ಹಿಟ್‌ ಆ್ಯಂಡ್ ರನ್‌ ನಿಯಮ ಹಿಂಪಡೆಯಲು ಆಗ್ರಹಿಸಿ ಲಾರಿಗಳ ಮುಷ್ಕರ

| Published : Jan 18 2024, 02:01 AM IST

ಹಿಟ್‌ ಆ್ಯಂಡ್ ರನ್‌ ನಿಯಮ ಹಿಂಪಡೆಯಲು ಆಗ್ರಹಿಸಿ ಲಾರಿಗಳ ಮುಷ್ಕರ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ, ಜಿಲ್ಲಾಧಿಕಾರಿಗೆ ಬರೆದ ಮನವಿಯಲ್ಲಿ ಗಂಗಾವತಿ-ಕೊಪ್ಪಳ ರಸ್ತೆಯಲ್ಲಿ ಟೋಲ್ ಬಳಿ, ಹೈವೇ ರಸ್ತೆಯಲ್ಲಿ ‘ಹೈವೇ ಪ್ಯಾಟ್ರೋಲ್ ಹೆಸರಿನಲ್ಲಿ ಮತ್ತು ೧೧೨ ವಾಹನದ ಪೊಪೋಲೀಸರು ಹಾಗೂ ಟ್ರಾಫಿಕ್ ಪೊಲೀಸರು ೨೪ ತಾಸು ರಸ್ತೆಯಲ್ಲಿ ಪ್ರತಿ ಲಾರಿಗಳನ್ನು ನಿಲ್ಲಿಸಿ ತೊಂದರೆ ಕೊಡುವುದನ್ನು ನಿಲ್ಲಿಸಬೇಕು.

