ಸಾರಾಂಶ
- ಡಿಪ್ಲೊಮಾ ವಿದ್ಯಾರ್ಥಿಗಳ ಇಂಡಕ್ಷನ್ ಕಾರ್ಯಕ್ರಮದಲ್ಲಿ ವಿ.ಕೆ.ದಿವೇಕರ್
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಪ್ರಸ್ತುತ ವಾಣಿಜ್ಯೋದ್ಯಮ ಸ್ಥಾಪಿಸಲು ಬ್ಯಾಂಕ್‌ಗಳಲ್ಲಿ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯಗಳಿವೆ. ಹಾಗಾಗಿ ಪದವಿ ಮುಗಿದ ನಂತರ ಉದ್ಯೋಗ ಅರಸದೇ ಸ್ವಯಂ ಉದ್ಯಮಿಗಳಾಗಿ ರೂಪುಗೊಳ್ಳಬೇಕು ಎಂದು ಶಿವಮೊಗ್ಗದ ಪರ್ಫೆಕ್ಟ್ ಅಲಾಯ್ ಕಾಂಪೊನೆಂಟ್ಸ್ ಪ್ರೈ. ಲಿಮಿಟೆಡ್ ನಿರ್ದೇಶಕ ವಿ.ಕೆ.ದಿವೇಕರ್ ಹೇಳಿದರು.ನಗರದ ಜಿಎಂಐಟಿ ಕಾಲೇಜಿನ ಜಿಎಂ ಹಾಲಮ್ಮ ಸಭಾಂಗಣದಲ್ಲಿ ಸೋಮವಾರ ಜಿಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಜಿಎಂಐಟಿ ಪಾಲಿಟೆಕ್ನಿಕ್ ಕಾಲೇಜು ವತಿಯಿಂದ ಹಮ್ಮಿಕೊಳ್ಳಲಾಗಿದ್ದ 2025-26ನೇ ಸಾಲಿನ ಪ್ರಥಮ ವರ್ಷದ ಡಿಪ್ಲೊಮಾ ವಿದ್ಯಾರ್ಥಿಗಳ ಇಂಡಕ್ಷನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಉದ್ಯೋಗ ಹುಡುಕಿಕೊಂಡು ಕಾಲಹರಣ ಮಾಡುವ ಬದಲು, ಅನುಭವ, ಸಾಮರ್ಥ್ಯದೊಂದಿಗೆ ಸ್ವಯಂ ಉದ್ಯಮ, ಕೈಗಾರಿಕೆಗಳ ಸ್ಥಾಪಿಸಿ ಉದ್ಯೋಗಗಳನ್ನು ಸೃಷ್ಟಿಸಬೇಕು ಎಂದು ತಿಳಿಸಿದರು.
ಮೈಸೂರಿನ ಇನ್ಫೋಸಿಸ್ ಲಿಮಿಟೆಡ್ ತಂತ್ರಜ್ಞಾನ ವಿಶ್ಲೇಷಕ ಸುಶ್ಮೀಂದ್ರ ಎನ್. ರಾವ್ ಮಾತನಾಡಿ, ನಿಮ್ಮ ಜ್ಞಾನವಷ್ಟೇ ಸಮಾಜದಲ್ಲಿ ಪರಿಣಾಮಕಾರಿಯಾಗಿ ನಿಮ್ಮನ್ನು ಗುರುತಿಸಲಿದೆ. ಶೈಕ್ಷಣಿಕ ಸಾಧನೆಯ ಹಿರಿಯ ವಿದ್ಯಾರ್ಥಿಗಳ ಬಳಿ ಅನುಭವ ಪಡೆದುಕೊಂಡು ಸಾಧನೆಗೆ ಮುಂದಾಗಬೇಕು. ವಿದ್ಯಾರ್ಥಿ ಹಂತದ ಸಮಯ ನ್ನು ವ್ಯರ್ಥಮಾಡಿಕೊಳ್ಳದೇ ಭವಿಷ್ಯ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.ಜಿಎಂಐಟಿ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಬಿ. ಸಂಜಯ ಪಾಂಡೆ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಜಿಎಂಯು ಕ್ಯಾರಿಯರ್ ಅಡ್ವೈಸ್ ಅಂಡ್ ಸ್ಟೂಡೆಂಟ್ ಪ್ಲೇಸ್ಮೆಂಟ್ ನಿರ್ದೇಶಕ ಪ್ರೊ. ಟಿ.ಆರ್. ತೇಜಸ್ವಿ ಕಟ್ಟಿಮನಿ, ಜಿಎಂಐಟಿ ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯ ಡಾ. ಬಿ.ಆರ್. ಶ್ರೀಧರ್, ಅಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
- - --30ಕೆಡಿವಿಜಿ32.ಜೆಪಿಜಿ:
ದಾವಣಗೆರೆಯ ಜಿಎಂಐಟಿ ಕಾಲೇಜಿನಲ್ಲಿ ನಡೆದ ಪ್ರಥಮ ವರ್ಷದ ಡಿಪ್ಲೊಮಾ ವಿದ್ಯಾರ್ಥಿಗಳ ಇಂಡಕ್ಷನ್ ಕಾರ್ಯಕ್ರಮವನ್ನು ವಿ.ಕೆ.ದಿವೇಕರ್ ಉದ್ಘಾಟಿಸಿದರು.