Strengthen the BJP organization: Rajugowda

- ಹುಣಸಗಿಯಲ್ಲಿ ಕೋಳಿಹಾಳ, ಮಾಳನೂರ ಗ್ರಾ.ಪಂ.ಗಳ ಬಿಜೆಪಿ ಮುಖಂಡರ ಸಂಘಟನಾತ್ಮಕ ಸಭೆ

--

ಕನ್ನಡಪ್ರಭ ವಾರ್ತೆ ಹುಣಸಗಿ

ಬಿಜೆಪಿ ಕಾರ್ಯಕರ್ತರು ಜನರ ಮಧ್ಯೆ ಕೆಲಸ ಮಾಡುವ ಮೂಲಕ ಬಿಜೆಪಿ ಪಕ್ಷವನ್ನು ಬಲಪಡಿಸಬೇಕು ಎಂದು ಮಾಜಿ ಸಚಿವ ನರಸಿಂಹ ನಾಯಕ್‌ (ರಾಜೂಗೌಡ) ಹೇಳಿದರು.

ಮಾಜಿ ಜಿ.ಪಂ. ಸದಸ್ಯ ಬಸವರಾಜ ಸ್ಥಾವರಮಠ ಅವರ ನಿವಾಸದಲ್ಲಿ ನಡೆದ ಕೋಳಿಹಾಳ ಹಾಗೂ ಮಾಳನೂರ ಗ್ರಾ.ಪಂ.ಗಳ ಬಿಜೆಪಿ ಮುಖಂಡರುಗಳ ಸಂಘಟನಾತ್ಮಕ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ ಅದಕ್ಕೆ ಪೂರಕವಾಗಿ ಕಾರ್ಯಕರ್ತರು ಕೆಲಸ ಮಾಡಿ ಜನರ ಕಷ್ಟಗಳಿಗೆ ಸ್ಪಂದಿಸಬೇಕು. ರಾಜ್ಯ ಕಾಂಗ್ರೆಸ್‌ ಸರಕಾರದ ಜನ ವಿರೋಧಿ ನೀತಿಗಳ ಬಗ್ಗೆ ಜನರ ಗಮನ ಸೆಳೆಯಲು ಕಾರ್ಯಕರ್ತರು ಶ್ರಮಿಸಬೇಕು. ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಕ್ಕೆ ಬಂದಿದೆ ಆ ಗ್ಯಾರಂಟಿ ಕೂಡಾ ಸಮರ್ಪಕವಾಗಿ ಜಾರಿಗೆ ತರದೆ ಜನರಿಗೆ ಮೋಸ ಮಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದ ನರೇಂದ್ರ ಮೋದಿ ಅವರ ಆಡಳಿತ ದೇಶಕ್ಕೆ ಮಾದರಿಯಾಗಿದೆ. ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ಜನಪರ ಯೋಜನೆಗಳನ್ನು ಮನೆ ಮನೆಗೂ ತಲುಪಿಸುವ ಮೂಲಕ ಪಕ್ಷ ಬಲವರ್ಧನೆಗೆ ಮುಂದಾಗಬೇಕು ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದ ಅವರು, ನಮ್ಮ ಕಾರ್ಯಕರ್ತರ ರಕ್ತದ ಕಣಕಣದಲ್ಲೂ ಹೋರಾಟದ ಗುಣವಿದೆ. ಕಾಂಗ್ರೆಸ್ ಅಬ್ಬರವನ್ನು ಮೀರಿ ನಮ್ಮ ಪಕ್ಷದ ಕಾರ್ಯಕರ್ತರು ಸಂಘಟನೆ ಮಾಡುತ್ತಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಲಿದ್ದೇವೆ ಎಂದು ವಿಶ್ವಾಸದಿಂದ ನುಡಿದರು. ಬೂತ್ ಮಟ್ಟದಿಂದ ಹಿಡಿದು ಸಂಘಟನೆಯನ್ನು ಬಲಪಡಿಸಲು ಪಕ್ಷದ ಮುಖಂಡರು ತಮ್ಮ ತಮ್ಮಲಿನ ಭಿನ್ನಾಭಿಪ್ರಾಯಗಳನ್ನು ದೂರವಿಟ್ಟು ಪಕ್ಷವನ್ನು ಸಂಘಟಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಸಂಗಣ್ಣ ವೈಲಿ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಬಸವರಾಜ ಸ್ಥಾವರಮಠ, ವೀರೇಶ ಚಿಂಚೋಳಿ, ಮೇಲಪ್ಪ ಗುಳಗಿ, ಅಮರಣ್ಣ ದೇಶಾಯಿ, ಶಿವರುದ್ರ ದೇಸಾಯಿ, ಹಣಮಂತ್ರಾಯ ಗೌಡ ಕುಪ್ಪಿ, ರಾಯನ ಗೌಡ ಗುಲಬಾಳ, ಸೋಮಣ್ಣ ಮೇಟಿ , ಶರಣಪ್ಪ ಮಾಸ್ಟರ್ ಗುಳಬಾಳ, ಬಸನಗೌಡ ಕೋಳಿಹಾಳ, ಪ್ರಭುಗೌಡ ಗದ್ದಿಗೇಪ್ಪಗೋಳ, ಯಶವಂತ್ರಾಯ ದೊಡ್ಡಮನಿ, ಭೀಮಣ್ಣ ಬನ್ನೆಟ್ಟಿ. ನಾನೆಗೌಡ ಚಂಗಳಿ, ಗೌಡಪ್ಪಗೌಡ, ಭೀಮಣ್ಣ ಪೂಜಾರಿ, ಪ್ರಭು ನೀಲಗಾರ್, ರಾಣೋಜಿ ಸಿಂಧೆ ಕೋಳಿಹಾಳ, ಬಾಶು ನಾಯಕ, ಲಕ್ಷ್ಮಣ ನಾಯಕ , ಆನಂದ ಮಾರಲಬಾವಿ, ಶಂಕರಗೌಡ ಮಾರಲಬಾವಿ ಮಾಳನೂರ ಇದ್ದರು.

-

6ವೈಡಿಆರ್14 : ಹುಣಸಗಿ ಹೊರವಲಯದಲ್ಲಿ ಮಾಜಿ ಜಿಪಂ ಸದಸ್ಯ ಬಸವರಾಜ ಸ್ಥಾವರಮಠ ನಿವಾಸದಲ್ಲಿ ನಡೆದ ಕೋಳಿಹಾಳ ಹಾಗೂ ಮಾಳನೂರ ಗ್ರಾ.ಪಂ.ಗಳ ಬಿಜೆಪಿ ಮುಖಂಡರುಗಳ ಸಂಘಟನಾತ್ಮಕ ಸಭೆಯಲ್ಲಿ ಮಾಜಿ ಸಚಿವ ರಾಜೂಗೌಡ.