ಬೀದಿ ಬದಿ, ಗುಡಿ ವ್ಯಾಪಾರಿಗಳಿಗೆ ಹೆಚ್ಚಾಗಿ ಸಾಲದ ಸವಲತ್ತು ನೀಡಬೇಕು: ಕೆ.ಎನ್. ಬಸಂತ್ ನಂಜಪ್ಪ

| Published : Mar 22 2024, 01:03 AM IST

ಬೀದಿ ಬದಿ, ಗುಡಿ ವ್ಯಾಪಾರಿಗಳಿಗೆ ಹೆಚ್ಚಾಗಿ ಸಾಲದ ಸವಲತ್ತು ನೀಡಬೇಕು: ಕೆ.ಎನ್. ಬಸಂತ್ ನಂಜಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಸಹಕಾರ ಸಂಘ ಮತ್ತು ಬ್ಯಾಂಕುಗಳಲ್ಲಿ ಸಾಲ ಪಡೆದವರು ಸಕಾಲದಲ್ಲಿ ಮರು ಪಾವತಿ ಮಾಡಿ ಎಲ್ಲಾ ಸದಸ್ಯರು ಸಾಲ ಪಡೆಯಲು ಅನುಕೂಲವಾಗುವಂತೆ ಮಾಡಬೇಕು. ಪ್ರತಿಯೊಬ್ಬರು ಸಹಕಾರ ಸಂಘಗಳ ಸದಸ್ಯರಾಗಬೇಕು. ಸಹಕಾರ ಇಲಾಖೆಯ ನಿಯಮಾನುಸಾರ ಸಂಘ ಸಂಸ್ಥೆಗಳನ್ನು ನಡೆಸಿ ಪಾರದರ್ಶಕ ಆಡಳಿತ ನೀಡಿದರೆ ಹೆಚ್ಚು ಸದಸ್ಯರು ನಿಮ್ಮ ಬಳಿ ಬರಲಿದ್ದು, ಇದರ ಜತೆಗೆ ಲೆಕ್ಕ ಪತ್ರಗಳಲ್ಲಿಯೂ ಶಿಸ್ತುಬದ್ದವಾಗಿರಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.‌ನಗರ ಸಹಕಾರ ಸಂಘಗಳು ಮತ್ತು ಹಣಕಾಸು ಸಂಸ್ಥೆಗಳು ಬೀದಿ ಬದಿ ಮತ್ತು ಗುಡಿ ವ್ಯಾಪಾರಿಗಳಿಗೆ ಹೆಚ್ಚಾಗಿ ಸಾಲದ ಸವಲತ್ತು ನೀಡಬೇಕು ಎಂದು ನವ ನಗರ ಅರ್ಬನ್ ಅಧ್ಯಕ್ಷ ಕೆ.ಎನ್. ಬಸಂತ್ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ನಡೆದ ಗ್ರಾಮೀಣ ಸೌಹಾರ್ದ ನಿಧಿ ಕೋ-ಆಪರೇಟಿವ್ ಸೊಸೈಟಿಯ ಕೆ.ಆರ್. ನಗರ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶದವರಿವೆ ಸಾಲ ನೀಡಿಕೆಯಲ್ಲಿ ಆದ್ಯತೆ ನೀಡಬೇಕು ಎಂದರು.

ಸಹಕಾರ ಇಲಾಖೆಯ ನಿಯಮಾನುಸಾರ ಸಂಘ ಸಂಸ್ಥೆಗಳನ್ನು ನಡೆಸಿ ಪಾರದರ್ಶಕ ಆಡಳಿತ ನೀಡಿದರೆ ಹೆಚ್ಚು ಸದಸ್ಯರು ನಿಮ್ಮ ಬಳಿ ಬರಲಿದ್ದು, ಇದರ ಜತೆಗೆ ಲೆಕ್ಕ ಪತ್ರಗಳಲ್ಲಿಯೂ ಶಿಸ್ತುಬದ್ದವಾಗಿರಬೇಕೆಂದು ಸಲಹೆ ನೀಡಿದರು.

ಸಹಕಾರ ಸಂಘ ಮತ್ತು ಬ್ಯಾಂಕುಗಳಲ್ಲಿ ಸಾಲ ಪಡೆದವರು ಸಕಾಲದಲ್ಲಿ ಮರು ಪಾವತಿ ಮಾಡಿ ಎಲ್ಲಾ ಸದಸ್ಯರು ಸಾಲ ಪಡೆಯಲು ಅನುಕೂಲವಾಗುವಂತೆ ಮಾಡಬೇಕೆಂದು ಸಲಹೆ ನೀಡಿದರು. ಪ್ರತಿಯೊಬ್ಬರು ಸಹಕಾರ ಸಂಘಗಳ ಸದಸ್ಯರಾಗಬೇಕೆಂದು ತಿಳಿಸಿದರು.

