ಕರ್ನಾಟಕ ಒಡೆಯುವ ಕ್ಷುದ್ರ ಶಕ್ತಿಗಳನ್ನು ಮೆಟ್ಟಿ ನಿಲ್ಲಿ

| Published : Jan 22 2025, 12:34 AM IST

ಸಾರಾಂಶ

ಭಾರತಮಾತೆಯೇ ಭುವನೇಶ್ವರಿ, ಕರ್ನಾಟಕ ಎಂದು ಹೆಸರಿಟ್ಟವರು ಶಿವ, ಕಾಲಕಾಲೇಶ್ವರ, ಹಂಪಿಯ ವಿರೂಪಾಕ್ಷ ಇಟ್ಟ ಹೆಸರು ಕರ್ನಾಟಕ. ರಾಜ್ಯವನ್ನು ಬೇರೆ ಮಾಡಿ ಎನ್ನುವ ಕ್ಷುದ್ರ ಶಕ್ತಿಗಳು ರಾಜ್ಯದಲ್ಲಿ ವಿಜೃಂಭಿಸುತ್ತಿವೆ

ಗಜೇಂದ್ರಗಡ: ಕರ್ನಾಟಕ ಒಡೆಯಬೇಕು ಎಂಬ ಕ್ಷುದ್ರ ಶಕ್ತಿಗಳನ್ನು ನಾವು ಮೆಟ್ಟಿ ನಿಲ್ಲಬೇಕು ಎಂದು ಸಂಸ್ಕೃತಿ ಚಿಂತಕ ರವೀಂದ್ರನಾಥ ದೊಡ್ಡಮೇಟಿ ಹೇಳಿದರು.

ಪಟ್ಟಣದ ಸಿಬಿಎಸ್‌ಸಿ ಶಾಲೆಯಲ್ಲಿ ನಡೆಯುತ್ತಿರುವ ೧೦ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ೩ನೇ ಗೋಷ್ಠಿಯಲ್ಲಿ ಗದಗ ಜಿಲ್ಲೆಯ ವಿಶೇಷ ಕುರಿತ ಉಪನ್ಯಾಸದಲ್ಲಿ ಮಾತನಾಡಿದರು.

ಭಾರತಮಾತೆಯೇ ಭುವನೇಶ್ವರಿ, ಕರ್ನಾಟಕ ಎಂದು ಹೆಸರಿಟ್ಟವರು ಶಿವ, ಕಾಲಕಾಲೇಶ್ವರ, ಹಂಪಿಯ ವಿರೂಪಾಕ್ಷ ಇಟ್ಟ ಹೆಸರು ಕರ್ನಾಟಕ. ರಾಜ್ಯವನ್ನು ಬೇರೆ ಮಾಡಿ ಎನ್ನುವ ಕ್ಷುದ್ರ ಶಕ್ತಿಗಳು ರಾಜ್ಯದಲ್ಲಿ ವಿಜೃಂಭಿಸುತ್ತಿವೆ. ಕನ್ನಡ ಹಾಗೂ ಕರ್ನಾಟಕವನ್ನು ಒಡೆಯುವರರಿಗೆ ಶಾಪ ಹಾಕಬೇಕಿದೆ. ಅಖಂಡ ಕರ್ನಾಟಕಕ್ಕಾಗಿ ನಾವು ಒಂದಾಗಬೇಕಿದೆ. ಎರಡು ಭಾಗ, ಮೂರು ಭಾಗ ಎಂದು ಹೇಳುವ ಹೇಳಿಕೆಗಳು ಸಾಕಷ್ಟು ಕಳವಳ ಸೃಷ್ಠಿಸುತ್ತಿವೆ ಎಂದರು.

