ಮರ್ಯಾದಾ ಹತ್ಯೆ ತಡೆಗೆ ಕಠಿಣ ಹಾಗೂ ರಚನಾತ್ಮಕ ಕಾಯ್ದೆ ತರುತ್ತೇವೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಹೇಳಿದರು.

ಶಿವಮೊಗ್ಗ: ಮರ್ಯಾದಾ ಹತ್ಯೆ ತಡೆಗೆ ಕಠಿಣ ಹಾಗೂ ರಚನಾತ್ಮಕ ಕಾಯ್ದೆ ತರುತ್ತೇವೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಹೇಳಿದರು.

ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇತ್ತೀಚಿಗೆ ಮರ್ಯಾದಾ ಹತ್ಯೆ ನಡೆದಿದ್ದನ್ನು ಗಮನಿಸಿದ್ದೇವೆ. ನಾಗರಿಕ ಸಮಾಜವಾಗಿ ತಲೆ ತಗ್ಗಿಸಲೇ ಬೇಕಾದ ಪ್ರಸಂಗ ಇದು. ಇದು ಬಸವಣ್ಣರ ನಾಡು. 800 ವರ್ಷದ ಹಿಂದೆಯೇ ಬಸವಣ್ಣ ಇವನಮ್ಮವ ಇವನಮ್ಮವ ಎಂದು ಅಂತರ್ ಜಾತಿ ವಿವಾಹ ಮಾಡಿ, ಸಮಾಜದಲ್ಲಿ ಕ್ರಾಂತಿ ಮಾಡಿದರು. ಈ ಜಾಗದಲ್ಲಿ ಮರ್ಯಾದಾ ಹತ್ಯೆ ಆಗೋದು ನಾಚಿಕಗೇಡು. ಮರ್ಯಾದಾ ಹತ್ಯೆ ತಡೆಯಬೇಕು ಎಂದರು.

ಹಿಂಸೆ ನಿಲ್ಲಬೇಕು. ಬಸವತತ್ವದಡಿ ಎಲ್ಲರೂ ನಡೆಯಬೇಕು ಎನ್ನುವುದು ನಮ್ಮೆಲ್ಲರ ಇಚ್ಛೆ. ಬಸವಣ್ಣ ಅವರನ್ನು ರಾಜ್ಯಕ್ಕೆ ನಮ್ಮ ಸಾಂಸ್ಕೃತಿಕ ನಾಯಕರನ್ನಾಗಿ ಮಾಡಿಕೊಂಡಿದ್ದೇವೆ. ಹೀಗಿದ್ದಾಗ ಮರ್ಯಾದಾ ಹತ್ಯೆ ಸಹಿಸಲು ಸಾಧ್ಯವಿಲ್ಲ . ಇವನ್ನಮ್ಮವ ಇವನಮ್ಮವ ಎಂಬ ಕಾನೂನು ತರಲು ಆಲೋಚಿಸಿದ್ದೇವೆ. ಅಮಾನವೀಯ ಕ್ರಮಗಳಿಗೆ ಲಗಾಮು ಹಾಕುವ ಕೆಲಸ ಮಾಡುತ್ತೇವೆ ಎಂದರು.

ದ್ವೇಷ ಭಾಷಣಕ್ಕೆ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ದ್ವೇಷ ಭಾಷಣಕ್ಕೆ ಯಾರಾದ್ರೂ ಯಾಕೇ ವಿರೋಧ ಮಾಡಬೇಕು. ದ್ವೇಷ ಭಾಷಣಕ್ಕೆ ಅವಕಾಶ ಕೊಡಬೇಕಾ? ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಾಯ್ದೆಯಿಂದ ಯಾವುದೇ ಧಕ್ಕೆ ಬರಲ್ಲ. ಯಾವುದೇ ತೊಂದರೆ ಬರಲ್ಲ ಎಂದರು.

ಸಮಾಜದಲ್ಲಿ ಎಲ್ಲವೂ ಆರೋಗ್ಯಕರವಾಗಿರಬೇಕು. ನಾವು ಯಾವ ಬಳಸಬೇಕು. ಯಾವ ವಿಷಯ ಪ್ರಸ್ತಾಪ ಮಾಡಬೇಕು. ದ್ವೇಷ ಭಾವನೆ ಬಿತ್ತೋದ್ದಕ್ಕೆ ಲಗಾಮು ಹಾಕೋದು ತಪ್ಪಾ. ತಮಗೆ ಬರುತ್ತೇ ಅಂತಾ ಇವರು ಭಯಭೀತರಾಗಿದ್ದಾರೋ ಗೊತ್ತಿಲ್ಲ. ಇವರು ಭಯ ಪಡೋದ್ದಕ್ಕೆ ಕಾರಣವೇ ಇಲ್ಲ. ಕಾಯ್ದೆಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆ ಇಲ್ಲ ಎಂದರು.

ಬಳ್ಳಾರಿ ಘಟನೆ- ಬೆಂಗಳೂರಿಗೆ ರೆಡ್ಡಿ ಪಾದಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿಎಂ ಈ ಬಗ್ಗೆ ಗಮನ ಹರಿಸ್ತಾರೆ. ಸಿಎಂ ಈ ಬಗ್ಗೆ ನಿರ್ಣಯ ಕೈಗೊಳ್ತಾರೆ ಎಂದರು.

ಕೋಗಿಲು ಬಡಾವಣೆ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡ್ತಿದೆ. ಅವರದ್ದು ಅನಾವಶ್ಯಕ ರಾಜಕಾರಣ. ಬೇರೆನೂ ಇಲ್ಲ ಎಂದರು.

ಸಿಎಂ ಸಿದ್ದರಾಮಯ್ಯ ಅತೀ ಹೆಚ್ಚು ಕಾಲ ಸಿಎಂ ಅಗಿ ಸೇವೆ ಮಾಡುತ್ತಿದ್ದಾರೆ. ನಾಳೆ ಸಿಎಂ ಆ ದಾಖಲೆಯ ಸಾಲಿಗೆ ಸೇರುತ್ತಿದ್ದಾರೆ. ದೇವರಾಜು ಅರಸುರವರ ದಾಖಲೆ ದಾಟಿ ಸಿದ್ದರಾಮಯ್ಯ ಬರುತ್ತೀರೋದು ನಮಗೆ ಹೆಮ್ಮೆಯ ವಿಷಯ. ಅದು ದಾಖಲಾರ್ಹ ಸಾಧನೆ ಎಂದರು.