ವಾಣಿಜ್ಯ ಬ್ಯಾಂಕುಗಳಲ್ಲಿ ವ್ಯವಹಾರ ಮಾಡುವುದರಿಂದ ಗ್ರಾಹಕರಿಗೆ ಉತ್ತಮ ಸೇವೆ ದೊರೆಯುವುದಿಲ್ಲ, ಆಸರೆ ಸಹಕಾರ ಬ್ಯಾಂಕುಗಳಲ್ಲಿ ಖಾತೆ ತೆರೆದು ವ್ಯವಹರಿಸಿದರೆ ಸಕಾಲದಲ್ಲಿ ಉತ್ತಮ ಸೇವೆ ಮತ್ತು ಸಾಲದ ಸವಲತ್ತು ದೊರೆಯಲಿದೆ ಎಂದರು.

ಗ್ರಾಮೀಣ ಸೌಹಾರ್ದ ನಿಧಿ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ.ಆರ್. ಶ್ಯಾಮಸುಂದರ್ ಮಾತನಾಡಿ, ಸಾಲಿಗ್ರಾಮ ತಾಲೂಕು ಕೇಂದ್ರದಲ್ಲಿ 300 ಸದಸ್ಯರಿಂದ ಆರಂಭವಾದ ನಮ್ಮ ಸೊಸೈಟಿ ಇಂದು ಸಾವಿರಾರು ಸದಸ್ಯರನ್ನು ಹೊಂದಿದ್ದು ಕೆ.ಆರ್.ನಗರ ತಾಲೂಕು ಕೇದ್ರದಲ್ಲಿ ನೂತನ ಶಾಖೆ ಆರಂಭಿಸುತ್ತಿದ್ದು, ಇದಕ್ಕೆ ಸದಸ್ಯರ ಸಹಕಾರ ಕಾರಣ ಎಂದರು. ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮದ ಪ್ರಾಂತೀಯ ವ್ಯವಸ್ಥಾಪಕ ಗುರುಪ್ರಸಾದ ಬಂಗೇರ, ಜಿಲ್ಲಾ ಸೌಗಾರ್ದ ಅಭಿವೃದ್ಧಿ ಅಧಿಕಾರಿ ಜವಾಹರ ಮುಗ್ಗನವರ, ಜಿಲ್ಲಾ ಸೌಹಾರ್ದ ಸಂಘದ ಅಧ್ಯಕ್ಷ ಎಸ್. ಆರ್. ನಾರಾಯಣ, ತಾಲೂಕು ಸಂಪಾದಕರು ಮತ್ತು ವರದಿಗಾರರ ಸಂಘದ ಅಧ್ಯಕ್ಷ ಕುಪ್ಪೆ ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ಟಿ. ಮೋಹನ ಕುಮಾರ್, ಮೈಸೂರು ಧ್ವನಿ ಸಂಪಾದಕ ಕೆ.ಎಂ. ತುಳಸಿ ಕುಮಾರ್ ಮಾತನಾಡಿದರು. ಗ್ರಾಮೀಣ ನಿಧಿ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿ ಉಪಾಧ್ಯಕ್ಷೆ ನೇತ್ರಾವತಿ ಸುರೇಶ್, ನಿರ್ದೇಶಕರಾದ ಎಂ.ಎಸ್. ನರಸಿಂಹ, ಎಂ.ಎಸ್. ಕುಮಾರ್, ಕೆ.ಎ. ಶಶಿಕುಮಾರ್, ಶಿವರಾಜ್ ಕುಮಾರ್, ಮಹದೇವ್, ಕೆ.ಎಸ್. ರಾಜೇಶ್, ಮಂಜುಳ ಕನಕರಾಜು, ಎಚ್. ಕೆ. ಭಾಗ್ಯ ಗುರುರಾಜು, ಕೆ.ಎಸ್. ರೇಣುಕೇಶ್, ಮಂಜುನಾಥ್, ಶ್ರುತಿ ಶ್ರೀನಿವಾಸ್ ಗೌಡ, ಸಿಇಒ ಮಮತಾ ಜಯಕೃಷ್ಣ, ಕಚೇರಿ ಸಿಬ್ಬಂದಿ ಸಿಂಧು ಮಂಜುನಾಥ್ ಇದ್ದರು.