ಸಾರಾಂಶ
ಶಿವಮೊಗ್ಗ ಕೀಲು ಮತ್ತು ಮೂಳೆ ತಜ್ಞರ ಸಂಘ ಮತ್ತು ರಾಜ್ಯ ಕೀಲು ಮತ್ತು ಮೂಳೆ ತಜ್ಞರ ಸಂಘ ಸಹಯೋಗದಲ್ಲಿ ಫೆ.2ರಿಂದ 4ರವರೆಗೆ ಸುಬ್ಬಯ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ರಾಜ್ಯಮಟ್ಟದ ಕೀಲು ಮತ್ತು ಮೂಳೆತಜ್ಞರ ಸಮ್ಮೇಳನ ನಡೆಯಲಿದೆ. 200 ಹೆಚ್ಚು ಸಂಪನ್ಮೂಲ ತಜ್ಞ ವೈದ್ಯರು ಸಮ್ಮೇಳನದಲ್ಲಿ ಮಾರ್ಗದರ್ಶನ ನೀಡಲಿದ್ದು, 400ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಮಂಡನೆ ಆಗಲಿದೆ. ಫೆ.2ರಂದು 5 ವಿಷಯಗಳಲ್ಲಿ ಕಾರ್ಯಾಗಾರ ನಡೆಯಲಿದೆ ಎಂದು ಸಮ್ಮೇಳನ ಸಂಘಟನಾ ಅಧ್ಯಕ್ಷ ಡಾ. ಪಿ.ಆರ್. ಸುಧೀಂದ್ರ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗ ಕೀಲು ಮತ್ತು ಮೂಳೆ ತಜ್ಞರ ಸಂಘ ಮತ್ತು ರಾಜ್ಯ ಕೀಲು ಮತ್ತು ಮೂಳೆ ತಜ್ಞರ ಸಂಘ ಸಹಯೋಗದಲ್ಲಿ ಫೆ.2ರಿಂದ 4ರವರೆಗೆ ಸುಬ್ಬಯ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ರಾಜ್ಯಮಟ್ಟದ ಕೀಲು ಮತ್ತು ಮೂಳೆತಜ್ಞರ ಸಮ್ಮೇಳನ ನಡೆಯಲಿದೆ ಎಂದು ಸಮ್ಮೇಳನ ಸಂಘಟನಾ ಅಧ್ಯಕ್ಷ ಡಾ. ಪಿ.ಆರ್. ಸುಧೀಂದ್ರ ಹೇಳಿದರು.ನಗರದ ಪ್ರೆಸ್ ಟ್ರಸ್ಟ್‌ನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಸಮ್ಮೇಳನದಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳ ಸಾವಿರಕ್ಕೂ ಹೆಚ್ಚು ಕೀಲು ಮತ್ತು ಮೂಳೆತಜ್ಞರು, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸುವರು ಎಂದು ತಿಳಿಸಿದರು.
200 ಹೆಚ್ಚು ಸಂಪನ್ಮೂಲ ತಜ್ಞ ವೈದ್ಯರು ಸಮ್ಮೇಳನದಲ್ಲಿ ಮಾರ್ಗದರ್ಶನ ನೀಡಲಿದ್ದು, 400ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಮಂಡನೆ ಆಗಲಿದೆ. ಫೆ.2ರಂದು 5 ವಿಷಯಗಳಲ್ಲಿ ಕಾರ್ಯಾಗಾರ ನಡೆಯಲಿದೆ ಎಂದರು.ಇದೇ ದಿನ ಸಂಜೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಅಂತರ ರಾಷ್ಟ್ರೀಯ ಖ್ಯಾತಿಯ ಕೀಲುತಜ್ಞ ಮಂಗಳೂರಿನ ಪ್ರೊ. ಡಾ.ಶಾಂತರಾಂ ಶೆಟ್ಟಿ, ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ಮುಖ್ಯಸ್ಥ ಡಾ.ನಾಗೇಂದ್ರ, ವೈದ್ಯ ಡಾ.ನಿತ್ಯಾನಂದ ರಾವ್, ಕರ್ನಾಟಕ ಕೀಲು ಮತ್ತು ಮೂಳೆ ಸಂಘದ ಅಧ್ಯಕ್ಷ ಡಾ.ಎಡ್ವರ್ಡ್ ನಜರೆತ್, ಡಾ.ಭರತ್ ರಾಜ್ ಉಪಸ್ಥಿತರಿರುವರು ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಹರೀಶ್ ಪೈ, ಡಾ.ಸುರೇಶ್, ಡಾ.ನಂದಕಿಶೋರ್, ಡಾ.ಗಿರೀಶ್ ಇದ್ದರು.- - - -31ಎಸ್‌ಎಂಜಿಕೆಪಿ02:
ಶಿವಮೊಗ್ಗದ ಪ್ರೆಸ್ ಟ್ರಸ್ಟ್‌ನಲ್ಲಿ ಬುಧವಾರ ಡಾ. ಪಿ.ಆರ್.ಸುಧೀಂದ್ರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.