ಕಾಶಿನಾಥ ಚಲವಾ ಅವರು ಆರ್ಥಿಕವಾಗಿ ಬಡ ಕುಟುಂಬದಲ್ಲಿ ಜನಿಸಿದರು ಸಹ ಸಂಸ್ಕಾರ ಮತ್ತು ಮಾನಸಿಕವಾಗಿ ಶ್ರೀಮಂತರಾಗಿದ್ದಾರೆ ಎಂದು ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಡಾ.ಜಗನಾಥ ಹೆಬ್ಬಾಳೆ ನುಡಿದರು.

ಕನ್ನಡಪ್ರಭ ವಾರ್ತೆ ಬೀದರ್

ಕಾಶಿನಾಥ ಚಲವಾ ಅವರು ಆರ್ಥಿಕವಾಗಿ ಬಡ ಕುಟುಂಬದಲ್ಲಿ ಜನಿಸಿದರು ಸಹ ಸಂಸ್ಕಾರ ಮತ್ತು ಮಾನಸಿಕವಾಗಿ ಶ್ರೀಮಂತರಾಗಿದ್ದಾರೆ ಎಂದು ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಡಾ.ಜಗನಾಥ ಹೆಬ್ಬಾಳೆ ನುಡಿದರು.

ಕರ್ನಾಟಕ ಸಾಹಿತ್ಯ ಸಂಘದಲ್ಲಿ ಭಾನುವಾರ ಜರುಗಿದ ಮಾರ್ಗ ದಾತಾ ಕನ್ನಡ ದಿನ ಪತ್ರಿಕೆ ಹಾಗೂ ಜಿಲ್ಲೆಯ ಪ್ರಾಥಮಿಕ ಶಾಲೆಯ ಶಿಕ್ಷಣದ ಸ್ಥಿತಿಗತಿ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಳ್ಳಿಯಲ್ಲಿ ಶಿಕ್ಷಣ ಸಂಸ್ಥೆಗಳು ಪ್ರಾರಂಭಿಸಿ ಸಿಬ್ಬಂದಿಗಳು ಮತ್ತು ವಿಧ್ಯಾರ್ಥಿಗಳ ಪಾಲಿನ ಪಾಲಕ ಪೋಷಕರಾಗಿದ್ದಾರೆ ಎಂದರು.

ಭಂತೆ ಸಂಘರಖ್ಖಿತ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪುಸ್ತಕದ ಲೇಖಕರು ಮತ್ತು ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ.ಕಾಶಿನಾಥ ಚೆಲ್ವಾ ಮಾತನಾಡಿ, ಎಲ್ಲಾ ಕ್ಷೇತ್ರದಲ್ಲಿ ಕಾರ್ಯ ಮಾಡಿದ್ದು ಈಗ ಅಳಿಲು ಸೇವೆ ಮಾಡಲು ತಥಾಗತ್ ಗೌತಮ ಬುದ್ಧ ಡಾ.ಬಾಬಾಸಾಹೇಬ್ ಸಾಹೇಬ್ ಅಂಬೇಡ್ಕರ್ ಅವರ ಕೃಪಾಶಿರ್ವಾದ ಮತ್ತು ಕುಟುಂಬದವರ ಬೆಂಬಲವೆ ಮೂಲ ಕಾರಣವಾಗಿದೆ. ಪುಸ್ತಕದಲ್ಲಿ ಬೀದರ ಜಿಲ್ಲೆಯ ಪ್ರಾಥಮಿಕ ಶಾಲೆಗಳ ಶಿಕ್ಷಣ ಸ್ಥಿತಿಗತಿ ಕುರಿತು ಅಧ್ಯಯನ ಮಾಡಿ ಅಭಿವೃದ್ಧಿ ಮತ್ತು ಅದರ ಮಾರ್ಗೋಪಾಯಗಳು ಸಹ ದಾಖಲೆ ಸಮೇತ ತಿಳಿಸಲಾಗಿದೆ ಎಂದರು.

ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಂಭುಲಿಂಗ ಕಾಮಣ್ಣ ಪುಸ್ತಕದ ಪರಿಚಯ ನೀಡಿದರು. ಡಿ.ಡಿ.ಪಿ.ಐ. ಓಂಕಾರ ರೋಗನ್, ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಪ್ರೇಮಸಾಗರ ದಾಂಡೇಕರ್, ನಿವೃತ ಶಿಕ್ಷಣಾಧಿಕಾರಿ, ಟಿ.ಆರ್. ದೊಡ್ಡೆ, ಸಾಹಿತಿಗಳಾದ ಎಸ್.ಬಿ.ಕುಚ್ಬಾಳ ಮಾತನಾಡಿದರು.

ಪ್ರಮುಖರಾದ ಕೆ.ಎಸ್.ಬಂಧು, ಎಸ್.ಎಂ.ಜನವಾಡಕರ್, ವಿಠಲದಾಸ ಪ್ಯಾಗೆ, ವಿಜಯಕುಮಾರ ಶಿಂಧೆ, ಎಂ.ಎಸ್.ಮನೋಹರ, ಓಂಪ್ರಕಾಶ ರೊಟ್ಟೆ, ಎಲ್.ಜಿ.ಗುಪ್ತಾ, ದಶರಥ ಗುರು, ಶಂಭುಲಿಂಗ ಕುದುರೆ, ಮುಖೇಶ ಚೆಲ್ವಾ, ಶರಣು ಫುಲೆ, ಡಾ.ಧಮ್ಮರತ್ನ ಚೆಲ್ವಾ ಉಪಸ್ಥಿತರಿದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.