ಸಾರಾಂಶ
ಮಾನ್ವಿ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ತಹಸೀಲ್ದಾರ್ ರಾಜು ಫಿರಂಗಿ ಮಾತನಾಡಿದರು.
ಮಾನ್ವಿ: ತಾಲೂಕು ಆಡಳಿತವತಿಯಿಂದ ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದಕ್ಕೆ ಶ್ರಮಿಸಲಾಗುವುದು ಎಂದು ತಹಸೀಲ್ದಾರ್ ರಾಜು ಫಿರಂಗಿ ತಿಳಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಸಮಿತಿ ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ನೀರಾವರಿ, ಕೃಷಿ ಅಧಿಕಾರಿಗಳು, ಜೆಸ್ಕಾಂ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಲ್ಪಿಸುವಂತೆ ಸೂಚಿಸಿದರು.ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಮಾತನಾಡಿ, ರೈತರು ತಾವು ಬೆಳೆದ ಜೋಳವನ್ನು ಸರ್ಕಾರದ ಜೋಳ ಖರೀದಿ ಕೇಂದ್ರಗಳಲ್ಲಿ ಮಾರಾಟಮಾಡಿ ೪ ತಿಂಗಳುಗಳು ಕಳೆದರು ಇದುವರೆಗೂ ರೈತರ ಖಾತೆಗಳಿಗೆ ಹಣವನ್ನು ಸರಕಾರ ಜಮಾ ಮಾಡದೆ ಇರುವುದರಿಂದ ರೈತರಿಗೆ ಕೃಷಿ ಕೈಗೊಳ್ಳಲು ತೊಂದರೆಯಾಗುತ್ತಿರುವುದರಿಂದ ಕೂಡಲೇ ಸರಕಾರ ರೈತರ ಬಾಕಿ ಹಣ ಜಮೆ ಮಾಡುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜೆಸ್ಕಾಂ ಎಇಇ ವೈಜ್ಯಾನಾಥ,ತಾಲೂಕು ಕೃಷಿ ಸಹಾಯಕ ನಿರ್ದೇಶಕರಾದ ಗುರುನಾಥ ಎಂ.ಭೂಸನೂರ್, ನೀರಾವರಿ ಇಲಾಖೆಯ ಅಧಿಕಾರಿ ತಬ್ರಜ್ ಮಾತನಾಡಿದರು. ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ, ಸಂಘದ ಮುಖಂಡರು,ಪದಾಧಿಕಾರಿಗಳು ಇದ್ದರು.