ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವ ಗ್ರಾಹಕರ ಹಣವನ್ನು ಸುರಕ್ಷಿತವಾಗಿ ಕಾಪಾಡುವುದು. ಅಗತ್ಯ ಸಂದರ್ಭದಲ್ಲಿ ಮರಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಜನರು ಹೆಚ್ಚಿನ ಪ್ರಮಾಣದಲ್ಲಿ ಸಹಕಾರಿ ಬ್ಯಾಂಕುಗಳಲ್ಲಿ ಹಣ ಹೂಡಿಕೆ ಮಾಡುವಂತಹ ವಿಶ್ವಾಸವನ್ನು ನಿರ್ಮಿಸಬೇಕು. ಸಹಕಾರಿ ಯೂನಿಯನ್‌ಗಳು ಮತ್ತಷ್ಟು ಗಟ್ಟಿಯಾಗಿ ಬೆಳೆಯಬೇಕು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಮಳವಳ್ಳಿ-ಮದ್ದೂರು ಮುಖ್ಯರಸ್ತೆಯಲ್ಲಿರುವ ವಂಶಿ ಸೌಹಾರ್ದ ಸಹಕಾರ ಸಂಘದ ಎರಡನೇ ವರ್ಷದ ವಾರ್ಷಿಕ ಮಹಾಸಭೆಯು ಸಂಘದ ಸಂಸ್ಥಾಪಕ ಅಧ್ಯಕ್ಷ ಬಿ.ಸಿದ್ದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿ ಕ್ಷೇತ್ರದಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವುದು ಅತ್ಯಂತ ಮುಖ್ಯ. ಠೇವಣಿದಾರರ ವಿಶ್ವಾಸವನ್ನು ಉಳಿಸಿಕೊಳ್ಳುವ ಮೂಲಕ ಸಹಕಾರಿ ಬ್ಯಾಂಕುಗಳನ್ನು ಮನ್ನಷ್ಟು ಬಲಿಷ್ಠಗೊಳಿಸಬೇಕು ಎಂದರು.

ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವ ಗ್ರಾಹಕರ ಹಣವನ್ನು ಸುರಕ್ಷಿತವಾಗಿ ಕಾಪಾಡುವುದು. ಅಗತ್ಯ ಸಂದರ್ಭದಲ್ಲಿ ಮರಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಜನರು ಹೆಚ್ಚಿನ ಪ್ರಮಾಣದಲ್ಲಿ ಸಹಕಾರಿ ಬ್ಯಾಂಕುಗಳಲ್ಲಿ ಹಣ ಹೂಡಿಕೆ ಮಾಡುವಂತಹ ವಿಶ್ವಾಸವನ್ನು ನಿರ್ಮಿಸಬೇಕು. ಸಹಕಾರಿ ಯೂನಿಯನ್‌ಗಳು ಮತ್ತಷ್ಟು ಗಟ್ಟಿಯಾಗಿ ಬೆಳೆಯಬೇಕು. ಸಹಕಾರಿ ಕ್ಷೇತ್ರ ಮತ್ತು ಬ್ಯಾಂಕುಗಳ ಪ್ರಗತಿಗೆ ಸಿಬ್ಬಂದಿ ಹಾಗೂ ಅಧಿಕಾರಿಗಳ ಸಹಕಾರ ಅತ್ಯಗತ್ಯ ಎಂದರು.

ಠೇವಣಿದಾರರೇ ನಮ್ಮ ಪಾಲಿನ ದೇವರು. ಅವರು ಇಟ್ಟಿರುವ ಹಣವನ್ನು ಜವಾಬ್ದಾರಿಯಿಂದ ಬಳಸಿಕೊಂಡು ಸಹಕಾರಿ ಬ್ಯಾಂಕುಗಳ ಅಭಿವೃದ್ಧಿಗೆ ಶ್ರಮಿಸಬೇಕು. ಸಾಮೂಹಿಕ ಚಿಂತನೆ ಹಾಗೂ ಸಮನ್ವಯದಿಂದ ಸಹಕಾರಿ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಬಹುದು ಎಂದರು.

ಸಂಘದಿಂದ ಸಾಲ ಪಡೆದು ಸರಿಯಾದ ಸಮಯಕ್ಕೆ ಹಣ ಪಾವತಿಸುತ್ತಿರುವ ಹೇಮಾ ಕಾರ್ಕಹಳ್ಳಿ, ಎನ್.ಪ್ರತಾಪ್ ಬೊಪ್ಪಸಮುದ್ರ, ಸಿದ್ದೇಗೌಡ ಬಿದರಹೊಸಹಳ್ಳಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ,ಉಪಾಧ್ಯಕ್ಷರಾದ ಗಿರೀಶ್, ನಿರ್ದೇಶಕರಾದ ಬಿ.ಎಸ್. ಪೂರ್ಣಪ್ರಕಾಶ್, ಡಿ.ಟಿ.ಶರತ್‌ಕುಮಾರ್, ಎಂ.ಎನ್. ಆನಂದ್, ಎಸ್.ಟಿ. ಮಹೇಶ್, ಕೆ.ಎಸ್. ಮಧು, ಬಿ.ಸಿ. ಬೋರೇಶ್, ತನುಜ, ಮಾನಸ, ಕೆ.ಎಸ್. ಪುಟ್ಟರಾಜು ಭಾಗವಹಿಸಿದ್ದರು.