ಬಿಪಿಎಲ್ ಪಡಿತರ ಚೀಟಿ ರದ್ದುಗೊಳಿಸಿದರೆ ತೀವ್ರ ಪ್ರತಿಭಟನೆ: ವಿಜಯ ಕೊಡವೂರು

| Published : Oct 06 2024, 01:23 AM IST

ಬಿಪಿಎಲ್ ಪಡಿತರ ಚೀಟಿ ರದ್ದುಗೊಳಿಸಿದರೆ ತೀವ್ರ ಪ್ರತಿಭಟನೆ: ವಿಜಯ ಕೊಡವೂರು
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ಜಿಲ್ಲೆಯಲ್ಲಿ ಈಗಾಗಲೇ 40 ಸಾವಿರ ಬಿಪಿಎಲ್ - ಅಂತ್ಯೋದಯ ಚೀಟಿಗಳನ್ನು ರದ್ದುಗೊಳಿಸಲಾಗಿದೆ. ಇನ್ನು 40 ಸಾವಿರ ಚೀಟಿಗಳನ್ನು ರದ್ದುಗೊಳಿಸಲು ಪರಿಶೀಲನೆ ನಡೆಸುತ್ತಿದೆ‌ ಎಂದು ಜಿಲ್ಲಾ ಬಿಜೆಪಿ ಹಿಂ.ವ. ಮೋರ್ಚಾದ ಅಧ್ಯಕ್ಷ ವಿಜಯಕುಮಾರ್ ಕೊಡವೂರು ತಿಳಿಸದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ರಾಜ್ಯ ಕಾಂಗ್ರೆಸ್ ಸರ್ಕಾರವು ಬಡವರಿಗೆ ಸವಲತ್ತುಗಳನ್ನು ನೀಡುವ ತನ್ನ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಾಧ್ಯವಾಗದೇ ರಾಜ್ಯದಲ್ಲಿ 22 ಲಕ್ಷ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿಗಳನ್ನು ರದ್ದು ಮಾಡಲು ಹೊರಟಿದೆ. ಉಡುಪಿ ಜಿಲ್ಲೆಯಲ್ಲಿಯೂ 80 ಸಾವಿರ ಬಿಪಿಎಲ್ ಚೀಟಿಗಳು ರದ್ದಾಗಲಿವೆ. ಸರ್ಕಾರ ತಕ್ಷಣವೇ ಈ ಪ್ರಕ್ರಿಯನ್ನು ರದ್ದು ಮಾಡಬೇಕು. ಇಲ್ಲದಿದ್ದಲ್ಲಿ ಈ ಪ್ರಕ್ರಿಯೆಯ ಸಂತ್ರಸ್ತರನ್ನು ಸೇರಿಸಿ ತೀವ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಹಿಂ.ವ. ಮೋರ್ಚಾದ ಅಧ್ಯಕ್ಷ ವಿಜಯಕುಮಾರ್ ಕೊಡವೂರು ಎಚ್ಚರಿಕೆ ನೀಡಿದ್ದಾರೆ.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯಲ್ಲಿ ಈಗಾಗಲೇ 40 ಸಾವಿರ ಬಿಪಿಎಲ್ - ಅಂತ್ಯೋದಯ ಚೀಟಿಗಳನ್ನು ರದ್ದುಗೊಳಿಸಲಾಗಿದೆ. ಇನ್ನು 40 ಸಾವಿರ ಚೀಟಿಗಳನ್ನು ರದ್ದುಗೊಳಿಸಲು ಪರಿಶೀಲನೆ ನಡೆಸುತ್ತಿದೆ‌. ಇದರ ವಿರುದ್ದ ಬಿಪಿಎಲ್ - ಅಂತ್ಯೋದಯ ಪಡಿತರ ಚೀಟಿಗಳನ್ನು ಕಳೆದುಕೊಳ್ಳುವ ಬಡವರೊಂದಿಗೆ ಜಿಲ್ಲಾ ಕೇಂದ್ರ ಹಾಗೂ ಎಲ್ಲ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ, ರಾಸ್ತಾರೋಕೋಗೆ ಸಿದ್ದತೆ ನಡೆಸಲಾಗಿದೆ ಎಂದರು.ಕಳೆದ ನಾಲ್ಕು ತಿಂಗಳಿನಿಂದ ಗೃಹಲಕ್ಷ್ಮೀ ಹಣ ಬಂದಿಲ್ಲ, 10 ಕೆಜಿ ಅಕ್ಕಿ ನೀಡಿಲ್ಲ, ಯುವನಿಧಿ ಅರ್ಹರಿಗೆ ತಲುಪಿಲ್ಲ, ರೈತರಿಗೆ ಹಾಲಿನ ಪ್ರೋತ್ಸಾಹ ಧನ ನೀಡಿಲ್ಲ, ಅಂಗನವಾಡಿ - ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ವಾಲ್ಮೀಕಿ ನಿಗಮದ ನೌಕರರಿಗೆ ಸಂಬಳವಾಗಿಲ್ಲ ಎಂದರು.

ಮೋರ್ಚಾದ ರಾಜ್ಯ ಉಪಾಧ್ಯಕ್ಷ ಐರೋಡಿ ವಿಠಲ ಪೂಜಾರಿ ಮಾತನಾಡಿದರು.ಸುದ್ದಿಗೋಷ್ಠಿಯಲ್ಲಿ ಮೋರ್ಚದ ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಪ್ರಧಾನ ಕಾರ್ಯದರ್ಶಿ ರವೀಂದ್ರ ತಿಂಗಳಾಯ ಉಪಸ್ಥಿತರಿದ್ದರು.