ಸಾರಾಂಶ
ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ವಿಜ್ಞಾನ ಕಾಲೇಜಿನ ಕ್ರೀಡಾಂಗಣದಲ್ಲಿ ಇತ್ತೀಚಿಗೆ ಶ್ರೀ ದುರ್ಗಾ ಕ್ರಿಕೆಟರ್ಸ್ ಹಾಸನ ಅವರಿಂದ ರಾಜ್ಯಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ವಿವಿಧ ಜಿಲ್ಲೆಗಳ ಹಲವು ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಅದರಲ್ಲಿ ಹಾಸನ ನಗರದ ವಿನಾಯಕ ಜ್ಯುವೆಲ್ಲರ್ಸ್ (ಎಸ್.ವಿ.ಜೆ.) ಮಾಲೀಕರಾದ ಕೆ.ಆರ್. ಭಾಸ್ಕರ್ ಅವರ ಒಡೆಯತ್ವದ ಶ್ರೀರಾಮ್ ಕ್ರಿಕೆಟರ್ಸ್ ತಂಡ ದ್ವಿತೀಯ ಸ್ಥಾನವನ್ನು ಪಡೆದಿದೆ.
ಕನ್ನಡಪ್ರಭ ವಾರ್ತೆ ಹಾಸನ
ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ವಿಜ್ಞಾನ ಕಾಲೇಜಿನ ಕ್ರೀಡಾಂಗಣದಲ್ಲಿ ಇತ್ತೀಚಿಗೆ ಶ್ರೀ ದುರ್ಗಾ ಕ್ರಿಕೆಟರ್ಸ್ ಹಾಸನ ಅವರಿಂದ ರಾಜ್ಯಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ವಿವಿಧ ಜಿಲ್ಲೆಗಳ ಹಲವು ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಅದರಲ್ಲಿ ಹಾಸನ ನಗರದ ವಿನಾಯಕ ಜ್ಯುವೆಲ್ಲರ್ಸ್ (ಎಸ್.ವಿ.ಜೆ.) ಮಾಲೀಕರಾದ ಕೆ.ಆರ್. ಭಾಸ್ಕರ್ ಅವರ ಒಡೆಯತ್ವದ ಶ್ರೀರಾಮ್ ಕ್ರಿಕೆಟರ್ಸ್ ತಂಡ ದ್ವಿತೀಯ ಸ್ಥಾನವನ್ನು ಪಡೆದಿದೆ.ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಜೆ. ಗೌಡ ಅವರು ವಿಜೇತ ಮತ್ತು ರನ್ನರ್-ಅಪ್ ತಂಡಗಳಿಗೆ ನಗದು ಬಹುಮಾನ ಹಾಗೂ ಪಾರಿತೋಷಕಗಳನ್ನು ವಿತರಿಸಿದರು.ಇದೇ ವೇಳೆ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಚ್. ವಿ. ಹರೀಶ್, ಸಹ ಕಾರ್ಯದರ್ಶಿ ಎಚ್. ಆರ್. ಪ್ರಸನ್ನ ಕುಮಾರ್, ಹೊಳೆನರಸೀಪುರ ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಿ. ಎಚ್. ಗಂಗಾಧರಾಚಾರ್, ಹಾಸನ ತಾಲೂಕು ವಿಶ್ವಕರ್ಮ ಯುವಕ ಸಂಘದ ಅಧ್ಯಕ್ಷ ಎಚ್.ಕೆ. ಸತೀಶ್, ಕೆ.ಪಿ. ಅಮಿತ್, ಕ್ರೀಡಾಕೂಟದ ಆಯೋಜಕರು ಎಂ. ಸುದೇವನ್, ಯು.ಆರ್. ಅರುಣ್ ಕುಮಾರ್, ಜೀವನ್ ಕುಮಾರ್, ಎ.ಟಿ. ಕುಮಾರ್, ಶಶಿ ಕುಮಾರ್, ನವೀನ್, ಶ್ರೀನಿವಾಸಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))