ಸಾರಾಂಶ
ಚನ್ನಪಟ್ಟಣ: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಸಮೀಪಿಸುತ್ತಿದ್ದು, ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿ ಸದೃಢಗೊಳಿಸುವಂತೆ ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ಚನ್ನಪಟ್ಟಣ: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಸಮೀಪಿಸುತ್ತಿದ್ದು, ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿ ಸದೃಢಗೊಳಿಸುವಂತೆ ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ನಗರದ ಶಾಸಕರ ಗೃಹ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಎಸ್‌ಸಿ-ಎಸ್‌ಟಿ ವಿಭಾಗ, ಚನ್ನಪಟ್ಟಣ ಗ್ರಾಮಾಂತರ ಮತ್ತು ನಗರ ವಿಭಾಗದ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ನಲ್ಲಿ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸುವುದು ಸುಲಭದ ಮಾತಲ್ಲ, ಪಕ್ಷ ನಿಮಗೆ ನೀಡಿರುವ ಜವಾಬ್ದಾರಿಗಳನ್ನು ಅರಿತು ಅದಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನೀವೆಲ್ಲರೂ ಕಾರ್ಯ ಪ್ರವೃತ್ತರಾಗುವಂತೆ ಸೂಚಿಸಿದರು.ಜಿಲ್ಲಾ ಎಸ್‌ಸಿ ಘಟಕದ ಅಧ್ಯಕ್ಷ ಎಂ.ನರಸಿಂಹಯ್ಯ ಮಾತನಾಡಿ, ಕಳೆದ ವಿಧಾನಸಭಾ ಉಪಚುನಾವಣೆ ವೇಳೆ ಶಾಸಕ ಸಿ.ಪಿ. ಯೋಗೇಶ್ವರ್ ಜೊತೆಗೆ ಅವರ ಬೆಂಬಲಿಗರು ಪಕ್ಷಕ್ಕೆ ಸೇರಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಅವರಿಗೆ ಯಾವುದೇ ನೇಮಕಾತಿ ನೀಡಿರಲಿಲ್ಲ. ಈಗ ಹಲವರಿಗೆ ಎಸ್‌ಸಿ- ಎಸ್ಟಿ ವಿಭಾಗದ ಜವಾಬ್ದಾರಿ ನೀಡಿಲಾಗಿದೆ. ಮುಂದಿನ ದಿನಗಳಲ್ಲಿ ಹಿರಿಯರಿಗೆ, ಯುವಕರಿಗೆ ಹಾಗೂ ಪಕ್ಷದ ಸಿದ್ಧಾಂತ ಒಪ್ಪಿ ಪಕ್ಷ ಸಂಘಟನೆ ಮಾಡುವವರನ್ನು ಗುರುತಿಸಿ ಜವಾಬ್ದಾರಿ ವಹಿಸಲಾಗುವುದು ಎಂದರು. ನೂತನ ಪದಾಧಿಕಾರಿಗಳು:
ಎಸ್‌ಸಿ-ಎಸ್ಟಿ ವಿಭಾಗದ ರಾಜ್ಯ ಸಂಚಾಲಕ ನೀಲಸಂದ್ರ ಸದಾನಂದ, ರಾಮನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಗಳವಾರ ಪೇಟೆ ವೆಂಕಟೇಶ್ ಮೂರ್ತಿ, ಜಿಲ್ಲಾ ಉಪಾಧ್ಯಕ್ಷ ಎನ್.ಜಿ.ಸಿದ್ದರಾಮಯ್ಯ, ಜಿಲ್ಲಾ ಕಾರ್ಯದರ್ಶಿ ಶಿವಲಿಂಗಯ್ಯ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹದೇವ, ತಾಲೂಕು ಉಪಾಧ್ಯಕ್ಷ ವೆಂಕಟರಾಮು, ಶಿವಶಂಕರ್, ಕಾರ್ಯದರ್ಶಿ ಮದುಸೂಧನ, ಟಿ.ಎಸ್. ಕೃಷ್ಣ ತಾಲ್ಲೂಕು ಸಂಘಟನ ಕಾರ್ಯದರ್ಶಿ, ಎಚ್ ಸಿ ವೆಂಕಟೇಶ್, ನಗರ ಕಾರ್ಯದರ್ಶಿ ದುರ್ಗೇಶ್, ನಗರ ಉಪಾಧ್ಯಕ್ಷೆ ತನುಜ, ನಗರ ಪ್ರಧಾನ ಕಾರ್ಯದರ್ಶಿ ಅಶ್ವಿನಿ ಎಚ್.ಎಸ್, ನಗರಸಂಘಟನಾ ಕಾರ್ಯದರ್ಶಿ ಗೋಪಿನಾಥ್, ನಗರ ಕಾರ್ಯದರ್ಶಿ ಅಂದಾನಿ, ನಗರ ಉಪಾಧ್ಯಕ್ಷರಾಗಿ ಚಂದ್ರಶೇಖರ್, ಜೈಗಣೇಶ್, ಗ್ರಾಮಾಂತರ ಕಾರ್ಯದರ್ಶಿ ಬಸವರಾಜು, ಸಂಘಟನಾ ಕಾರ್ಯದರ್ಶಿ ಕಾಳ ಬಸವರಾಜು, ಗ್ರಾಮಾಂತರ ಉಪಾಧ್ಯಕ್ಷ ಬಸವರಾಜು ವೈ., ನಗರ ಉಪಾಧ್ಯಕ್ಷ ರವಿ, ನಗರ ಪ್ರಧಾನ ಕಾರ್ಯದರ್ಶಿ ಕುಮಾರ, ನಗರ ಕಾರ್ಯದರ್ಶಿ ಪುರುಷೋತ್ತಮ್, ನಗರ ಉಪಾಧ್ಯಕ್ಷ ಸಿದ್ದಪ್ಪ, ಗ್ರಾಮಾಂತರ ಸಂಘಟನಾ ಕಾರ್ಯದರ್ಶಿ, ರಮೇಶ್, ಜಿಲ್ಲಾ ಕಾರ್ಯದರ್ಶಿ ರಾಜೇಶ್ ಕೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗರಾಜು ಎಸ್.ಸಿ, ಗ್ರಾಮಂತರ ಕಾರ್ಯದರ್ಶಿ ನಾಗರಾಜು, ಗ್ರಾಮಾಂತರ ಉಪಾಧ್ಯಕ್ಷ ಮಹದೇವಸ್ವಾಮಿ.ಕೆ, ನಗರ ಕಾರ್ಯದರ್ಶಿ ಜಯಶಂಕರ್ ಬಿ, ನಗರ ಸಂಘಟನಾ ಕಾರ್ಯದರ್ಶಿ ಹರೀಶ.ಬಿ, ನಗರ ಕಾರ್ಯದರ್ಶಿ ಶಿವಕುಮಾರ್ ಅವರನ್ನು ನೇಮಿಸಲಾಗಿದೆ.ಪೋಟೊ೫ಸಿಪಿಟಿ೧: ಚನ್ನಪಟ್ಟಣದಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಿದರು.