ಸಾರಾಂಶ
ಹಾಸನ ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪವರ್ ಲಿಫ್ಟರ್ಸ್ ಸಂಸ್ಥೆ ಮತ್ತು ರಾಜ್ಯ ಪವರ್ ಲಿಫ್ಟರ್ಸ್ ಸಂಸ್ಥೆ ಮಂಗಳೂರು. ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೪೯ನೇ ಪುರುಷರ ಮತ್ತು ೪೧ನೇ ಮಹಿಳೆಯರ ರಾಜ್ಯ ಸೀನಿಯರ್ ಪವರ್ ಲಿಫ್ಟಿಂಗ್ ಸ್ಪರ್ಧೆಯ ಉದ್ಘಾಟನೆಯನ್ನು ರಾಜ್ಯ ಲಿಫ್ಟರ್ಸ್ ಸಂಸ್ಥೆಯ ಕಾರ್ಯದರ್ಶಿಗಳಾದ ಸತೀಶ್ ಕುದ್ರೋಳಿ ನಡೆಸಿದರು.
ಹಾಸನ: ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪವರ್ ಲಿಫ್ಟರ್ಸ್ ಸಂಸ್ಥೆ ಮತ್ತು ರಾಜ್ಯ ಪವರ್ ಲಿಫ್ಟರ್ಸ್ ಸಂಸ್ಥೆ ಮಂಗಳೂರು. ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೪೯ನೇ ಪುರುಷರ ಮತ್ತು ೪೧ನೇ ಮಹಿಳೆಯರ ರಾಜ್ಯ ಸೀನಿಯರ್ ಪವರ್ ಲಿಫ್ಟಿಂಗ್ ಸ್ಪರ್ಧೆಯ ಉದ್ಘಾಟನೆಯನ್ನು ರಾಜ್ಯ ಲಿಫ್ಟರ್ಸ್ ಸಂಸ್ಥೆಯ ಕಾರ್ಯದರ್ಶಿಗಳಾದ ಸತೀಶ್ ಕುದ್ರೋಳಿ ನಡೆಸಿದರು.
ಈ ಇದೆ ವೇಳೆ ಜಿಲ್ಲಾ ಸಂಸ್ಥೆಯ ಅಧ್ಯಕ್ಷರಾದ ಈ ಕೃಷ್ಣೇಗೌಡರ ಅಧ್ಯಕ್ಷತೆಯಲ್ಲಿ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕ್ರೀಡಾ ಪರಿಷತ್ ಕಾರ್ಯದರ್ಶಿಗಳಾದ ನಿರಂಜನ ರಾಜ್, ರಾಜ್ಯ ಬಾಡಿ ಬಿಲ್ಡರ್ ಸಂಸ್ಥೆಯ ಉಪಾಧ್ಯಕ್ಷರಾದ ಮೋಹನ್ ಕುಮಾರ್, ಸ. ಪ. ಪೂ. ಕಾಲೇಜಿನ, ಹೈಸ್ಕೂಲ್ ವಿಭಾಗದ ಮುಖ್ಯ ಶಿಕ್ಷಕರಾದ, ಶೈಲಜ ರವುಗಲು ಭಾಗವಹಿಸಿದ್ದರು.. ಅಂತಾರಾಷ್ಟ್ರೀಯ ಪವರ್ ಲಿಫ್ಟರ್ಸ್ ಹನುಮಂತ ಗೌಡ ಸ್ವಾಗತ ಕೋರಿದರು. ಅಶ್ವತ್ಥ್ ರವರು ವಂದನೆಸಲ್ಲಿಸಿದರು. ಧರ್ಮರವರು ಕಾಯಕ್ರಮ ನಿರೂಪಿಸಿದರು.