ಮಕ್ಕಳ ಭವಿಷ್ಯಕ್ಕಾಗಿ ಮೊಬೈಲ್‌ನಿಂದ ದೂರವಿರಿ: ಪ್ರಾಂಶುಪಾಲ ಪ್ರಶಾಂತ್

| Published : Aug 29 2024, 12:46 AM IST

ಮಕ್ಕಳ ಭವಿಷ್ಯಕ್ಕಾಗಿ ಮೊಬೈಲ್‌ನಿಂದ ದೂರವಿರಿ: ಪ್ರಾಂಶುಪಾಲ ಪ್ರಶಾಂತ್
Share this Article
  • FB
  • TW
  • Linkdin
  • Email

ಸಾರಾಂಶ

ಮೊಬೈಲ್ ಬಳಕೆಯಿಂದ ದೂರವಿದ್ದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ವಿದ್ಯಾರ್ಥಿಗಳು ತಮ್ಮ ಮುಂದಿನ ಶೈಕ್ಷಣಿಕ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಪೂರ್ಣಪ್ರಜ್ಞ ವಿದ್ಯಾ ಕೇಂದ್ರದ ಪ್ರಾಂಶುಪಾಲ ಪ್ರಶಾಂತ್ ಕುಮಾರ್ ಹೇಳಿದರು. ಬೇಲೂರಿನಲ್ಲಿ ಪೋಷಕರ ಸಭೆಯಲ್ಲಿ ಅವರು ಮಾತನಾಡಿದರು.

ಪೋಷಕರ ಸಭೆ

ಬೇಲೂರು: ಮೊಬೈಲ್ ಬಳಕೆಯಿಂದ ದೂರವಿದ್ದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ವಿದ್ಯಾರ್ಥಿಗಳು ತಮ್ಮ ಮುಂದಿನ ಶೈಕ್ಷಣಿಕ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಪೂರ್ಣಪ್ರಜ್ಞ ವಿದ್ಯಾ ಕೇಂದ್ರದ ಪ್ರಾಂಶುಪಾಲ ಪ್ರಶಾಂತ್ ಕುಮಾರ್ ಹೇಳಿದರು.

ಪಟ್ಟಣದ ಪೂರ್ಣಪ್ರಜ್ಞ ವಿದ್ಯಾ ಕೇಂದ್ರದ ಸಭಾಂಗಣದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಹಾಗೂ ಪೋಷಕರ ಸಭೆಯಲ್ಲಿ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಬದುಕನ್ನು ರೂಪಿಸಿಕೊಳ್ಳಲು ಒಂದು ಘಟ್ಟವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಸೆಳೆತಕ್ಕೆ ಒಳಗಾಗಿ ಶಾಲಾ ಪುಸ್ತಕದಿಂದ ದೂರವಾಗುತ್ತಿದ್ದಾರೆ. ಪೋಷಕರು ಮನೆಯಲ್ಲಿ ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಮಕ್ಕಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಕ್ಷಣಿಕ ಸುಖದ ಆಸೆಗಾಗಿ ಮಕ್ಕಳು ತಮ್ಮ ಮುಂದಿನ ಪ್ರಗತಿ ಮರೆಯುತ್ತಿರುವುದು ವಿಷಾದನೀಯ. ಈಗಲಾದರೂ ಎಚ್ಚೆತ್ತು ಕಲಿಕೆಯ ಬಗ್ಗೆ ಆಸಕ್ತಿ ಹೊಂದಬೇಕು. ಕಠಿಣ ಶ್ರಮದಿಂದ ಗುರಿ ಮುಟ್ಟಲು ಸಾಧ್ಯ ಎಂಬುದನ್ನು ಅರಿಯಬೇಕು ಎಂದು ಹೇಳಿದರು.

ಚಿಕ್ಕಮಗಳೂರು ಜಿಲ್ಲೆಯ ಸಂಗಮೇಶ್ವರ ಪೇಟೆ ಪೂರ್ಣಪ್ರಜ್ಞ ಪಿಯು ಕಾಲೇಜಿನ ಪ್ರಾಂಶುಪಾಲ ಮೇರುತುಂಗಾ ಮಾತನಾಡಿ, ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯ ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆಗಳಾಗಿದ್ದು ರಾಷ್ಟ್ರದ ಯುವಕರನ್ನು ದೈಹಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ರೂಪಿಸುವ ನಿಟ್ಟಿನಲ್ಲಿ ಉಡುಪಿಯ ಆದಿಮಾರು ಶ್ರೀಗಳು ಬೆಂಗಳೂರು, ಉಡುಪಿ ನಂತರ ಈಗ‌ ಚಿಕ್ಕಮಗಳೂರು ಜಿಲ್ಲೆ ಪಶ್ಚಿಮ ಘಟ್ಟದ ಆಲ್ದೂರು ಸಮೀಪ ಇರುವ ಸಂಗಮೇಶ್ವರ ಪೇಟೆಯಲ್ಲಿ ಪೂರ್ಣಪ್ರಜ್ಞ ಪಿಯು ಕಾಲೇಜನ್ನು ಈ ವರ್ಷದಿಂದ ಆರಂಭಿಸಲಾಗಿದೆ. ಪಠ್ಯ ಪಾಠದ ಜೊತೆಗೆ ನೀಟ್, ಜೆಇಇ, ಕೆಸಿಇಟಿ ಕೋಚಿಂಗ್ ಸಹ ಮಾಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮವಾದ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಾಂಶುಪಾಲೆ ಸುನಿತಾ ಕುಮಾರಿ, ಪ್ರಾಧ್ಯಾಪಕರಾದ ಅಮೂಲ್ಯ, ರಚನ್, ಪ್ರಕಾಶ್, ಪೂರ್ವಿಕ, ಪೂನಂ, ಗುರುಪ್ರಸಾದ್ ಮೈಯಾ, ಪೋಷಕರು ಹಾಗೂ ಮಕ್ಕಳು ಭಾಗವಹಿಸಿದ್ದರು.