ಸಾರಾಂಶ
ದೇವರಹಿಪ್ಪರಗಿ: ಕ್ಷೇತ್ರದಲ್ಲಿ ಶಿಕ್ಷಣ ಸೇರಿ ಹಲವು ಮೂಲಭೂತ ಸೇವೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು.

ತಾಲೂಕಿನ ಜಾಲವಾದ ಗ್ರಾಮದಲ್ಲಿ ಸೋಮವಾರ ಕೆ.ಪಿ.ಎಸ್ ಶಾಲೆಯ ನೂತನ ಕೊಠಡಿಗಳ ನಿರ್ಮಾಣ ಹಾಗೂ ಯಾಳವಾರ ಗ್ರಾಮದ ನೂತನ ಶಾಲಾ ಕೊಠಡಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಯಾವುದೇ ಗ್ರಾಮದಲ್ಲಿ ಶಿಕ್ಷಣಕ್ಕೆ ಸೌಲಭ್ಯಗಳು ಕೊರತೆ ಆಗಬಾರದೆನ್ನುವುದು ನನ್ನ ಆಶಯ. ಅದಕ್ಕೆ ತಕ್ಕಂತೆ ಶಾಲೆಗಳ ಕಟ್ಟಡ ನಿರ್ಮಾಣ, ದುರಸ್ತಿ, ಆಟದ ಮೈದಾನ, ಕಾಂಪೌಂಡ್ ನಿರ್ಮಾಣ, ಕ್ರೀಡಾ ಸಾಮಗ್ರಿ ಪೂರೈಕೆ, ಕುಡಿಯುವ ನೀರು ವ್ಯವಸ್ಥೆ, ಶಿಕ್ಷಕರ ನೇಮಕ ಎಲ್ಲದಕ್ಕೂ ಕ್ರಮ ಕೈಗೊಳ್ಳಲಾಗಿದೆ. ಹಂತ ಹಂತವಾಗಿ ಗ್ರಾಮಗಳ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.ಜೆಡಿಎಸ್ ತಾಲೂಕ ಘಟಕದ ಅಧ್ಯಕ್ಷ ಸಾಯಿಬಣ್ಣ ಬಾಗೇವಾಡಿ ಮಾತನಾಡಿದರು. ಸಿಂದಗಿ ಜಿಪಂ ಎಇಇ ಜಿ.ವೈ.ಮುರಾಳ ಶಾಲಾ ಕೊಠಡಿಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರ ಪ್ರತಿನಿಧಿ ಲಕ್ಷ್ಮಣ ಕೆಂಗುಟಗಿ, ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜು ಗುಂಡಗಿ, ಸದಸ್ಯರಾದ ಭೀಮರಾಯ ಹಂಗನಳ್ಳಿ, ಮಾಜಿ ತಾಪಂ ಸದಸ್ಯರ ಪ್ರತಿನಿಧಿ ಶ್ರೀಶೈಲ ಗೋಲಗೇರಿ, ಜಿಪಂ ಅಭಿಯಂತರ ಆರತಿ ಅಲ್ಲಿಬಾದಿ, ವಿಲಾಸ ರಾಠೋಡ ಸೇರಿ ಜಾಲವಾದ ಹಾಗೂ ಯಾಳವಾರ ಪ್ರಮುಖರು, ಗುರುಗಳು, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.