ಭಟ್ಕಳದಲ್ಲಿ ಕಬಡ್ಡಿ ಪ್ರಿಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ತಾಲೂಕಿನಲ್ಲಿ ಕಬಡ್ಡಿ ಪ್ರೋತ್ಸಾಹಿಸಲು ರಾಜ್ಯ ಮಟ್ಟದ ಕಬಡ್ಡಿ ಆಯೋಜಿಸಲಾಗಿದೆ.
ಭಟ್ಕಳ: ಇಲ್ಲಿನ ಐಸ್ ಫ್ಯಾಕ್ಟರಿ ಸನಿಹದ ಕೆಪಿ ಗ್ರೌಂಡಿನಲ್ಲಿ ಇವೆಂಟ್ ಸ್ಪೋರ್ಟ್ಸ್ ಇಂಡಿಯನ್ ಕಾರ್ಪೊರೇಶನ್, ಜಿಲ್ಲಾ ಮತ್ತು ತಾಲೂಕು ಕಬಡ್ಡಿ ಅಸೋಸಿಯೇಶನ್ ಸಹಯೋಗದಲ್ಲಿ ನ. 27, 28, 29ರಂದು ಹೊನಲು ಬೆಳಕಿನ ರಾಜ್ಯ ಮಟ್ಟದ ಗಂಡ- ಬೇರುಂಡ ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು, ಇದರಲ್ಲಿ ರಾಜ್ಯದ 10 ಜಿಲ್ಲೆಗಳ ಆಟಗಾರರು ಬರಲಿದ್ದಾರೆ ಎಂದು ಕಬಡ್ಡಿ ಪಂದ್ಯಾವಳಿ ಸಮಿತಿಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಟ್ಕಳದಲ್ಲಿ ಕಬಡ್ಡಿ ಪ್ರಿಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ತಾಲೂಕಿನಲ್ಲಿ ಕಬಡ್ಡಿ ಪ್ರೋತ್ಸಾಹಿಸಲು ರಾಜ್ಯ ಮಟ್ಟದ ಕಬಡ್ಡಿ ಆಯೋಜಿಸಲಾಗಿದೆ. ಇದಕ್ಕೆ ಡೆಪ್ಯೂಟಿ ಸ್ಪೀಕರ್ ಮಂಕಾಳ ವೈದ್ಯ ಅವರು ಪ್ರಾಯೋಜಕರಾಗಿದ್ದಾರೆ ಎಂದ ಅವರು, ಸುಮಾರು 150ಕ್ಕೂ ಅಧಿಕ ಕಬಡ್ಡಿ ಆಟಗಾರರು, ತೀರ್ಪುಗಾರರು, ಮಾಜಿ ಕಬಡ್ಡಿ ಆಟಗಾರರು ಆಗಮಿಸಲಿದ್ದಾರೆ ಎಂದರು.ಕಬಡ್ಡಿ ಅಸೋಸಿಯೇಶನ್ ಪ್ರಮುಖ ಶ್ರೀಧರ ನಾಯ್ಕ ಮುಟ್ಟಳ್ಳಿ ಮಾತನಾಡಿ, ಇವೆಂಟ್ ಸ್ಪೋರ್ಟ್ಸ್ನವರು ಈಗಾಲೇ ಬೆಂಗಳೂರು ಮತ್ತು ಮೈಸೂರಿನಲ್ಲಿ ತಲಾ 22 ಜಿಲ್ಲೆಗಳ ಕಬಡ್ಡಿ ಪಂದ್ಯಾವಳಿ ನಡೆಸಿದ್ದು, ಇದೀಗ 10 ಜಿಲ್ಲೆಗಳ ಪಂದ್ಯವನ್ನು ಭಟ್ಕಳದಲ್ಲಿ ಜಿಲ್ಲಾ ಮತ್ತು ತಾಲೂಕು ಕಬಡ್ಡಿ ಅಸೋಸಿಯೇಶನ್ ಸಹಯೋಗದಲ್ಲಿ ನಡೆಸಲು ನಿರ್ಧರಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ರವೂಪ್ ನಾಯ್ಕೆ, ವೆಂಕಟೇಶ ನಾಯ್ಕ ಶಿರಾಲಿ, ಗಣೇಶ ನಾಯ್ಕ, ಸುರೇಶ ನಾಯ್ಕ, ಖಮರ್ ಸಾದಾ, ಅಝೀರ್ರೆಹಮಾನ್, ವಾಸು ನಾಯ್ಕ, ಜಾಫರ್, ಗಣೇಶ ನಾಯ್ಕ ಮುಂತಾದವರಿದ್ದರು.