, ಈ ಸಮಾವೇಶದಲ್ಲಿ ಭಾಗವಹಿಸುವ ವಧು-ವರರು ತಮ್ಮ ಇತ್ತೀಚಿನ ಎರಡು ಪೋಸ್ಟ್ ಕಾರ್ಡ್ ಅಳತೆಯ ಪೂರ್ಣ ಭಾವಚಿತ್ರದೊಂದಿಗೆ ಬಯೊಡಾಟಾದೊಂದಿಗೆ ವಧು-ವರರ ಅರ್ಜಿ ಮಾಹಿತಿ ನಮೂನೆಯಲ್ಲಿ ಭರ್ತಿ ಮಾಡಿ ಮಾ.15ರೊಳಗೆ ಜಿಲ್ಲಾ ಗಂಗಾಮತ ವಿದ್ಯಾರ್ಥಿ ನಿಲಯ, ಬಾಪೂಜಿ ನಗರ ಮುಖ್ಯ ರಸ್ತೆ, ಶಿವಮೊಗ್ಗ ಇಲ್ಲಿಗೆ ತಲುಪಿಸಬೇಕು ಎಂದು ಮಾಹಿತಿ ನೀಡಿದರು.ಜಿಲ್ಲಾ ಗಂಗಾಮತ ಸಂಘದ ಅಧ್ಯಕ್ಷ ಡಿ.ಬಿ.ಕೆಂಚಪ್ಪ ಮಾತನಾಡಿ, ಅರ್ಜಿ ಸಲ್ಲಿಸುವ ವಧು-ವರರು ಅರ್ಜಿ ಜೊತೆಗೆ ಸಾಮಾನ್ಯ ಶುಲ್ಕ 1000 ರು.ಪಾವತಿಸಬೇಕು. ವಧುವಿಗೆ 18, ವರನಿಗೆ 21 ವರ್ಷ ಕಡ್ಡಾಯವಾಗಿರಬೇಕು. ಆಯೋಜಕರು, ಮಧ್ಯವರ್ತಿಗಳು ಮಾತ್ರ ಸಂಪೂರ್ಣ ವಿವರಗಳನ್ನು ಪೋಷಕರುಗಳೇ ಪಡೆಯಬೇಕು.
ಹೆಚ್ಚಿನ ವಿವರ ಮತ್ತು ಅರ್ಜಿ ನಮೂನೆಗಾಗಿ ಮೊ.ಸಂ.9844784986, ಮತ್ತು 9481051123 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಆನಂದಪ್ಪ.ಬಿ, ಸೂಗೂರು ಜಿ.ಶೇಖರಪ್ಪ, ರೂಪಾ ಹೇಮಂತರಾಜ್, ಪಿ.ನಾಗೇಶ್ , ಕೃಷ್ಣಮೂರ್ತಿ, ರಂಗನಾಥ್, ಜಿ.ಕೆಂಚಪ್ಪ, ವಿಜಯಲಕ್ಷ್ಮೀ, ಪ್ರಶಾಂತ್ ಮತ್ತಿತರರು ಇದ್ದರು.