ಶಿವಾರ ಪಟ್ಟಣದಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಪುತ್ಥಳಿ ಅನಾವರಣ

| Published : Oct 06 2025, 01:00 AM IST

ಸಾರಾಂಶ

ಪಂಚಾಯ್ತಿ ವ್ಯಾಪ್ತಿಯಲ್ಲಿ ವಾಲ್ಮೀಕಿ ಸಮುದಾಯವು ಹೆಚ್ಚಾಗಿದ್ದು , ಎಲ್ಲ ಸಮಾಜದೊಂದಿಗೆ ಸೋದರತ್ವದಿಂದ ಜೀವನ ಸಾಗಿಸುತ್ತಿದ್ದಾರೆ.

ಮಾಲೂರು: ಮರ್ಯಾದಾ ಪುರುಷೋತ್ತಮನನ್ನು ಲೋಕಕ್ಕೆ ಪರಿಚಯಿಸಿ ನಮ್ಮ ದೇಶದ ಸಂಸ್ಕೃತಿ ಹೆಮ್ಮೆಪಡುವಂತೆ ಮಾಡಿದ್ದ ಮಹರ್ಷಿ ವಾಲ್ಮೀಕಿ ಅವರು ಒಂದು ಸಮುದಾಯಕ್ಕೆ ಸೀಮಿತರಲ್ಲ, ದೇಶದ ಎಲ್ಲ ಜಾತಿ, ಧರ್ಮಗಳಿಗೆ ಸೇರಿದವರು ಎಂದು ತಾಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಭುವನಹಳ್ಳಿ ಅಬ್ಬಯ್ಯಪ್ಪ ಹೇಳಿದರು.

ಅವರು ತಾಲೂಕಿನ ಕಸಬಾ ಹೋಬಳಿ ಶಿವಾರಪಟ್ಟಣದ ನರಸಾಪುರ ಮುಖ್ಯ ರಸ್ತೆಯ ಭಾವನಹಳ್ಳಿ ಗೇಟ್‌ ಬಳಿ ವಾಲ್ಮೀಕಿ ಜನಾಂಗದ ಸಹಕಾರದಲ್ಲಿ ನಿರ್ಮಿಸಲಾಗಿದ್ದ ಶ್ರಿ ವಾಲ್ಮೀಕಿ ಮಹರ್ಷಿ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಿವಾರಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಜಗನ್ನಾಥಾಚಾರಿ ಮಾತನಾಡಿ, ಪಂಚಾಯ್ತಿ ವ್ಯಾಪ್ತಿಯಲ್ಲಿ ವಾಲ್ಮೀಕಿ ಸಮುದಾಯವು ಹೆಚ್ಚಾಗಿದ್ದು , ಎಲ್ಲ ಸಮಾಜದೊಂದಿಗೆ ಸೋದರತ್ವದಿಂದ ಜೀವನ ಸಾಗಿಸುತ್ತಿದ್ದಾರೆ. ಈ ವೃತ್ತಕ್ಕೆ ಶ್ರೀ ವಾಲ್ಮೀಕಿ ಮಹರ್ಷಿ ವೃತ್ತ ಎಂದು ಹೆಸರಿಡಲು ಚರ್ಚಿಸುವುದಾಗಿ ತಿಳಿಸಿದರು. ಪಂಚಾಯ್ತಿ ಸದಸ್ಯ ಅನಂತನಾಯಕ್‌ ,ಮುನಿರಾಜು, ನರಸಿಂಹ ನಾಯಕ, ಹುಂಗೇನಗಳ್ಳಿ ವೆಂಕಟೇಶ್‌ , ವಾಲ್ಮೀಕಿ ಸ್ವಾಭಿಮಾನಿ ಸಂಘದ ಜಿಲ್ಲಾಧ್ಯಕ್ಷ ನರಸಾಪುರ ನಾಗರಾಜ್‌, ಲಘುಮನಾಯಕ್‌, ವೆಂಕಟಾಚಲಪತಿ, ಶಿವಾರನಾರಾಯಣ ಸ್ವಾಮಿ , ವಾಲ್ಮೀಕಿ ಯುವ ವೇದಿಕೆ ಅಧ್ಯಕ್ಷ ಟಿ.ಕೆ.ನಾಗರಾಜ್‌ ,ಭುವನಹಳ್ಳಿ ಚಲಪತಿ, ಗಗನ್‌ ನಾಯಕ್‌, ಗಿರಿ, ಅಶ್ವತ್ಥಪ್ಪ, ಸುಬ್ರಮಣ್ಯ ನಾಯಕ್‌, ಚಿನ್ನಗಿರಿ, ವೆಂಕಟೇಶ್‌, ಆನಂದ್‌ ನಾಯಕ್‌ , ನಾಗರಾಜ್‌ ಇನ್ನಿತರರು ಇದ್ದರು.