ಉದಯವಾಗಲಿ ಚೆಲ್ಲುವ ಕನ್ನಡ ಕುರಿತು ಉಪನ್ಯಾಸ ನೀಡಿದ ಮುಕ್ತಾ ಉಡಪಿ, ಸುದೀರ್ಘವಾದ ಇತಿಹಾಸ ಹೊಂದಿರುವ ಕರ್ನಾಟಕ ಮಾತೆ ಅಸಂಖ್ಯಾತ ಕನ್ನಡಿಗರ ಅಸ್ಮಿತೆಯಾಗಿರುವ ಕನ್ನಡ ಭಾಷೆ. ನಾಡು, ನುಡಿ ಹಾಗೂ ಸಾಹಿತ್ಯದ ಉಗಮವಾಯಿತು. ಮಲಗಿದ ಕನ್ನಡಗಿರನ್ನು ಬಡಿದೆಬ್ಬಿಸಿದ ಹಾಡು ಉದಯವಾಗಲಿ ಚೆಲುವ ಕನ್ನಡ ನಾಡು. ಕವಿತೆ ಜನರ ಮನ ಮನಸ್ಸೆ ಗೆದ್ದಿತು. ಆದರೆ ರಚಿಸಿದ ಕವಿ ಜಿಲ್ಲೆಯ ಹುಯಿಲಗೋಳ ನಾರಾಯಣರಾಯರು ಅಷ್ಟೊಂದು ಪ್ರಚಾರಕ್ಕೆ ಬರಲಿಲ್ಲ ಎನ್ನುವ ವಿಪರ್ಯಾಸ. ಪುಣೆಯಲ್ಲಿ ಮರಾಠಿ ಭಾಷೆಯ ನಾಟಕಗಳನ್ನು ನೋಡುವಾಗ ಸಹಚರರು ಕನ್ನಡದಲ್ಲಿ ಏನಿದೆ ಎನ್ನುವ ಹಿಯಾಳಿಕೆಯ ಮಾತುಗಳನ್ನು ಸವಾಲಾಗಿ ಸ್ವೀಕರಿಸಿ ಕನ್ನಡ ಭಾಷೆಯ ಶ್ರೀಮಂತಿಕೆ ಪಸರಿಸುವ ಕಾರ್ಯಕ್ಕೆ ಕಂಕಣ್ಣ ಬದ್ಧವಾದರು. ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡುವ ಕನ್ನಡಗರಿಗಾಗಿ ಉದಯವಾಗಲಿ ಚೆಲುವ ಕನ್ನಡ ನಾಡು ಹಾಡು ನಾಡಗೀತೆಯಾಗಿದ್ದು ಯೋಗಾ, ಯೋಗ. ಹಾಸಿಗೆಯಲ್ಲಿ ಮಲಗಿದ ಕವಿ ರಚಿಸಿದ ಗೀತೆಯೇ, ಕಸಾಪ ೭೫ನೇ ವರ್ಷದ ಕಸಾಪವೇ ಹಾಡನ್ನು ಅಳಿಸಿದ್ದು ವಿಪರ್ಯಾಸ ಎಂದು ಬೇಸರ ವ್ಯಕ್ತ ಪಡಿಸಿದರು ಎಂದರು.

ಗದಗ ಜಿಲ್ಲೆಯಲ್ಲಿ ಗಾಂಧಿ ವಿಷಯ ಕುರಿತ ಉಪನ್ಯಾಸದಲ್ಲಿ ಪ್ರಕಾಶ ಮಾಚೇನಹಳ್ಳಿ, ೨೫ ಸಾವಿರ ಜನ ಸೇರಿ, ೧೨ ನೂರು ಚಕ್ಕಡಿಯಲ್ಲಿ ಮಹಾತ್ಮ ಗಾಂಧೀಜಿಯವರ ಮಾತು ಕೇಳಲು ಆಗಮಿಸಿದ್ದರು. ದಿ. ಅಂದಾನಪ್ಪ ದೊಡ್ಡಮೇಟಿ ಹರಿಜನರ ಅಭಿವೃದ್ಧಿಗಾಗಿ ದಾನವಾಗಿ ಜಮೀನು ನೀಡಿದ್ದು ಇತಿಹಾಸ. ಅಸ್ಪಶೃತೆ ನಿವಾರಣೆ, ಮಹಿಳಾ ಶಿಕ್ಷಣಕ್ಕೆ ಆದ್ಯತೆ, ಗ್ರಾಮೋದ್ಯೋಗ ಆರಂಭವಾದವು. ಗಾಂಧೀಜಿ ಎಲ್ಲರನ್ನೂ ಒಗ್ಗೂಡಿಸಿದ ಗಾಂಧೀಜಿ ಎಂದಿಗೂ ಪ್ರಸ್ತುತ ಎಂದರು.

