ಸಾರಾಂಶ
ನಗರದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಿಗೆ ತಡರಾತ್ರಿ 1 ಗಂಟೆವರೆಗೆ ತೆರೆಯಲು ಅವಕಾಶ ನೀಡಿರುವ ಆದೇಶ ಹಿಂಪಡೆಯಲು ಆಗ್ರಹಿಸಿ ಬಹುಜನ ಮಹಾಸಭಾ, ಡಾ.ಅಂಬೇಡ್ಕರ್ ಚಿಂತಕರ ಒಕ್ಕೂಟ ನೇತೃತ್ವದಲ್ಲಿ ಸಾರ್ವಜನಿಕರು, ಕಾರ್ಯಕರ್ತರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಿಗೆ ತಡರಾತ್ರಿ 1 ಗಂಟೆವರೆಗೆ ತೆರೆಯಲು ಅವಕಾಶ ನೀಡಿರುವ ಆದೇಶ ಹಿಂಪಡೆಯಲು ಆಗ್ರಹಿಸಿ ಬಹುಜನ ಮಹಾಸಭಾ, ಡಾ.ಅಂಬೇಡ್ಕರ್ ಚಿಂತಕರ ಒಕ್ಕೂಟ ನೇತೃತ್ವದಲ್ಲಿ ಸಾರ್ವಜನಿಕರು, ಕಾರ್ಯಕರ್ತರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.ನಗರದಲ್ಲಿ ಈಗಾಗಲೇ ಮಾದಕವಸ್ತು ವ್ಯಸನಿಗಳು ಹೆಚ್ಚಾಗಿದ್ದಾರೆ. ಅಫೀಮು, ಡ್ರಗ್ಸ್, ಸಿಂಥೆಟಿಕ್ ಡ್ರಗ್ಸ್ ಮಿತಿ ಮೀರಿದೆ. ಪರಿಣಾಮ ಕೊಲೆ, ಸುಲಿಗೆ, ದರೋಡೆ, ಲೈಂಗಿಕ ಕಿರುಕುಳದಂತ ಪ್ರಕರಣಗಳು ಹೆಚ್ಚಾಗಿವೆ. ಹೀಗಿರುವಾಗ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳನ್ನು ತಡರಾತ್ರಿವರೆಗೆ ತೆರೆಯಲು ಅವಕಾಶ ನೀಡುವುದರಿಂದ ಇವುಗಳ ನಿಯಂತ್ರಣ ತಪ್ಪಬಹುದು. ಪೊಲೀಸ್ ವ್ಯವಸ್ಥೆಗೂ ಸವಾಲಾಗಿ ಪರಿಣಮಿಸಿ ಕಾನೂನು ಸುವ್ಯವಸ್ಥೆ ಹದಗೆಡಬಹುದು. ಹೀಗಾಗಿ ಈ ಆದೇಶವನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿದರು.