ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಿ

| Published : Jul 15 2024, 01:54 AM IST

ಸಾರಾಂಶ

ಪಟ್ಟಣದ ಶ್ರೀ ಮಹಾಲಕ್ಷ್ಮಿ ವಿದ್ಯಾಸಂಸ್ಥೆಯಲ್ಲಿ ಪ್ರೌಢಶಾಲೆಗಳಲ್ಲಿ ಇಂಗ್ಲೀಷ್ ವಿಷಯ ಬೋಧಿಸುತ್ತಿರುವ ಶಿಕ್ಷಕರಿಗೆ ೨೦೨೪-೨೪ ನೇ ಸಾಲಿನ ಮೊದಲನೇ ಕಾರ್ಯಾಗಾರ ನಡೆಯಿತು.

ಕೊರಟಗೆರೆ: ಪಟ್ಟಣದ ಶ್ರೀ ಮಹಾಲಕ್ಷ್ಮಿ ವಿದ್ಯಾಸಂಸ್ಥೆಯಲ್ಲಿ ಪ್ರೌಢಶಾಲೆಗಳಲ್ಲಿ ಇಂಗ್ಲೀಷ್ ವಿಷಯ ಬೋಧಿಸುತ್ತಿರುವ ಶಿಕ್ಷಕರಿಗೆ ೨೦೨೪-೨೪ ನೇ ಸಾಲಿನ ಮೊದಲನೇ ಕಾರ್ಯಾಗಾರ ನಡೆಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜು ಮಾತನಾಡಿ, ಪ್ರಸ್ತುತ ೨೦೨೪ -೨೫ ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಉತ್ತಮಪಡಿಸಲು ತಾಲೂಕಿನ ಪ್ರೌಢಶಾಲೆಗಳ ಎಲ್ಲಾ ವಿಷಯಗಳ ಶಿಕ್ಷಕರು ಹೆಚ್ಚಿನ ಶ್ರಮ ವಹಿಸುವುದರ ಮೂಲಕ ಶ್ರಮಿಸಬೇಕು ಎಂದರು.

೧೦ನೇ ತರಗತಿ ವಿದ್ಯಾರ್ಥಿಗಳನ್ನು ಎ, ಬಿ ಮತ್ತು ಸಿ ಗುಂಪುಗಳನ್ನಾಗಿ ಮಾಡಿಕೊಂಡು ಸಿ ಗುಂಪಿನ ವಿದ್ಯಾರ್ಥಿಗಳಿಗೆ ಪಾಸಿಂಗ್ ಪ್ಯಾಕೇಜ್‌ನ್ನು ಸಿದ್ಧಪಡಿಸಿ ಶೈಕ್ಷಣಿಕ ವರ್ಷದ ಪ್ರಾರಂಭದಿಂದ ಅವರನ್ನು ಹೆಚ್ಚಿನ ಕಲಿಕೆಯಲ್ಲಿ ತೊಡಗಿಸಿ ಉತ್ತಮ ಫಲಿತಾಂಶಕ್ಕೆ ಶ್ರಮಿಸಬೇಕೆಂದು ಮಾರ್ಗದರ್ಶನ ನೀಡಿದರು.

ವಿಷಯ ಶಿಕ್ಷಕರು ತಮ್ಮ ತಮ್ಮ ವಿಷಯಗಳಲ್ಲಿ ಫಲಿತಾಂಶ ಉತ್ತಮ ಪಡಿಸಲು ಕ್ರಿಯಾಯೋಜನೆ ಸಿದ್ಧಪಡಿಸಿಕೊಂಡು ಪ್ರತಿಯೊಂದು ಘಟಕಕ್ಕೂ ಘಟಕ ಪರೀಕ್ಷೆಗಳನ್ನು ಮಾಡಿ, ಕಲಿಕೆ ದೃಢೀಕರಣ ಮಾಡಿಕೊಂಡು ಮುಂದಿನ ಬೋಧನಾ ಚಟುವಟಿಕೆಯಲ್ಲಿ ತೊಡಗಬೇಕು ಎಂದು ತಿಳಿಸಿದರು.

ತಾಲೂಕು ನೋಡಲ್ ಅಧಿಕಾರಿ ಮಂಜುನಾಥ್, ದೇವರಾಜು.ಬಿ.ಆರ್.ಪಿ, ಶ್ರೀ ಮಹಾಲಕ್ಷ್ಮಿ ಟ್ರಸ್ಟ್ ಅಧ್ಯಕ್ಷ ವಾಸುದೇವ್, ಟ್ರಸ್ಟಿಗಳಾದ ಜಗದೀಶ್, ಇಂಗ್ಲೀಷ್ ಭಾಷಾ ಸಂಘದ ಅಧ್ಯಕ್ಷ ಚಿಕ್ಕಪ್ಪಯ್ಯ , ಸಂಪನ್ಮೂಲ ವ್ಯಕ್ತಿ ಶಿವಕುಮಾರ್, ಸಂಘದ ಪದಾಧಿಕಾರಿಗಳಾದ ನರಸಿಂಹರಾಜು, ಶ್ರೀನಿವಾಸ ಮೂರ್ತಿ, ಸೂರ್ಯನಾರಾಯಣ್, ಶಾಲಾ ಮುಖ್ಯೋಪಾಧ್ಯಾಯ ಸೋಮಣ್ಣ ಕಾರ್ಯಾಗಾರದಲ್ಲಿದ್ದರು.