ಅಂಕಗಳು ಮತ್ತು ನಿಯೋಜನೆಗಳ ಮೇಲೆ ಮಾತ್ರ ನಿಮ್ಮ ಚಿತ್ತ ಕೇಂದ್ರೀಕರಿಸುವ ಬದಲು ಉತ್ಸಾಹ ಮತ್ತು ಸಮಸ್ಯೆ ಪರಿಹರಿಸುವ ಮನಸ್ಥಿತಿಯೊಂದಿಗೆ ಎಂಜಿನಿಯರಿಂಗ್‌ ಅಭ್ಯಾಸ ಮುಂದುವರಿಸುವಂತೆ ಅಕ್ಕಪಡೆಯ ರಾಜ್ಯ ಸಂಯೋಜಕಿ ಡಾ. ಶೈನಿ ಪ್ರದೀಪ ಗುಂಟಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

* ಸದಾಶಯ

- ವಿದ್ಯಾರ್ಥಿಗಳಿಗೆ ‘ಅಕ್ಕಪಡೆ’ರಾಜ್ಯ ಸಂಯೋಜಕಿ ಶೈನಿ ಪ್ರದೀಪ ಗುಂಟಿ ಕರೆ । ಗುರುನಾನಕ್‌ ದೇವ್‌ ಕಾಲೇಜಿನಲ್ಲಿ ಕಾರ್ಯಕ್ರಮಕನ್ನಡಪ್ರಭ ವಾರ್ತೆ, ಬೀದರ್‌

ಅಂಕಗಳು ಮತ್ತು ನಿಯೋಜನೆಗಳ ಮೇಲೆ ಮಾತ್ರ ನಿಮ್ಮ ಚಿತ್ತ ಕೇಂದ್ರೀಕರಿಸುವ ಬದಲು ಉತ್ಸಾಹ ಮತ್ತು ಸಮಸ್ಯೆ ಪರಿಹರಿಸುವ ಮನಸ್ಥಿತಿಯೊಂದಿಗೆ ಎಂಜಿನಿಯರಿಂಗ್‌ ಅಭ್ಯಾಸ ಮುಂದುವರಿಸುವಂತೆ ಅಕ್ಕಪಡೆಯ ರಾಜ್ಯ ಸಂಯೋಜಕಿ ಡಾ. ಶೈನಿ ಪ್ರದೀಪ ಗುಂಟಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ನಗರದ ಗುರುನಾನಕ್‌ ದೇವ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಹೊಸದಾಗಿ ಪ್ರವೇಶ ಪಡೆದ ಬಿಇ ವಿದ್ಯಾರ್ಥಿಗಳ ಪರಿಚಯ ಹಾಗೂ ಸೇರ್ಪಡೆ ಕಾರ್ಯಕ್ರಮ ಹಾಗೂ ಪೋಷಕರ ಸಭೆಯಲ್ಲಿ ಮಹಿಳಾ ಪೊಲೀಸ್‌ ಸಿಬ್ಬಂದಿಯನ್ನು ಸಬಲೀಕರಣಗೊಳಿಸುವ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಶೈನಿ ಪ್ರದೀಪ ಗುಂಟಿ ಅವರಿಗೆ ವಿಶೇಷ ಪ್ರಶಸ್ತಿ ಫಲಕ ನೀಡಿ ಗೌರವಿಸಿದಕ್ಕೆ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಕೃತಕ ಬುದ್ಧಿಮತ್ತೆಯಂತಹ ಉದ್ಯೋನ್ಮುಖ ತಂತ್ರಜ್ಞಾನಗಳ, ಸಂಶೋಧನೆ, ನಾವೀನ್ಯತೆ ಮತ್ತು ಇನ್ಕ್ಯುಬೇಶನ್ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಮತ್ತು ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಅವರ ವೃತ್ತಿಪರ ಪ್ರಯಾಣಕ್ಕೆ ಅರ್ಥಪೂರ್ಣ ಆರಂಭವನ್ನು ಮಾಡಲು ಕರೆಕೊಟ್ಟು ಜವಾಬ್ದಾರಿಯುತ ಪೌರತ್ವ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ಶ್ರಮಿಸಲು ಸಲಹೆಯಿತ್ತರು.ಕಾರ್ಯಕ್ರಮದಲ್ಲಿ ಬೆಳಗಾವಿಯ ವಿಟಿಯು ಸಿಂಡಿಕೇಟ್‌ ಸದಸ್ಯ ಪವಿತ್‌ ಸಿಂಗ್‌, ಪರೀಕ್ಷಾ ನಿಯಂತ್ರಕರಾದ ಡಾ. ಜಸ್ಮಿನೀತ್‌ ಕೌರ್‌, ಪ್ರಾಂಶುಪಾಲರಾದ ಡಾ. ವೀಣಾ ಸರಗಾನ್ವಿ, ಡಾ. ಧನಂಜಯ ಎಂ., ಉಪ ಪ್ರಾಂಶುಪಾಲರಾದ ಮಾಜಿ ಕರ್ನಲ್‌ ಆರ್‌ಡಿ ಸಿಂಗ್‌ ಮತ್ತು ಡಾ. ಅನೂಪಕುಮಾರ ಉಪಸ್ಥಿತರಿದ್ದರು.

---

---ಬಾಕ್ಸ್‌---

ಸಮಾಜ ಸೇವೆ ಮುಂದುವರಿಸಲಿ

ಸಂಸ್ಥೆಯ ಉಪಾಧ್ಯಕ್ಷೆ ಡಾ. ರೇಷ್ಮಾ ಕೌರ್‌ ಮಾತನಾಡಿ, ಅಕ್ಕ ಪಡೆಯ ಸಾಧನೆ, ಮಹಿಳೆಯರ ಧೈರ್ಯ, ಶಿಸ್ತು, ತಂಡದ ಕೆಲಸ ಮತ್ತು ಸಮರ್ಪಣಾ ಭಾವದ ಪ್ರತಿಬಿಂಬವಾಗಿದೆ. ಬೀದರ್‌ದಂತಹ ನಗರದಲ್ಲಿ ಅಕ್ಕಪಡೆ ಸ್ಥಾಪನೆಯಾಗಿರುವುದು ಸಂತಸದ ಸಂಗತಿ. ಅಕ್ಕಪಡೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಮಹಿಳೆಯರು ಹಾಗೂ ವಿದ್ಯಾರ್ಥಿನಿಯರ ಸುರಕ್ಷತೆಗಾಗಿ ಮಹತ್ವದ ಸೇವೆ ಸಲ್ಲಿಸುತ್ತಿದೆ. ಸಮಾಜದಲ್ಲಿ ಮಹಿಳಾ ಸುರಕ್ಷತೆಗೆ ಹೆಚ್ಚಿನ ಆದ್ಯತೆ ದೊರೆಯುವಂತಾ ಗಿದೆ. ಈ ನಿಟ್ಟಿನಲ್ಲಿ ಶೈನಿ ಪ್ರದೀಪ ಗುಂಟಿ ಅವರ ಸೇವಾ ಮನೋಭಾವ ಮತ್ತು ಸಾಧನೆ ಶ್ಲಾಘನೀಯವಾಗಿದ್ದು, ಮುಂದೆಯೂ ಇದೇ ರೀತಿಯಲ್ಲಿ ಸಮಾಜ ಸೇವೆ ಮುಂದುವರಿಸಲಿ ಎಂದು ಹಾರೈಸಿದರು.