ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆ: ಎಂ.ಡಿ.ಕೌಸಲ್ಯ ಪ್ರಥಮ ಬಹುಮಾನ

| Published : Feb 09 2024, 01:46 AM IST

ಸಾರಾಂಶ

ಶ್ರೀರಂಗಪಟ್ಟಣ ತಾಲೂಕು ಮಹದೇವಪುರ ಗ್ರಾಮದ ಎಂ.ಕೆ.ಆನಂದಾಳ್ವಾರ್‌ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಎಂ.ಡಿ.ಕೌಸಲ್ಯ, ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಯಲ್ಲಿ ಸಾಮಾಜಿಕ ಜಾಲ ತಾಣಗಳು ಸಹಕಾರಿಯಾಗಿವೆ ಎಂಬ ವಿಷಯದ ವಿರುದ್ಧವಾಗಿ ಮಾತನಾಡಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಧಾರವಾಡ ಜಿಲ್ಲೆಯಲ್ಲಿ ನಡೆದ 2023-24ನೇ ಸಾಲಿನ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಚರ್ಚಾ ಸ್ಪರ್ಧೆಯಲ್ಲಿ ಜಿಲ್ಲೆಯ ಎಂ.ಡಿ.ಕೌಸಲ್ಯ ಪ್ರಥಮ ಸ್ಥಾನ ಗಳಿಸಿದ್ದಾಳೆ.

ಶ್ರೀರಂಗಪಟ್ಟಣ ತಾಲೂಕು ಮಹದೇವಪುರ ಗ್ರಾಮದ ಎಂ.ಕೆ.ಆನಂದಾಳ್ವಾರ್‌ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಎಂ.ಡಿ.ಕೌಸಲ್ಯ, ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಯಲ್ಲಿ ಸಾಮಾಜಿಕ ಜಾಲ ತಾಣಗಳು ಸಹಕಾರಿಯಾಗಿವೆ ಎಂಬ ವಿಷಯದ ವಿರುದ್ಧವಾಗಿ ಮಾತನಾಡಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಆ ಮೂಲಕ ಜಿಲ್ಲೆಗೆ, ಶಾಲೆಗೆ ಹಾಗೂ ಮಾರ್ಗದರ್ಶನ ನೀಡಿದ ಕನ್ನಡ ಶಿಕ್ಷಕರಿಗೆ ಕೀರ್ತಿ ತಂದಿದ್ದಾಳೆ. ಎಂ.ಡಿ.ಕೌಸಲ್ಯ ಕಳೆದ ವರ್ಷ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.ನಾಳೆ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ

ಕೆ.ಆರ್.ಪೇಟೆ: ಪಟ್ಟಣದ ಸಾಹುಕಾರ್ ಚಿಕ್ಕಣ್ಣಗೌಡ ಸಭಾಂಗಣ ಗ್ರಾಮ ಭಾರತಿ ವಿದ್ಯಾ ಸಂಸ್ಥೆಯಲ್ಲಿ ಫೆ.10 ರಂದು ಡಾ.ಶ್ಯಾಮೇಶ್ ಅತ್ತಿಗುಪ್ಪೆ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಡಾ.ರಾಗಿಮುದ್ದನಹಳ್ಳಿನಾಗೇಶ್ ತಿಳಿಸಿದ್ದಾರೆ.

ಸಮಾರಂಭದಲ್ಲಿ ಮೈಸೂರಿನ ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಡಿ.ರವಿಕುಮಾರ್ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಡಯಟ್ ಪ್ರಾಂಶುಪಾಲ ಪುರುಷೋತ್ತಮ ಪ್ರಶಸ್ತಿ ಪ್ರದಾನ ಮಾಡುವರು. ಆರ್.ಸಿ.ನಾಗೇಗೌಡ, ರಾಗಿಮುದ್ದನಹಳ್ಳಿ ಡಾ.ನಾಗೇಶ್, ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಅರೆಬೊಪ್ಪನಹಳ್ಳಿ ಶಾಲೆಯ ಎಂ.ಎಲ್.ವಾಣಿ, ಶ್ರೀರಂಗಪಟ್ಟಣ ಬಸ್ತೀಪುರದ ಶಿಕ್ಷಕ ಸೈಯದ್‌ಖಾನ್ , ಮಂಡ್ಯ ದುದ್ದ ಶಾಲೆಯ ಶಿಕ್ಷಕ ರಾವುಳಯ್ಯ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.