ಕಾರಟಗಿ: ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿ ಮಾಡಿದ ಹಿಟ್ ಆ್ಯಂಡ್ ರನ್ ಕಾಯ್ದೆ ಹಿಂಪಡೆಯಬೇಕು. ಜಿಲ್ಲೆಯಲ್ಲಿ ೩೦ ಕಿ.ಮೀ. ಒಳಗೆ ಇರುವ ಟೋಲ್‌ಗಳಿಂದ ಸ್ಥಳೀಯ ಲಾರಿಗಳಿಗೆ ವಿನಾಯಿತಿ ನೀಡಬೇಕು. ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ತಾಲೂಕು ಲಾರಿ ಮಾಲೀಕರ ಮತ್ತು ಸರಕು ಸಾಗಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದಿಂದ ಪಟ್ಟಣದಲ್ಲಿ ಬುಧವಾರ ಬೃಹತ್ ಪ್ರತಿಭಟಿಸಲಾಯಿತು.ವಾಣಿಜ್ಯ ಪಟ್ಟಣದ ಲಾರಿ ಮಾಲೀಕರು ಮತ್ತು ಲಾರಿ ಚಾಲಕರೆಲ್ಲ ಸೇರಿ ಬುಧವಾರ ಲಾರಿಗಳನ್ನು ರಸ್ತೆಗಿಳಿಸದೇ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು.ಇಲ್ಲಿನ ವಿಶೇಷ ಎಪಿಎಂಸಿ ಆವರಣದಿಂದ ಆರ್‌ಜಿ ರಸ್ತೆಯ ಮೂಲಕ ಪೊಲೀಸ್ ಠಾಣೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ದಾರಿಯುದ್ದಕ್ಕೂ ಕೇಂದ್ರ ಸರ್ಕಾರ ಜಾರಿಗೊಳಿಸಿದ ಹಿಟ್ ಆ್ಯಂಡ್ ರನ್ ಕಾಯ್ದೆ ವಾಪಸ್ ಪಡೆಯುವಂತೆ ಘೋಷಣೆಗಳನ್ನು ಕೂಗುತ್ತಾ ಸಾಗಿದರು.ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಪರಸಪ್ಪ ದಾರಿಮನಿ, ರಾಜ್ಯ ಸಂಘದ ನಿರ್ಧಾರದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ಣಯದಿಂದ ಆಗುತ್ತಿರುವ ತೊಂದರೆಗಳ ಬಗೆಹರಿಯಬೇಕು. ಜಾರಿಗೊಳಿಸಿದ ನೂತನ ಕಾಯ್ದೆಯನ್ನು ಹಿಂಪಡೆಯುವವರೆಗೂ ನಮ್ಮ ಲಾರಿಗಳನ್ನು ನಾವು ಓಡಿಸದಿರಲು ನಿರ್ಧರಿಸಿದ್ದೇವೆ ಎಂದರು.ಕೇಂದ್ರ ಸರ್ಕಾರ ಜಾರಿ ಮಾಡಿದ ಭಾರತೀಯ ನ್ಯಾಯ ಸಂಹಿತೆಯ ಕಾಲಂ ೧೦೬ರ ಉಪನಿಧಿ ೧ ಮತ್ತು ೨ ನಮ್ಮ ಲಾರಿ ಚಾಲನೆ ಮಾಡುವ ಚಾಲಕರು ವೃತ್ತಿಯಿಂದ ಹೊರಗುಳಿಯುವಂತೆ ಮಾಡಿದೆ. ಅದನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ಒತ್ತಾಯಿಸಿದರು.ರಾಜ್ಯ ಸರ್ಕಾರ, ಜಿಲ್ಲಾಧಿಕಾರಿಗೆ ಬರೆದ ಮನವಿಯಲ್ಲಿ ಗಂಗಾವತಿ-ಕೊಪ್ಪಳ ರಸ್ತೆಯಲ್ಲಿ ಟೋಲ್ ಬಳಿ, ಹೈವೇ ರಸ್ತೆಯಲ್ಲಿ ‘ಹೈವೇ ಪ್ಯಾಟ್ರೋಲ್ ಹೆಸರಿನಲ್ಲಿ ಮತ್ತು ೧೧೨ ವಾಹನದ ಪೊಪೋಲೀಸರು ಹಾಗೂ ಟ್ರಾಫಿಕ್ ಪೊಲೀಸರು ೨೪ ತಾಸು ರಸ್ತೆಯಲ್ಲಿ ಪ್ರತಿ ಲಾರಿಗಳನ್ನು ನಿಲ್ಲಿಸಿ ತೊಂದರೆ ಕೊಡುವುದನ್ನು ನಿಲ್ಲಿಸಬೇಕು. ಗಂಗಾವತಿಯಿಂದ ೩೦ ಕಿ.ಮೀ. ಒಳಗೆ ಮರಳಿ, ಹೇಮಗುಡ್ಡ, ಶಹಪುರ, ಹಿಟ್ನಾಳ ಗ್ರಾಮಗಳ ಬಳಿ ಇರುವ ಟೋಲ್‌ಗಳಿಂದ ಜಿಲ್ಲೆಯ ಸ್ಥಳೀಯ ಲಾರಿಗಳಿಗೆ ವಿನಾಯಿತಿ ಕೊಡಿಸಬೇಕು ಎಂದು ಆಗ್ರಹಿಸಿದರು.ಎಲ್ಲ ಬೇಡಿಕೆಗಳು ಈಡೇರಿಸುವ ತನಕ ಬುಧವಾರ ಮಧ್ಯರಾತ್ರಿಯಿಂದ ವಾಹನಗಳನ್ನು ಓಡಿಸುವುದಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಅನಿರ್ದಿಷ್ಟಾವಧಿ ಧರಣಿ ಕೂರುತ್ತೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಇನ್ನು ಉಗ್ರ ಹೋರಾಟ ನಡೆಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.ಸಂಘದ ಪ್ರಮುಖರು ಪಿಐ ಸಿದ್ದರಾಮಯ್ಯ ಸ್ವಾಮಿ ಹಾಗೂ ಪಿಎಸ್‌ಐ ಕಾಮಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಅಧ್ಯಕ್ಷ ಮಂಗಳೂರು ಬಸವರಾಜಪ್ಪ, ರಮೇಶ, ಬಸವರಾಜ ತಳಿಗೇರಿ, ಶಿವುಕುಮಾರ ಚನ್ನಳ್ಳಿ, ನಿಂಗನಗೌಡ ಬಿಜಕಲ್, ಬಸವರಾಜ ನರೇಗಲ್ಲ, ವಿರೇಶ ಸಿದ್ದಾಪುರ, ಶ್ಯಾಮ್‌ಮೂರ್ತಿ ಕಟ್ಟಿಮನಿ, ಭಾಸ್ಕರ ರೆಡ್ಡಿ, ಹುಸೇನಸಾಬ್, ಸಂಘದ ವಾಹನ ಚಾಲಕರು ಇದ್ದರು.