ಕುವೆಂಪು ವಿವಿಯಲ್ಲಿ ರಾಜ್ಯಮಟ್ಟದ ಖೋ ಖೋ ತೀರ್ಪುಗಾರರ ಪರೀಕ್ಷೆ
KannadaprabhaNewsNetwork | Published : Oct 08 2023, 12:00 AM IST
ಕುವೆಂಪು ವಿವಿಯಲ್ಲಿ ರಾಜ್ಯಮಟ್ಟದ ಖೋ ಖೋ ತೀರ್ಪುಗಾರರ ಪರೀಕ್ಷೆ
ಸಾರಾಂಶ
ಪ್ರೊ ಹಿರೇಮಠ್ ಸಭಾಂಗಣ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ, ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆ ಮತ್ತು ಶಂಕರಘಟ್ಟದ ರೋವರ್ಸ್ ಮತ್ತು ರೇಂಜರ್ಸ್ ಆಶ್ರಯದಲ್ಲಿ ವಿಶ್ವದ್ಯಾಲಯದ ಪ್ರೊ. ಎಸ್.ಪಿ. ಹಿರೇಮಠ್ ಸಭಾಂಗಣದಲ್ಲಿ ಶನಿವಾರ ರಾಜ್ಯಮಟ್ಟದ ಖೋ ಖೋ ತೀರ್ಪುಗಾರರ ಪರೀಕ್ಷೆ ನಡೆಯಿತು. ಪರೀಕ್ಷೆಗೆ ಮುಂಚೆ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ಕುಲಪತಿ ಪ್ರೊ. ಎಸ್. ವೆಂಕಟೇಶ್ ನೆರವೇರಿಸಿದರು. ವಿ.ವಿ.ಯ ಡಾ. ಎನ್.ಡಿ. ವಿರೂಪಾಕ್ಷ, ಡಾ.ರವೀಂದ್ರ ಗೌಡ, ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಖೋ ಖೋ ಕೋಚ್ ನಟರಾಜ್, ರಾಜ್ಯ ಖೋ ಖೋ ತೀರ್ಪುಗಾರರ ಮಂಡಳಿ ಅಧ್ಯಕ್ಷ ಬಸವರಾಜ್ ಚಿಲಕಾಂತಮಠ, ಡಾ. ಸಿ. ಚಂದ್ರಶೇಖರ್, ಡಾ. ತಂಗಾರಾಣಿ ಉಪಸ್ಥಿತರಿದ್ದರು. - - -