ಬಾದಾಮಿ ತಾಲೂಕಿನ ಯಂಕಂಚಿ-ಮಣಿನಾಗರದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆ(ಕೆಜಿಬಿವಿ)ಗೆ ಶುಕ್ರವಾರ ಬೆಂಗಳೂರಿನ ಎಸ್.ಎಸ್.ಕೆ. ರಾಜ್ಯ ಯೋಜನಾ ನಿರ್ದೇಶಕರ ಕಚೇರಿಯ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಅವರು ಭೇಟಿ ನೀಡಿ ಸಲಹೆ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಬಾದಾಮಿ
ತಾಲೂಕಿನ ಯಂಕಂಚಿ-ಮಣಿನಾಗರದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆ(ಕೆಜಿಬಿವಿ)ಗೆ ಶುಕ್ರವಾರ ಬೆಂಗಳೂರಿನ ಎಸ್.ಎಸ್.ಕೆ. ರಾಜ್ಯ ಯೋಜನಾ ನಿರ್ದೇಶಕರ ಕಚೇರಿಯ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಅವರು ಭೇಟಿ ನೀಡಿ ಸಲಹೆ ಸೂಚನೆ ನೀಡಿದರು.ಸಂದರ್ಶನ ನೀಡಿದ ವೇಳೆಯಲ್ಲಿ ಆಡಳಿತಾತ್ಮಕವಾಗಿ ವಿಷಯದ ಕುರಿತು ಚರ್ಚಿಸಿ ಸಂಬಂಧಿಸಿದ ಎಲ್ಲಾ ಕಡತಗಳನ್ನು ವೀಕ್ಷಿಸಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಜತೆಗೆ ಮಕ್ಕಳ ಹಕ್ಕುಗಳ ಐದು ರಜಿಸ್ಟರ್‌ಗಳು, ಕಡತಗಳು, ಮಕ್ಕಳ, ಶಿಕ್ಷಕಿಯರ ಹಾಗೂ ಪಾಲಕ, ಪೋಷಕರ ಬದ್ಧತಾ ಸ್ವೀಕಾರ ಪತ್ರಗಳ ಕಡತ ವೀಕ್ಷಿಸಿ ಶಾಲೆಗೆ ಬಂದವರು ಎಲ್ಲರ ಬದ್ಧತಾ ಸ್ವೀಕಾರ ಪತ್ರ ತೆಗೆದುಕೊಳ್ಳಲು ಸೂಚಿಸಿದರು. ಶಾಲೆಯಲ್ಲಿರುವ ಬಯೋಮೆಟ್ರಿಕ್, ಸಿಸಿ ಕ್ಯಾಮೆರಾ, ಪೊಲೀಸ್ ಬುಕ್ ಪಾಯಿಂಟ್, ಊಟ, ಉಪಹಾರ, ಡ್ರೈಫುಟ್ಸ್, ದಿನಬಳಕೆ ಸಾಮಗ್ರಿಗಳ ಇತ್ಯಾದಿ ರಜಿಸ್ಟರ್ ಪರಿಶೀಲನೆ ಮಾಡಿ ಮಕ್ಕಳೊಂದಿಗೆ ಚರ್ಚಿಸಿ, ರಜೆ ಪತ್ರ, ಪಾಲಕ, ಪೋಷಕರ ಸಹಿ ರಜಿಸ್ಟರ್, ಸಭೆಗಳು, ವೈದ್ಯಕೀಯ ತಪಾಸಣೆ ಎಲ್ಲದರ ಕುರಿತು ಮಕ್ಕಳೊಂದಿಗೆ ಸಮಾಲೋಚಿಸಿ ಇನ್ನೂ ಏನಾದರೂ ಬೇಕಿದ್ದರೆ ಹೇಳಿ ಎಂದಾಗ ಮಕ್ಕಳು ಕಾಂಪೌಂಡ್ ದುರಸ್ತಿ ಮಾಡಿಸಲು ತಿಳಿಸಿದರು. ಇದಕ್ಕೆ ಚಂದ್ರಶೇಖರ ಮೆಚ್ಚುಗೆ ವ್ಯಕ್ತಪಡಿಸಿದರು.
