ಮಕ್ಕಳ ಮೇಲೆ ಬೀದಿನಾಯಿಗಳ ಅಟ್ಟಹಾಸ ಹೆಚ್ಚಾಗಿದ್ದು, ವಿಜಯಪುರ ಜಿಲ್ಲೆ ಇಂಡಿಯಲ್ಲಿ ಇಬ್ಬರು ಮಕ್ಕಳ ಮೇಲೆ ಬೀದಿನಾಯಿಗಳು ದಾಳಿ ಮಾಡಿ ಗಾಯಗೊಳಿಸಿವೆ.

ಕನ್ನಡಪ್ರಭ ವಾರ್ತೆ ಇಂಡಿ

ಮಕ್ಕಳ ಮೇಲೆ ಬೀದಿನಾಯಿಗಳ ಅಟ್ಟಹಾಸ ಹೆಚ್ಚಾಗಿದ್ದು, ವಿಜಯಪುರ ಜಿಲ್ಲೆ ಇಂಡಿಯಲ್ಲಿ ಇಬ್ಬರು ಮಕ್ಕಳ ಮೇಲೆ ಬೀದಿನಾಯಿಗಳು ದಾಳಿ ಮಾಡಿ ಗಾಯಗೊಳಿಸಿವೆ. ನಗರದ ರೇವಪ್ಪನಮಡ್ಡಿ ಹಾಗೂ ಕರೀಂ ನಗರದಲ್ಲಿ ಬೀದಿ ನಾಯಿ ಬಾಲಕಿ ಮೇಲೆ ದಾಳಿ ಮಾಡಿವೆ. ರೇವಪ್ಪಮಡ್ಡಿಯ ಗುತ್ತೇದಾರ ಲೇಔಟ್ ನಲ್ಲಿ 9 ವರ್ಷದ ಬಾಲಕಿ ಮೇಲೆ ಎರಗಿದ ಬೀದಿನಾಯಿಗಳು ಮುಖ, ಕಣ್ಣಿನ ಭಾಗಕ್ಕೆ ಗಾಯಗೊಳಿಸಿವೆ. ಪ್ರೇರಣಾ ಗೌಳಿ ಎಂಬ ಬಾಲಕಿ ಆಟವಾಡುತ್ತಿದ್ದ ವೇಳೆ ದಾಳಿ ಮಾಡಿದ ಬೀದಿ ನಾಯಿ ಮುಖದ ಕಣ್ಣಿನ ಕೆಳಭಾಗಕ್ಕೆ ತೀವ್ರ ಗಾಯಗೊಳಿಸಿವೆ. ಇಂಡಿ ತಾಲೂಕು ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಂದೆಡೆ ಇಂಡಿ ನಗರದ ಕರಿಂ ನಗರದಲ್ಲೂ 5 ವರ್ಷದ ತೈಮೂರು ಮಕಾನದಾರ್ ಎಂಬ ಬಾಲಕನ ಮೇಲೆ ಬೀದಿನಾಯಿ ದಾಳಿ ಮಾಡಿ ಕೈಗೆ ಕಚ್ಚಿ ಗಾಯಗೊಳಿಸಿದೆ. ಬಾಲಕ ಅಂಗಡಿಗೆ ತೆರಳಿದ್ದಾಗ, ನಾಯಿಗಳು ದಾಳಿ ನಡೆಸಿವೆ. ಗಾಯಗೊಂಡ ಬಾಲಕಿ, ಬಾಲಕನಿಗೆ ಇಂಡಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಬೀದಿ ನಾಯಿಗಳನ್ನು ಹತೋಟಿಗೆ ತರಲು ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೆಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.