ಅಧ್ಯಕ್ಷತೆ ವಹಿಸಿದ್ದ ಆರ್.ಎನ್. ಪೊಲೀಸ್ ಪಾಟೀಲ ಮಾತನಾಡಿ, ಜಿಲ್ಲೆ ಚಿಕ್ಕದಾದರೂ ಸಹ ಕೀರ್ತಿ ದೊಡ್ಡದಾಗಿದೆ. ಉತ್ತರ ಕರ್ನಾಟಕದ ಸಹ್ಯಾದ್ರಿ ಎನ್ನಿಸಿಕೊಂಡಿರುವ ಕಪ್ಪತ್ತಗುಡ್ಡದಲ್ಲಿ ಏನಿದೆ ಎನ್ನುವದಕಿಂತ ಏನಿಲ್ಲ ಎನ್ನುವ ಚರ್ಚೆಗಳಾಗಿಬೇಕಿದೆ. ಕಪ್ಪತ್ತಗಿರಿ ಜಿಲ್ಲೆಯ ಸಂಪತ್ತಿನ ಖಜಾನೆಯಾಗಿದೆ. ಇತಂಹ ಕಪ್ಪತಗಿರಿ ರಕ್ಷಣೆ ಜತೆಗೆ ಅಭಿವೃದ್ಧಿಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ದೇಶದ ಅಧಿಕೃತ ಸ್ವಾತಂತ್ರ‍್ಯ ಹೋರಾಟಕ್ಕೆ ನಾಂದಿ ಹಾಡಿದ ಜಿಲ್ಲೆಯಾಗಿದೆ ಗದಗನ ತಾಲೂಕುಗಳು. ಜಿಲ್ಲೆಯ ಸಾಹಿತ್ಯ ಓದುವಾಗ ನಾಡಿನ ಚರಿತ್ರೆ ಓದಿದ ಅನುಭವಾಗುತ್ತದೆ. ಮುದ್ರಣ ಕಾಶಿಯಾಗಿರುವ ಜಿಲ್ಲೆಯ ಮಠ, ಮಾನ್ಯಗಳು ನಾಡಿನ ಸಮಗ್ರ ಅಭಿವೃದ್ಧಿ ಕೊಡುಗೆ ನೀಡಿವೆ ಎಂದರು.

ಜಿಲ್ಲೆಯ ೬೦೦ ಶಾಸನಗಳ ಬಗ್ಗೆ ಅಧ್ಯಯನವಾಗಬೇಕಿದೆ ಎಂದರು.

ಜಯಶ್ರೀ ಹೊಸಮನಿ ಆಶಯ ನುಡಿಗಳನ್ನಾಡಿದರು. ಸಮ್ಮೇಳಾನಧ್ಯಕ್ಷ ಪ್ರೊ. ಚಂದ್ರಶೇಖರ ವಸ್ತ್ರದ, ವಿವೇಕಾನಂದಗೌಡ ಪಾಟೀಲ, ಅಮರೇಶ ಗಾಣಿಗೇರ, ಅರವಿಂದ ಕವಟಿಮಟ್ಟಿ, ಬಿ.ಬಿ.ಕುರಿ, ಶಿವಾನಂದ ಭಜಂತ್ರಿ, ಸೇರಿ ಇತರರು ಇದ್ದರು.