ವಸತಿ ನಿಲಯದ ಕಂಪ್ಯೂಟರ್ ಕೊಠಡಿ, ಅಡುಗೆ ಕೊಠಡಿ,ದಾಸ್ತಾನು ಕೊಠಡಿ ಹಾಗೂ ಶೌಚಾಲಯ, ಸ್ನಾನಗೃಹಗಳ ಸ್ವಚ್ಛತೆ ಹಾಗೂ ಶಾಲಾ ಹೊರಾಂಗಣ, ಒಳಾಂಗಣಗಳ ಚಿತ್ರಣ ಗಮನಿಸಿ ಪಾಲಕ, ಪೋಷಕರಿಗೆ ಕೂಡ್ರಲು ಆವರಣದಲ್ಲಿ ವ್ಯವಸ್ಥೆ ಮಾಡಿದ ಸಿಮೆಂಟ್ ಬೆಂಚ್ ಗಳನ್ನು ನೋಡಿ ಇದೊಂದು ಮಾದರಿ ಶಾಲೆಯಾಗಿದೆ ಎಂದು ವ್ಯಕ್ತಪಡಿಸಿದರು,ಮಕ್ಕಳ ಶಿಸ್ತು, ಹಚ್ಚು ಹಸಿರಿನ ಶಾಲಾ ವಾತಾವರಣ, ಮಕ್ಕಳ ಗುಣಾತ್ಮಕ ಕಲಿಕೆ, ಶುಚಿರುಚಿಯಾದ ಊಟ, ಸರಕಾರದ ಸೌಲಭ್ಯಗಳ ಬಳಕೆ, ಅಚ್ಚುಕಟ್ಟಾದ ಕಾರ್ಯಾಲಯ ಕೊಠಡಿ ಹಾಗೂ ಚಿಕ್ಕ ಚೊಕ್ಕದಾದ ಸಭಾಂಗಣ, ನಿತ್ಯ ಬಳಕೆಯಲ್ಲಿರುವ ತೆಂಗು, ಚಿಕ್ಕು, ನುಗ್ಗೆ, ಲಿಂಬೆ, ಪಪ್ಪಾಯಿ ಇತ್ಯಾದಿ ಗಿಡ-ಮರಗಳನ್ನು ನೋಡುತ್ತ ಊಟದ ಮೆನು ಜೊತೆಗೆ ಡ್ರೈಫುಟ್ಸ್ ಮೆನು ಹಾಕಲು ಸೂಚಿಸಿ, ಈ ಶಾಲೆಯಲ್ಲಿ ಸರಕಾರದ ಅನುದಾನ ಸಮರ್ಪಕವಾಗಿ ಬಳಕೆಯಾಗಿದೆ ಎನ್ನುವ ವಿಚಾರವನ್ನು ಜೊತೆಗೆ ಆಗಮಿಸಿದ ಜಿಲ್ಲೆಯ ಉಪನಿರ್ದೇಶಕರ ಕಚೇರಿಯ ವಿಷಯ ಪರೀವಿಕ್ಷಕ ನ್ಯಾಮಗೌಡ ಹಾಗೂ ತಾಂತ್ರಿಕ ಸಹಾಯಕ ಅರವಿಂದ ಜವಳಗಿ ಯವರಿಗೆ ತಿಳಿಸಿದರು. ಜಿಲ್ಲೆಯಲ್ಲಿ ಮಾದರಿ ಕೆಜಿಬಿವ್ಹಿ ಶಾಲೆಯಾಗಿದೆ ಎಂದು ಮೆಚ್ಚು ವ್ಯಕ್ತಪಡಿಸಿದರು.
ಜಿಲ್ಲಾ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯ ತಾಂತ್ರಿಕ ಸಹಾಯಕ ಅರವಿಂದ ಜವಳಗಿ, ಉಪನಿರ್ದೇಶಕರ ಕಚೇರಿಯ ವಿಷಯ ಪರೀವಿಕ್ಷಕ ಮೋಹನಕುಮಾರ ನ್ಯಾಮಗೌಡ, ಮುಖ್ಯ ಶಿಕ್ಷಕಿ ಬಸಮ್ಮ ನರಸಾಪುರ ಹಾಗೂ ಸಿಬ್ಬಂದಿ ಸಕ್ಕಮ್ಮ ಅಮೃತಾ ಬೆನಾಳ, ನಾಗಮ್ಮ, ಲಕ್ಷ್ಮೀ ಹಾಗೂ ಅಡುಗೆ ಸಿಬ್ಬಂದಿ ಇದ್ದರು.