ಸಾರಾಂಶ
ಕುಶಾಲನಗರದ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಡ್ಯಾನ್ಸ್ ವರ್ಸಸ್ ಡ್ಯಾನ್ಸ್ ಸೀಸನ್ ಒನ್ ಸ್ಪರ್ಧೆಯನ್ನು ಜು.೬ ಮತ್ತು ೭ರಂದು ಕುಶಾಲನಗರದ ರೈತ ಸಹಕಾರ ಭವನದಲ್ಲಿ ಆಯೋಜಿಸಲಾಗಿದೆ. ಸ್ಪರ್ಧೆಯು ಸೋಲೋ, ಕಪಲ್ ಹಾಗೂ ಗ್ರೂಪ್ ಡ್ಯಾನ್ಸ್ ಎಂಬ ಮೂರು ವಿಭಾಗಗಳಲ್ಲಿ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕುಶಾಲನಗರದ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಡ್ಯಾನ್ಸ್ ವರ್ಸಸ್ ಡ್ಯಾನ್ಸ್ ಸೀಸನ್ ಒನ್ ಸ್ಪರ್ಧೆಯನ್ನು ಜು.೬ ಮತ್ತು ೭ರಂದು ಕುಶಾಲನಗರದ ರೈತ ಸಹಕಾರ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ಪ್ರಮುಖ ಅಖ್ತರ್ ತಿಳಿಸಿದ್ದಾರೆ.ಮಡಿಕೇರಿಯ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ರಾಜ್ಯಮಟ್ಟದ ನೃತ್ಯ ಸ್ಪರ್ಧೆಯು ಸೋಲೋ, ಕಪಲ್ ಹಾಗೂ ಗ್ರೂಪ್ ಡ್ಯಾನ್ಸ್ ಎಂಬ ಮೂರು ವಿಭಾಗಗಳಲ್ಲಿ ನಡೆಯಲಿದೆ. ಈ ಮೂರು ವಿಭಾಗಗಳಲ್ಲಿಯೂ ಸ್ಪರ್ಧಾಳುಗಳ ವಯೋಮಿತಿ 3 ರಿಂದ 9 ವರ್ಷದ ಮಕ್ಕಳು (ಸಬ್ ಜೂನಿಯರ್ ವಿಭಾಗ), 10 ರಿಂದ 14 ವರ್ಷದ ಮಕ್ಕಳು (ಜೂನಿಯರ್ ವಿಭಾಗ) ಹಾಗೂ 15 ವರ್ಷ ಮೇಲ್ಪಟ್ಟವರ (ಸೀನಿಯರ್ ವಿಭಾಗ)ದಲ್ಲಿ ಸ್ಪರ್ಧೆ ನಡೆಯಲಿದೆ ಎಂದರು.
ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಒಟ್ಟು ಒಂದೂವರೆ ಲಕ್ಷ ರು.ಗಳ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಯನ್ನು ಬಹುಮಾನವಾಗಿ ನೀಡಲಾಗುವುದು. ಜೊತೆಗೆ ಬೆಸ್ಟ್ ಕೊರಿಯೋಗ್ರಾಫರ್, ಬೆಸ್ಟ್ ಡ್ಯಾನ್ಸ್ ಟೀಮ್, ಬೆಸ್ಟ್ ಟೀಮ್ ಪ್ರಶಸ್ತಿಯನ್ನು ನೀಡಲಾಗುವುದು ಎಂದರು. ರಾಜ್ಯಮಟ್ಟದ ನೃತ್ಯಸ್ಪರ್ಧೆಯಲ್ಲಿ ಟಿವಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ಸ್ಪರ್ಧಿಗಳು ಸೇರಿದಂತೆ ಬೆಂಗಳೂರು, ಮೈಸೂರು, ಚಾಮರಾಜನಗರ, ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸ್ಪರ್ಧಿಗಳು ಭಾಗವಹಿಸಲಿದ್ದಾರೆ.ಜುಲೈ ೬ರಂದು ಸೋಲೋ ಮತ್ತು ಕಪಲ್ ಸ್ಪರ್ಧೆಗಳು ಹಾಗೂ ಜುಲೈ ೭ರಂದು ಗ್ರೂಪ್ ಡ್ಯಾನ್ಸ್ ಸ್ಪರ್ಧೆ ನಡೆಯಲಿದೆ. ಬೆಳಗ್ಗೆ ೯ ಗಂಟೆಯಿಂದ ರಾತ್ರಿ ೧೦ ಗಂಟೆಯವರೆಗೆ ಸ್ಪರ್ಧೆಗಳು ನಡೆಯಲಿವೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು, ಎರಡು ದಿನಗಳ ಕಾಲ ಊಟದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಆಸಕ್ತರು ಜೂನ್ ೨೫ ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 9606302963, 6362257084 ಸಂಪರ್ಕಿಸಬಹುದಾಗಿದೆ ಎಂದರು.ಇದೇ ಸಂದರ್ಭ ಡ್ಯಾನ್ಸ್ ವರ್ಸಸ್ ಡ್ಯಾನ್ಸ್ ಸ್ಪರ್ಧೆಯ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.
ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ಸದಸ್ಯರಾದ ಪಿ.ಎಸ್.ಸೂರ್ಯ, ಎಂ.ಕೆ.ಕೃತಿಕ್, ಆರ್.ಎಂ.ಶಶಾಂಕ್, ಸಿ.ಎಸ್.ಅರುಣ್, ಸುದ್ದಿಗೋಷ್ಠಿಯಲ್ಲಿದ್ದರು