ಕರ್ನಾಟಕ ರಾಜ್ಯ ಅಸ್ಥಿರೋಗ ತಜ್ಞರ ವಾರ್ಷಿಕ ಸಮ್ಮೇಳನ KO-ACON 2026ರ ಅಂಗವಾಗಿ ವಿಜಯಪುರದಲ್ಲಿ ಆಯೋಜಿಸಲಾದ ಸೈನ್ ಶಸ್ತ್ರಚಿಕಿತ್ಸಾ ಕಾರ್ಯಾಗಾರ ಯಶಸ್ವಿಯಾಗಿ ಜರುಗಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ಕರ್ನಾಟಕ ರಾಜ್ಯ ಅಸ್ಥಿರೋಗ ತಜ್ಞರ ವಾರ್ಷಿಕ ಸಮ್ಮೇಳನ KO-ACON 2026ರ ಅಂಗವಾಗಿ ವಿಜಯಪುರದಲ್ಲಿ ಆಯೋಜಿಸಲಾದ ಸೈನ್ ಶಸ್ತ್ರಚಿಕಿತ್ಸಾ ಕಾರ್ಯಾಗಾರ ಯಶಸ್ವಿಯಾಗಿ ಜರುಗಿತು.

ಕಾರ್ಯಾಗಾರದ ಮೊದಲ ದಿನ ತುಮಕೂರಿನ ಗಂಗಾ ಆಸ್ಪತ್ರೆಯ ಖ್ಯಾತ ಸ್ಪೈನ್ ಶಸ್ತ್ರಚಿಕಿತ್ಸಕ ಹಾಗೂ ಹಿರಿಯ ಅಸ್ಥಿರೋಗ ತಜ್ಞ ಪ್ರೊ.ಡಾ.ವಿಜಯ ತುಬಕಿ ಅವರು Spine Fusion Techniques: Concepts & Philosophies ವಿಷಯದ ಕುರಿತು ಸಮಗ್ರ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಯುವ ಅಸ್ಥಿರೋಗ ಶಸ್ತ್ರಚಿಕಿತ್ಸಕರಿಗಾಗಿ ಸಾ ಬೋನ್ ಮಾದರಿಯಲ್ಲಿ ಸೈನ್ ಶಸ್ತ್ರಚಿಕಿತ್ಸಾ ಕಾರ್ಯಾಗಾರವನ್ನು ನಡೆಸಿ ಸ್ಪೈನ್ ಪ್ಯೂಷನ್ ತಂತ್ರಗಳ ಮೂಲಭೂತ ತತ್ವಗಳು, ಶಸ್ತ್ರಚಿಕಿತ್ಸಾ ನಿರ್ಧಾರ ಪ್ರಕ್ರಿಯೆ ಹಾಗೂ ತಾಂತ್ರಿಕ ಸೂಕ್ಷ್ಮತೆಗಳ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಿ ಯುವ ವೈದ್ಯರಲ್ಲಿ ಅತ್ಯಂತ ಉತ್ಸಾಹ ಹಾಗೂ ಆತ್ಮವಿಶ್ವಾಸ ಮೂಡಿಸಿದರು. 2ನೇ ದಿನ, ಕರ್ನಾಟಕ ರಾಜ್ಯ ಅಸ್ಥಿರೋಗ ತಜ್ಞರ ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ಆಮಂತ್ರಿತ ಫ್ಯಾಕಲ್ಟಿಯಾಗಿ ಪ್ರೊ.ಡಾ.ವಿಜಯ ತುಬಾಕಿ ಅವರು Spine Trauma: Decision Making 2 ಪೀಠೋಪನ್ಯಾಸ ನೀಡಿದರು. ಸೈನ್ ಗಾಯಗಳ ಸಂದರ್ಭದಲ್ಲಿ ಸಮಯೋಚಿತ ಹಾಗೂ ಸರಿಯಾದ ನಿರ್ಧಾರಗಳು ರೋಗಿಯ ಜೀವ ಮತ್ತು ನರ ವ್ಯವಸ್ಥೆಯನ್ನು ಹೇಗೆ ರಕ್ಷಿಸಬಲ್ಲವು ಎಂಬುವುದನ್ನು ಅವರು ಸ್ಪಷ್ಟ ಉದಾಹರಣೆಗಳು ಹಾಗೂ ಕ್ಲಿನಿಕಲ್ ಅನುಭವಗಳ ಮೂಲಕ ವಿವರಿಸಿದರು.