ಸಾರಾಂಶ
ರಾಜ್ಯಮಟ್ಟದ ಹ್ಯಾಂಡ್ ಬಾಲ್ ಕ್ರೀಡಾಕೂಟವು ಮಾಯಸಂದ್ರ ಎಸ್ ಬಿ ಜಿ ವಿದ್ಯಾಲಯದ ಕ್ರೀಡಾಂಗಣದಲ್ಲಿ ಸಂಪೂರ್ಣವಾಯಿತು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ರಾಜ್ಯಮಟ್ಟದ ಹ್ಯಾಂಡ್ ಬಾಲ್ ಕ್ರೀಡಾಕೂಟವು ಮಾಯಸಂದ್ರ ಎಸ್ ಬಿ ಜಿ ವಿದ್ಯಾಲಯದ ಕ್ರೀಡಾಂಗಣದಲ್ಲಿ ಸಂಪೂರ್ಣವಾಯಿತು. 2025 ರ ಅಕ್ಟೊಬರ್ 9 ಮತ್ತು 10 ರಂದು ನಡೆದ 14 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಬೆಂಗಳೂರು ವಿಭಾಗ ಪ್ರಥಮ ಸ್ಥಾನ, ಬೆಳಗಾವಿ ವಿಭಾಗ ದ್ವಿತೀಯ ಸ್ಥಾನ, ಬಾಲಕಿಯರ ವಿಭಾಗದಲ್ಲಿ ಮೈಸೂರು ವಿಭಾಗ ಪ್ರಥಮ, ಬೆಳಗಾವಿ ವಿಭಾಗ ದ್ವಿತೀಯ ಸ್ಥಾನ ಪಡೆಯಿತು. 17 ವಯೋಮಿತಿಯ ಬಾಲಕರ ವಿಭಾಗದಲ್ಲಿ ಬೆಂಗಳೂರು ವಿಭಾಗ ಪ್ರಥಮ, ಬೆಳಗಾವಿ ವಿಭಾಗ ದ್ವಿತೀಯ ಸ್ಥಾನ ಪಡೆದರೆ, ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ವಿಭಾಗ ಪ್ರಥಮ ಹಾಗೂ ಮೈಸೂರು ವಿಭಾಗ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡವು.ವಿಜೇತ ತಂಡಗಳಿಗೆ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಬಹುಮಾನಗಳನ್ನು ವಿತರಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಹ್ಯಾಂಡ್ ಬಾಲ್ ರಾಜ್ಯ ಸಂಸ್ಥೆಯ ಉಪಾಧ್ಯಕ್ಷರಾದ ಪ್ರೊ ಕೆ ಪುಟ್ಟರಂಗಪ್ಪ, ಶಿವರಾಮ್, ಪ್ರಾಚಾರ್ಯ ಗಿರೀಶ್, ಕ್ರೀಡಾಕೂಟದ ಮೇಲ್ವಿಚಾರಕ ಉದಯ್, ತೀರ್ಪುಗಾರರು, ತಂಡಗಳ ತರಬೇತುದಾರರು, ವ್ಯವಸ್ಥಾಪಕರು, ಎಸ್ ಬಿ ಜಿ ವಿದ್ಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.