ಮದ್ಯವ್ಯಸನದಿಂದ ದೂರವಿದ್ದು ನೆಮ್ಮದಿ ಜೀವನ ನಡೆಸಿ

| Published : Jul 23 2024, 01:48 AM IST

ಸಾರಾಂಶ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯು ಗ್ರಾಮಾಂತರ ಪ್ರದೇಶಗಳಲ್ಲಿನ ಅಶಕ್ತ ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸುವ ಆರ್ಥಿಕ ಶಕ್ತಿ ನೀಡುವ ಜೊತೆಗೆ ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಹಮ್ಮಿಕೊಂಡು ಮುನ್ನಡೆಸುತ್ತಿದೆ. ಇದನ್ನು ನೋಡಿದಾಗ ಸಂಸ್ಥೆ ಜನಪರ ಕಾಳಜಿ ಎದ್ದು ತೋರುತ್ತದೆ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಚನ್ನಗಿರಿಯಲ್ಲಿ ಹೇಳಿದ್ದಾರೆ.

- ಬುಳಸಾಗರದಲ್ಲಿ ಮದ್ಯವರ್ಜನೆ ಶಿಬಿರ ಉದ್ಘಾಟಿಸಿ ಮಾಡಾಳು ವಿರೂಪಾಕ್ಷಪ್ಪ - - - ಕನ್ನಡಪ್ರಭ ವಾರ್ತೆ, ಚನ್ನಗಿರಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯು ಗ್ರಾಮಾಂತರ ಪ್ರದೇಶಗಳಲ್ಲಿನ ಅಶಕ್ತ ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸುವ ಆರ್ಥಿಕ ಶಕ್ತಿ ನೀಡುವ ಜೊತೆಗೆ ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಹಮ್ಮಿಕೊಂಡು ಮುನ್ನಡೆಸುತ್ತಿದೆ. ಇದನ್ನು ನೋಡಿದಾಗ ಸಂಸ್ಥೆ ಜನಪರ ಕಾಳಜಿ ಎದ್ದು ತೋರುತ್ತದೆ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.

ಸೋಮವಾರ ತಾಲೂಕಿನ ಬುಳಸಾಗರ ಗ್ರಾಮದ ಶ್ರೀ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಆಶ್ರಯದಲ್ಲಿ 1826ನೇ ಮದ್ಯವರ್ಜನಾ ಶಿಬಿರವು ಜು.22ರಿಂದ 29ರವರೆಗೆ ನಡೆಯಲಿರುವ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಮದ್ಯಪಾನ ಮಾಡುವುದರಿಂದ ಸಾಂಸಾರಿಕ ಜೀವನದಲ್ಲಿ ಬಡತನ ಜೊತೆಗೆ ಅನಾರೋಗ್ಯಕ್ಕೆ ತುತ್ತಾಗಿ ಸಾಮಾಜಿಕ ಅಪಮಾನಕ್ಕೆ ಒಳಗಾಗುತ್ತೀರಿ. ಇಂತಹ ಮದ್ಯವ್ಯಸನದಿಂದ ಜನತೆ ದೂರವಿದ್ದು, ನೆಮ್ಮದಿ ಜೀವನ ನಡೆಸಬೇಕು ಎಂಬ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯವರು ಮಧ್ಯವರ್ಜನ ಶಿಬಿರ ನಡೆಸುತ್ತಿದ್ದಾರೆ. ವ್ಯಸನಿಗಳನ್ನು ಕುಡಿತದಿಂದ ಹೊರತರುವಲ್ಲಿ ನಡೆಸುತ್ತಿರುವ ಶಿಬಿರ ಉತ್ತಮ ಸೇವಾ ಕಾರ್ಯಗಳಲ್ಲಿ ಒಂದಾಗಿದೆ ಎಂದು ಶ್ಲಾಘಿಸಿದರು.

ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎಂ.ಬಿ.ನಾಗರಾಜ್ ಮಾತನಾಡಿ, ಮದ್ಯವ್ಯಸನಿಗಳ ಬದುಕು ಅರಳಿ-ಹಸನಾಗಲು ಇಂತಹ ಶಿಬಿರಗಳಿಂದ ಮಾತ್ರ ಸಾಧ್ಯವಿದೆ. ಜೀವನದಲ್ಲಿ ಬದುಕಿರುವಾಗ ಇನ್ನೊಬ್ಬರಿಗೆ ಮಾದರಿಯಾಗಿ ಇರಬೇಕಾಗಿದೆ. ನಶೆಯ ಅಲೆ ಸಾವಿನ ಬಲೆ ಇದ್ದಂತೆ. ವ್ಯಕ್ತಿಗೆ ಅಂಟಿದ ಕುಡುಕ ಎನ್ನುವ ಪದವನ್ನು ಅಳಿಸಿಹಾಕಲು ಮದ್ದು ಮಾತ್ರೆಗಳಿಲ್ಲದಂತೆ ಮದ್ಯವ್ಯಸನ ಬಿಡಿಸುಲೆಂದೇ ಈ ಶಿಬಿರ ಆಯೋಜಿಸಲಾಗಿದೆ ಎಂದರು.

ಮಾಜಿ ಜಿಪಂ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ ಮಾತನಾಡಿ, ಕುಡಿತದ ಚಟದಿಂದ ದೂರವಾಗಿ ಉತ್ತಮವಾದ ಜೀವನ ನಡೆಸಲು ಈ ಶಿಬಿರ ಸಹಕಾರಿಯಾಗಲಿದೆ ಎಂದರು.

ಅಧ್ಯಕ್ಷತೆಯನ್ನು ಮದ್ಯವರ್ಜನ ಸಮಿತಿ ಅಧ್ಯಕ್ಷ ಕೆ.ಯು. ಓಂಕಾರ ಮೂರ್ತಿ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಯೋಜನೆ ನಿರ್ದೇಶಕ ದಿನೇಶ್ ಪೂಜಾರಿ, ಗ್ರಾಪಂ ಅಧ್ಯಕ್ಷೆ ಸುಶೀಲಮ್ಮ, ಹನುಮಂತಪ್ಪ, ಯೋಜನಾಧಿಕಾರಿ ನಾಗರಾಜ್, ಪ್ರಧಾನ ಸಂಚಾಲಕ ಅನಿಲ್ ಕುಮಾರ್, ಅಜಿತ್ ಕುಮಾರ್, ಸಿದ್ದರಾಮಪ್ಪ, ಸುಶೀಲಮ್ಮ, ಭಾಗ್ಯ ಲೋಹಿತ್ ಉಪಸ್ಥಿತರಿದ್ದರು.

- - - -22ಕೆಸಿಎನ್‌ಜಿ1:

ಚನ್ನಗಿರಿ ತಾಲೂಕಿನ ಬುಳಸಾಗರದಲ್ಲಿ ಏರ್ಪಡಿಸಿದ್ದ ಮದ್ಯವರ್ಜನಾ ಶಿಬಿರವನ್ನು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಉದ್ಘಾಟಿಸಿದರು.