ರಾಜ್ಯಮಟ್ಟದ ಹೊನಲು ಬೆಳಕಿನ ಹ್ಯಾಂಡ್ ಬಾಲ್ ಪಂದ್ಯಾವಳಿ

| Published : Dec 27 2024, 12:48 AM IST

ರಾಜ್ಯಮಟ್ಟದ ಹೊನಲು ಬೆಳಕಿನ ಹ್ಯಾಂಡ್ ಬಾಲ್ ಪಂದ್ಯಾವಳಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಕ್ರೀಡಾಂಗಣದಲ್ಲಿ ಡಿಸೆಂಬರ್ ೨೭ರ ಶುಕ್ರವಾರ ಸಂಜೆ ೧೯ನೇ ರಾಜ್ಯಮಟ್ಟದ ೨೦ ವರ್ಷದ ವಯೋಮಿತಿಯ ಪುರುಷರು ಮತ್ತು ಮಹಿಳೆಯರ ಹೊನಲು ಬೆಳಕಿನ ಹ್ಯಾಂಡ್ ಬಾಲ್ ಪಂದ್ಯಾವಳಿ ಪ್ರಾರಂಭವಾಗಿ ಡಿಸೆಂಬರ್ ೨೯ರ ಭಾನುವಾರ ಮುಕ್ತಾಯವಾಗಲಿದೆ ಎಂದು ಜಿಲ್ಲಾ ಹ್ಯಾಂಡ್ ಬಾಲ್ ಸಂಸ್ಥೆ ಸಲಹೆಗಾರರಾದ ಜೆ.ಐ. ನಿರಂಜನ್ ರಾಜ್ ಮತ್ತು ಕಾರ್ಯದರ್ಶಿ ಸಿಎನ್. ವಿಶ್ವನಾಥ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಡಿಸೆಂಬರ್ ೨೭ರ ಶುಕ್ರವಾರ ಸಂಜೆ ೫:೩೦ಕ್ಕೆ ೧೯ನೇ ರಾಜ್ಯಮಟ್ಟದ ೨೦ ವರ್ಷದ ವಯೋಮಿತಿಯ ಪುರುಷರು ಮತ್ತು ಮಹಿಳೆಯರ ಹೊನಲು ಬೆಳಕಿನ ಹ್ಯಾಂಡ್ ಬಾಲ್ ಪಂದ್ಯಾವಳಿ ಪ್ರಾರಂಭವಾಗಿ ಡಿಸೆಂಬರ್ ೨೯ರ ಭಾನುವಾರ ಮುಕ್ತಾಯವಾಗಲಿದೆ ಎಂದು ಜಿಲ್ಲಾ ಹ್ಯಾಂಡ್ ಬಾಲ್ ಸಂಸ್ಥೆ ಸಲಹೆಗಾರರಾದ ಜೆ.ಐ. ನಿರಂಜನ್ ರಾಜ್ ಮತ್ತು ಕಾರ್ಯದರ್ಶಿ ಸಿಎನ್. ವಿಶ್ವನಾಥ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಪುರುಷರ ತಂಡದಲ್ಲಿ ೨೪ ತಂಡಗಳು, ಬಾಲಕಿಯರ ಭಾಗದಲ್ಲಿ ೧೬ ತಂಡಗಳು ಭಾಗವಹಿಸಲಿದೆ. ಒಂದು ತಂಡದಲ್ಲಿ ೧೪ರಿಂದ ೧೬ ಜನ ಆಟಗಾರರು ಇರುತ್ತಾರೆ. ಜೊತೆಗೆ ಮ್ಯಾನೆಜರ್‌ಗಳು ಬರಲಿದ್ದು, ಇವರಿಗೆ ಯೂತ್ ಹಾಸ್ಟೆಲ್‌ನಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಪಟುಗಳಿಗೆ ಬಾಲಕಿಯರಿಗ ಕ್ರೈಸ್ಟ್ ಶಾಲೆಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಬಾಲಕರಿಗೆ ಸಿಟಿ ಕಾಮರ್ಸ್, ಸುಜಲಾ ಕಾಲೇಜು ಆವರಣ ಸೇರಿದಂತೆ ಇತರೆ ವಿದ್ಯಾಸಂಸ್ಥೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ, ಗುರುವಾರ ಸಂಜೆಯಿಂದ ಭಾನುವಾರ ಸಂಜೆವರೆಗೂ ಊಟದ ವ್ಯವಸ್ಥೆಯನ್ನು ನಾವೇ ಕಲ್ಪಿಸಿದ್ದೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಹ್ಯಾಂಡ್‌ಬಾಲ್ ಸಂಸ್ಥೆ ಅಧ್ಯಕ್ಷರಾದ ಕುಮಾರಸ್ವಾಮಿ ರಾಜು, ಕಾರ್ಯದರ್ಶಿಯಾಗಿ ಸಿ.ಎನ್. ವಿಶ್ವನಾಥ್, ಸಂಘಟನಾ ಕಾರ್ಯದರ್ಶಿ ಎ.ಎನ್. ಅನಿಲ್ ಕುಮಾರ್, ನಿರ್ದೇಶಕರಾದ ವಿಶ್ವನಾಥ್, ಇತರರು ಉಪಸ್ಥಿತರಿದ್ದರು.