ಜಿಂದಾಲ್‌ಗೆ ನೀರು ಹರಿಸುವುದು ನಿಲ್ಲಿಸಿ

| Published : Dec 15 2023, 01:31 AM IST

ಸಾರಾಂಶ

ಜಿಂದಾಲ್‌ಗೆ ನೀರು ಹರಿಸುವುದು ನಿಲ್ಲಿಸಿ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರಾಜ್ಯಾದ್ಯಂತ ಬರ ಆವರಿಸಿಕೊಂಡರೂ ಜಿಂದಾಲ್ ಕಾರ್ಖಾನೆಗೆ ನಿರಂತರ ನೀರು ಹರಿಸುತ್ತಿರುವ ಸರ್ಕಾರದ ನಿರ್ಧಾರ ವಿರೋಧಿಸಿ ಗುರುವಾರ ಬಾಗಲಕೋಟೆ-ರಾಯಚೂರು ಜಿಲ್ಲಾ ರೈತರು ಜಿಲ್ಲಾಡಳಿತ ಕಚೇರಿ ಎದುರು ಉರುಳು ಸೇವೆ ಮಾಡುವ ಮೂಲಕ ಜಂಟಿಯಾಗಿ ಪ್ರತಿಭಟನೆ ನಡೆಸಿದರು.

ಬಾಗಲಕೋಟೆ ನವನಗರದ ಜಿಲ್ಲಾಡಳಿತ ಕಚೇರಿ ಎದುರು ಗುರುವಾರ ಉರುಳು ಸೇವೆ ಮಾಡುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ಜಾನಕಿ.ಕೆ.ಎಂ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯಾದ್ಯಂತ ಬರ ಬಿದ್ದಿರುವ ಹಿನ್ನೆಲೆಯಲ್ಲಿ ಜನ-ಜಾನುವಾರಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ರೈತರು ಬೆವರು ಹರಿಸಿ ಭೂಮಿಯಲ್ಲಿ ಬೆಳೆದ ಬೆಳೆಗಳು ನೀರಿಲಿಲ್ಲದೇ ಒಣಗುತ್ತಿದೆ. ಸರಿಯಾದ ಸಮಯಕ್ಕೆ ಮಳೆ ಬಾರದ ಕಾರಣ ಇಂದು ರೈತ ಮತ್ತೆ ನಿರಾಸೆ ಭಾವದಲ್ಲಿ ಬದುಕುವಂತಾಗಿದೆ. ಈವರೆಗೂ ಸರ್ಕಾರ ಬರ ಪರಿಹಾರ ಘೋಷಣೆ ಮಾಡಿಲ್ಲ. ಇಂತಹ ಸ್ಥಿತಿಯಲ್ಲಿ ಸರ್ಕಾರದಿಂದ ರೈತ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವಾಗುತ್ತಿಲ್ಲ. ಆದರೆ, ದೊಡ್ಡ ದೊಡ್ಡ ಕಂಪನಿಗಳ ಸಮಸ್ಯೆಗಳು ಮುಂದೆ ನಿಂತು ಬಗೆಹರಿಸುವ ಕೆಲಸ ಮಾಡುತ್ತಿದೆ. ಇದು ರೈತನಿಗೆ ಸರ್ಕಾರ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಲುವೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಜಿಂದಾಲ್ ಕೈಗಾರಿಕೆಗಳಿಗೆ ನಿರಂತರ ನೀರು ನೀಡಲಾಗುತ್ತಿದೆ. ತನ್ಮೂಲಕ ಬರದ ನಡುವೆಯೂ ರೈತರಿಗೆ ಬರೆ ಎಳೆಯುವ ಕೆಲಸ ಮಾಡಿದಂತಾಗಿದೆ. ನಿರಂತರವಾಗಿ ನೀರು ಸರಬರಾಜು ಮಾಡುತ್ತಿರುವುದನ್ನು ನಿಲ್ಲಿಸಿ ಫೆ.20ರ ಒಳಗಾಗಿ ಕಾಲುವೆಗಳಿಗೆ ನೀರು ಹರಿಸುವ ಕೆಲಸವಾಗಬೇಕು. ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.---

(ಫೋಟೊ 14ಬಿಕೆಟಿ 8-.