ಕನ್ನಡಪ್ರಭ ವಾರ್ತೆ ಕಾಗವಾಡ
ಬಡತನಕ್ಕೂ ಸಾಧನೆಗೂ ಸಂಬಂಧವಿಲ್ಲ, ಪ್ರತಿಭೆ ಇದ್ದಲ್ಲಿ ಯಶಸ್ಸಿನ ಶಿಖರ ಏರಲು ಖಂಡಿತ ಸಾಧ್ಯ ಎಂಬ ಧ್ಯೇಯೋಕ್ತಿಯನ್ನು ನಿರೂಪಿಸಿದ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಇತರರಿಗೆ ಮಾದರಿಯಾಗಿದ್ದಾರೆ ಎಂದು ಕೆಆರ್‌ಈಎಸ್ ಸಂಸ್ಥೆಯ ಉಪಾಧ್ಯಕ್ಷ ಸಂಜಯ ಬಿರಡಿ ಹೇಳಿದರು.ತಾಲೂಕಿನ ಐನಾಪೂರ ಪಟ್ಟಣದ ಕೆಆರ್‌ಈಎಸ್ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ದ್ವಿತೀಯ ವರ್ಷದಲ್ಲಿ ತೇರ್ಗಡೆಗೊಂಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡುತ್ತಿದ್ದರು. ಜೀವನದಲ್ಲಿ ಕೊರತೆಗಳು ಇರುತ್ತವೆ. ಅವುಗಳನ್ನು ದೂಷಿಸುತ್ತಾ ಅವುಗಳಿಗೆ ಅಗ್ರ ಪ್ರಾತಿನಿಧ್ಯ ನೀಡುವ ಬದಲು ಸಾಧನೆಗೆ ಬೇಕಾದ ತಯಾರಿ ಮಾಡಿಕೊಳ್ಳಬೇಕು. ಇಂತಹ ಮನಸ್ಥಿತಿ ಇರುವವರೇ ಭವಿಷ್ಯದಲ್ಲಿ ಬೇಕಾದ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಾರೆ ಎಂಬುದಕ್ಕೆ ನಮ್ಮ ಶಾಲೆಯ ವಿದ್ಯಾರ್ಥಿಗಳೇ ಸಾಕ್ಷಿ ಎಂದು ಎಂದರು.ಕೆಆರ್‌ಈಎಸ್ ಸಂಸ್ಥೆಯ ಅನುದಾನಿತ ಪೌಢ ಶಾಲೆ ವಿಭಾಗದಲ್ಲಿ ಐಶ್ವರ್ಯ ಉಮರಾಣಿ 618 (ಶೇ.98.88) ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾಳೆ. ಶಾಲೆ ಹಾಗೂ ಕ್ಲಸ್ಟರಗೆ ಪ್ರಥಮ, ಕಾಗವಾಡ ವಲಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಶ್ರೇಯಾ ಪಾಟೀಲ 597(ಶೇ.95.52) ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ, ಪ್ರಿಯಾ ಕದ್ದು 572(ಶೇ.91.52) ಅಂಕಗಳನ್ನು ಪಡೆದು ತೃತಿಯ ಸ್ಥಾನ ಪಡೆದುಕೊಂಡಿದ್ದಾಳೆ.ಕೆಆರ್‌ಈಎಸ್ ಸಂಸ್ಥೆಯ ಅನುದಾನರಹಿತ ಪೌಢ ಶಾಲಾ ವಿಭಾಗದಲ್ಲಿ ಸೃಷ್ಠಿ ಖೋತ 607(ಶೇ.97.12) ಅಂಕ ಪಡೆದು ಪ್ರಥಮ, ಅಂಕಿತಾ ನರೋಟೆ 605 (ಶೇ.96.80) ಅಂಕ ಪಡೆದು ದ್ವಿತೀಯ, ವೈಷ್ಣವಿ ಕಾಗಲಿ 598(ಶೇ.95.68) ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ.
ಕೆಆರ್‌ಈಎಸ್ ಸಂಸ್ಥೆಯ ಆಂಗ್ಲ ಮಾಧ್ಯಮ ಪೌಢ ಶಾಲಾ ವಿಭಾಗದಲ್ಲಿ ಪ್ರತೀಕ್ಷಾ ನಾಮದಾರ 608 (ಶೇ.97.28) ಅಂಕ ಪಡೆದು ಪ್ರಥಮ, ಅಶ್ವಿನಿ ಭಿರಡಿ 607(ಶೇ,97.12) ಅಂಕ ಪಡೆದು ದ್ವಿತೀಯ ಸ್ಥಾನ, ಸಿದ್ಧಾಂತ ಸತ್ತಿಕರ 599 (ಶೇ.95.84) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾನೆ.ಕೆಆರ್.ಈ.ಎಸ್ ಸಂಸ್ಥೆಯ ಪಿಯುಸಿ ದ್ವಿತೀಯ ವರ್ಷದ ಕಲಾ ವಿಭಾಗದಲ್ಲಿ ಜ್ಯೋತಿ ಮಾಂಗ 562(ಶೇ.93.66) ಅಂಕ ಪಡೆದು ಪ್ರಥಮ, ಗಾಯತ್ರಿ ಮಾದರ 558(ಶೇ.93) ಅಂಕ ಪಡೆದು ದ್ವಿತೀಯ, ಸೌಮ್ಯ ಸಾಳುಂಕೆ 551(ಶೇ.91.83) ಅಂಕ ಪಡೆದು ತೃತೀಯ, ವಾಣಿಜ್ಯ ವಿಭಾಗದಲ್ಲಿ ಸವಿತಾ ಹಾಲಾರೊಟ್ಟಿ 585 (ಶೇ.97.50) ಅಂಕ ಪಡೆದು ಪ್ರಥಮ, ಅರ್ಚನಾ ಬ್ರಿಷ್ಠಾಣಿ 577(ಶೇ.96.17) ದ್ವಿತೀಯ, ವರ್ಷಾ ಪವಾರ 576 (ಶೇ.96) ತೃತೀಯ ಸ್ಥಾನ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಇವರನ್ನು ಆಡಳಿತ ಮಂಡಳಿಯ ಉಪಾದ್ಯಕ್ಷ ಸಂಜಯ ಭಿರಡಿ, ನಿರ್ದೇಶಕರಾದ ರಾಜೇಂದ್ರ ಪೋತದಾರ, ಪ್ರವೀಣ ಕುಲಕರ್ಣಿ, ಉದಯ ನಿಡಗುಂದಿ ಪ್ರಾಚಾರ್ಯ ಪ್ರೇಮಾನಂದ ಬಿ.ಉಪಪ್ರಾಚಾರ್ಯ ಎ.ಎಂ.ಹುಲ್ಲೆನ್ನವರ, ಮುಖ್ಯೋಪಾದ್ಯಾಯರಾದ ಎಸ್.ಎ.ಮಿಸಾಳ, ಕೆ.ಎಂ.ಸೋಂದಕರ ವಿವಿಧ ವಿಭಾಗಗಳ ಮುಖ್ಯಸ್ಥರು, ಶಿಕ್ಷರು ಉಪಸ್ಥಿತರಿದ್ದು ಮಾತನಾಡಿದರು. ಈ ವೇಳೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.