ಸಾರಾಂಶ
ಅಂಕೋಲಾ: ಇಂದಿನ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಒತ್ತಡದ ಜೀವನ ಶೈಲಿ, ಜಂಕ್ ಫುಡ್ ಸೇವನೆ, ವ್ಯಾಯಾಮ, ಯೋಗಗಳಿಂದ ದೂರವಿರುವುದು, ಉತ್ತಮ ಹವ್ಯಾಸಗಳಿಂದ ವಂಚಿತರಾಗಿರುವುದು ಕಾರಣವಾಗಿದೆ ಎಂದು ಫುಟ್ ಪಲ್ಸ್ ಕಂಪನಿಯ ಮುಖ್ಯಸ್ಥೆ ಲತಾ ವೆಂಕಟೇಶ ತಿಳಿಸಿದರು.ಇಲ್ಲಿಯ ಸರ್ವೇಶ್ವರ ದೇವಸ್ಥಾನದಲ್ಲಿ ಪುನೀತ ವೆಲ್‌ನೆಸ್ ಸೆಂಟರ್ ಕುಮಟಾ ಹಮ್ಮಿಕೊಂಡಿರುವ 15 ದಿನಗಳ ಫುಟ್ ಪಲ್ಸ್ ಥೆರಫಿಯ ಉಚಿತ ಶಿಬಿರದಲ್ಲಿ ಉಪನ್ಯಾಸ ನೀಡಿ, ಮಧುಮೇಹ, ರಕ್ತದೊತ್ತಡ, ಅಲರ್ಜಿ, ಸೋರಿಯಾಸಿಸ್‌ನಂತಹ ಮಾನವ ಜನಾಂಗವನ್ನು ಕಾಡುತ್ತಿರುವ 120ಕ್ಕೂ ಹೆಚ್ಚು ಕಾಯಿಲೆಗಳನ್ನು ಫುಟ್ ಪಲ್ಸ್ ಥೆರಫಿಯಿಂದ ನಿಯಂತ್ರಣಗೊಳಿಸಬಹುದೆಂದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಪಂ ಮಾಜಿ ಅಧ್ಯಕ್ಷೆ ಸುಜಾತಾ ಗಾಂವಕರ ಅವರು, ಆರೋಗ್ಯಕ್ಕಿಂತ ಮಿಗಿಲಾದ ಭಾಗ್ಯವಿಲ್ಲ. ಆರೋಗ್ಯವಿಲ್ಲದಿದ್ದರೆ ಉಳಿದಾವ ಸಂಪತ್ತುಗಳಿಗೆ ಬೆಲೆಯಿಲ್ಲ ಎಂದರು. ನಿವೃತ್ತ ಪ್ರಾಚಾರ್ಯ ರಾಮಕೃಷ್ಣ ಗುಂದಿ ಮಾತನಾಡಿ, ನಿತ್ಯ ನೂರಾರು ಜನರು ಈ ಶಿಬಿರದ ಉಪಯೋಗ ಪಡೆಯುತ್ತಿರುವುದು ಈ ಶಿಬಿರದ ಮಹತ್ವವನ್ನು ತೋರಿಸುತ್ತದೆ ಎಂದರು. ಕರ್ನಾಟಕ ಸಂಘಧ ಅಧ್ಯಕ್ಷ ಮಹಾಂತೇಶ ರೇವಡಿ ವಂದಿಗೆ ಗ್ರಾಪಂ ಅಧ್ಯಕ್ಷೆ ಸತೀಶ ನಾಯಕ ಬೊಮ್ಮಿಗುಡಿ ಮಾತನಾಡಿದರು. ಶಿಬಿರದ ಸಂಯೋಜಕ ರಾಜೇಶ ನಾಯ್ಕ ಸ್ವಾಗತಿಸಿದರು. ಸಹಾಯಕರಾದ ದೀಕ್ಷಾ, ಪ್ರಿಯಾಂಕ ಉಪಸ್ಥಿತರಿದ್ದರು. ಮಾಲತಿ ನಾಯಕ ನಿರೂಪಿಸಿದರು. ಸರ್ವೇಶ್ವರ ದೇವಸ್ಥಾನದ ವಾಮನ ನಾಯ್ಕ, ಕೃಷ್ಣ ನಾಯ್ಕ ಹಾಗೂ ರಮೇಶ ಮಾಸ್ತರ ಇದ್ದರು.
ಗುಳ್ಳಾಪುರ ಬಳಿ ಅಪಘಾತ ಪ್ರಕರಣ: ಲಾರಿಯಲ್ಲಾಪುರ: ಇತ್ತೀಚೆಗೆ ತಾಲೂಕಿನ ಗುಳ್ಳಾಪುರ ಬಳಿ ಲಾರಿಯೊಂದು ಉರುಳಿ ೧೦ ಜನ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಲಾರಿಯ ಚಾಲಕ ಹಾಗೂ ಮಾಲೀಕರಿಗೆ ಮಂಗಳವಾರ ಸಂಜೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಲಾರಿಯ ಚಾಲಕ ಸವಣೂರಿನ ನಿಜಾಮುದ್ದೀನ ಕರೀಂ ಖಾನ್ ಸೌದಾಗರ ಹಾಗೂ ಮಾಲೀಕ ಗೌಸ್ ಮೊಹಿದ್ದೀನ್ ಬಸೀರ್ ಅಹ್ಮದ್ ಲೋಹಾರ ಬಂಧಿತರು.ಕಳೆದ ಜ. ೨೨ರಂದು ಸವಣೂರಿನಿಂದ ಕುಮಟಾಕ್ಕೆ ತರಕಾರಿ ಸಾಗಿಸುತ್ತಿದ್ದ ಲಾರಿಯಲ್ಲಿ ವ್ಯಾಪಾರಸ್ಥರು ಪ್ರಯಾಣಿಸುತ್ತಿದ್ದು, ಲಾರಿ ಉರುಳಿ 10 ಜನ ಮೃತಪಟ್ಟು, ೧೯ ಜನ ಗಾಯಗೊಂಡಿದ್ದರು.ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿಯ ಚಾಲಕ ಹಾಗೂ ಮಾಲೀಕರನ್ನು ಬಂಧಿಸಿ, ಯಲ್ಲಾಪುರದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.