ಸಾರಾಂಶ
ಸ್ಪರ್ಧೆಯಲ್ಲಿ ರಾಜ್ಯದ 15 ವಿವಿಧ ಕಾಲೇಜುಗಳಿಂದ 30ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ಅಂತಿಮವಾಗಿ ನಮ್ಮ ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿ ಬಿ.ಎಚ್.ಚೇತನ್ ವಿಷಯದ ವಿರುದ್ಧ ಹಾಗೂ ಅಂತಿಮ ಪದವಿ ವಿದ್ಯಾರ್ಥಿ ಜಿ.ಕೆ.ಕಾರ್ತಿಕ್ ವಿಷಯದ ಪರವಾಗಿ ಚರ್ಚೆ ಮಂಡಿಸಿ ಪ್ರಶಸ್ತಿಗೆ ಭಾಜನರಾದರು.
ಕನ್ನಡಪ್ರಭ ವಾರ್ತೆ ನಾಗಮಂಗಲ
ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಪಟ್ಟಣದ ಶ್ರೀಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ.ಮೈಸೂರು ವಿದ್ಯಾವರ್ಧಕ ಸಂಘ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜು ವತಿಯಿಂದ ನಡೆದ ಕಲಾ ಸಂಭ್ರಮ ರಾಜ್ಯ ಮಟ್ಟದ ಅಂತರ ಕಾಲೇಜುಗಳ ಚರ್ಚಾ ಸ್ಪರ್ಧೆ ಹಾಗೂ ಜನಪದ ಗೀತೆಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಿಎ ವಿದ್ಯಾರ್ಥಿ ಬಿ.ಎಚ್. ಚೇತನ್ ಪ್ರಥಮ ಪ್ರಶಸ್ತಿ ಹಾಗೂ ಅಂತಿಮ ಬಿ.ಕಾಂ ವಿದ್ಯಾರ್ಥಿ ಜಿ.ಕೆ.ಕಾರ್ತಿಕ್ ತೃತೀಯ ಪ್ರಶಸ್ತಿ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಪ್ರಾಂಶುಪಾಲ ಡಾ.ಶ್ರೇಯಸ್ ಕೃಷ್ಣನ್ ತಿಳಿಸಿದ್ದಾರೆ.
ಕಾಲೇಜಿನ ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಹಾಗೂ ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಪ್ರೊ.ಎಚ್.ಆರ್.ತ್ರಿವೇಣಿ ಮಾತನಾಡಿ, ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭ. ರಾಜಕೀಯದ ಕೈಗವಸುಗಳಾಗಿವೆ ಎಂಬ ವಿಷಯದ ಕುರಿತು ಸ್ಪರ್ಧೆ ಆಯೋಜನೆಯಾಗಿತ್ತು.ಸ್ಪರ್ಧೆಯಲ್ಲಿ ರಾಜ್ಯದ 15 ವಿವಿಧ ಕಾಲೇಜುಗಳಿಂದ 30ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ಅಂತಿಮವಾಗಿ ನಮ್ಮ ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿ ಬಿ.ಎಚ್.ಚೇತನ್ ವಿಷಯದ ವಿರುದ್ಧ ಹಾಗೂ ಅಂತಿಮ ಪದವಿ ವಿದ್ಯಾರ್ಥಿ ಜಿ.ಕೆ.ಕಾರ್ತಿಕ್ ವಿಷಯದ ಪರವಾಗಿ ಚರ್ಚೆ ಮಂಡಿಸಿ ಪ್ರಶಸ್ತಿಗೆ ಭಾಜನರಾದರು ಎಂದು ಸಂತಸ ವ್ಯಕ್ತಪಡಿಸಿದರು.
ವಿಜೇತರಿಗೆ ಪ್ರಥಮ ಬಹುಮಾನ 6 ಸಾವಿರ ರು. ನಗದು ತೃತೀಯ ಬಹುಮಾನ 2ಸಾವಿರ ರು. ನಗದು, ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗಿದೆ. ಸಾಂಸ್ಕೃತಿಕ ಸಮಿತಿ ಸದಸ್ಯರಾದ ಪ್ರೊ.ಗುಣವತಿ, ಪ್ರೊ.ಎ.ಬಿ.ಪವಿತ್ರ ಹಾಗೂ ಐಕ್ಯೂಎಸಿ ಸಮಿತಿ ಸಂಚಾಲಕ ಪ್ರೊ.ಡಾ.ರವಿಕುಮಾರ್ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಿಜೇತರಿಗೆ ಶುಭಾಶಯ ಕೋರಿದರು.