ನರಗುಂದ: ಪಟ್ಟಣದ ಗುಡ್ಡದ ಓರೆಯಲ್ಲಿನ ಕೃಷ್ಣಾ ನಗರದಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಾಣಗೊಂಡ ಆಶ್ರಯ ಮನೆಗಳನ್ನು ಫಲಾನುಭವಿಗಳಿಗೆ ಕೂಡಲೇ ಹಂಚಿಕೆ ಮಾಡಬೇಕು ಎಂದು ಕರವೇ ಘಟಕದ ಅಧ್ಯಕ್ಷ ನಬಿಸಾಬ ಕಿಲ್ಲೇದಾರ ಆಗ್ರಹಿಸಿದರು.

ಪಟ್ಟಣದ ಮಿನಿ ವಿಧಾನ ಸೌಧದಲ್ಲಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿ, ಗುಡ್ಡದ ಓರೆಯಲ್ಲಿ 500 ಮನೆಗಳಲ್ಲಿ 298 ಮನೆಗಳು ಸಂಪೂರ್ಣ ನಿರ್ಮಾಣವಾಗಿವೆ. ಪಟ್ಟಣದ ತೋಟದಕೇರಿ ಹತ್ತಿರ(ಕೆರಿವಂಡಿ) ಕಡುಬಡವರು ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದು, ಅವರು ಆಶ್ರಯ ಮನೆಗಳ ಸಲುವಾಗಿ ಒಂದು ಲಕ್ಷ ರು. ಮೂರು ವರ್ಷಗಳ ಹಿಂದೆಯೇ ಕಟ್ಟಿದ್ದರೂ ಅವರಿಗೆ ಇನ್ನೂ ಮನೆ ಹಂಚಿಕೆಯಾಗಿಲ್ಲ. 298 ಮನೆಗಳ ಉದ್ಘಾಟನೆ ಕಾರ್ಯಕ್ರಮ ನಡೆದು ಹೋಗಿದೆ. ತೋಟದಕೇರಿ ಹತ್ತಿರದ ಬಡ ಜನರಿಗೆ ಮನೆ ಖಾಲಿ ಮಾಡಿ ಎಂದು ಹೈಕೋರ್ಟ್‌ನಿಂದ ನೋಟಿಸ್ ಜಾರಿಯಾಗಿದ್ದರಿಂದ ಜನರ ಪರದಾಡುತ್ತಿದ್ದಾರೆ. ನಮ್ಮ ಮನವಿ ಸ್ವೀಕರಿಸಿ 15 ದಿನಗಳ ಒಳಗಾಗಿ ಆಶ್ರಯ ಮನೆಹಂಚಿಕೆ ಮಾಡಬೇಕು. ವಿಳಂಬವಾದರೆ ಮುಂದಿನ ದಿನಗಳಲ್ಲಿ ಮನೆಗಾಗಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಉಪತಹಸೀಲ್ದಾರ್ ಪರಶುರಾಮ ಕಲಾಲ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ರೇಣವ್ವ ಜ್ಯಾಲಿಹಾಳ, ಬೀಬಿಜಾನ್ ಮುದಕವಿ, ರಾಜಬಿ ಬಸಾಪುರ, ರೇಣುಕಾ ಲೋಕೂರ, ರುಕ್ಕಿಣಿ ಡೆಂಬೆ, ರಾಜು ಡೆಂಬೆ, ರಿಜಿಯಾಬೇಗಂ ಗೋರಿಮನಿ, ಮಮತಾಜ್ ಗೋರಿಮನಿ, ಶಂಕ್ರವ್ವ ಹೊನ್ನಿಕೊಳ್ಳಿ, ಬಸವ್ವ ಕೊಪ್ಪದ, ಸದ್ದಾಂ ಲಾಡಖಾನ, ಚಂದ್ರು ಚವ್ಹಾಣ, ರತ್ನಾ ಪೂಜಾರ, ಮಹಾದೇವಿ ಕಾಳೆ, ಜೋರಂ, ಮಾಬುಸಾಬ ಮಹೇಶಿ ಮೇಲಿನಮನಿ, ನೇತ್ರಾವತಿ ನೇಕಾರ, ರಮಜಾನಸಾಬ ಲೋಕಾಪೂರ, ಸಲೀಮಾ ಬೋಲೆಖಾನ, ಹಸೀನಾ ಮಕಾಂದಾರ, ದಾವ;ಸಾಬ ಶೇಖ, ದ್ರಾಕ್ಷಾಯಣಿ ಅಮೀನಾ ಭಾಂಗಿ, ಬೈರಮಟ್ಟಿ, ಅಲ್ಲಾಭಕ್ಷ ಗದಗಿನ, ಅಲ್ಲಾಭಕ್ಷ ಮುಲ್ಲಾ, ರಾಜು ಕಟ್ಟಿಮನಿ, ಸದ್ದಾಂ ಕಿಚಡಿ, ಮಲ್ಲಪ್ಪ ಯಾದವಾಡ, ಬಾಬು ಯಲಿಗಾರ ಇದ್ದರು.ಕಸವನ್ನು ಎಲ್ಲೆಂದರಲ್ಲಿ ಬಿಸಾಡದಿರಿ

ಮುಳಗುಂದ: ಮನೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸದಿದ್ದಲ್ಲಿ, ತ್ಯಾಜ್ಯ ಕೊಳೆತು ಪರಿಸರಕ್ಕೆ ಭಾರಿ ಹಾನಿ ಉಂಟುಮಾಡುತ್ತದೆ. ಮನೆ- ಮನೆ ಕಸ ಸಂಗ್ರಹಣೆಗೆ ಹೊಸ ನಿಯಮ ಜಾರಿಗೆ ಬಂದಿದ್ದು, ಸಾರ್ವಜನಿಕರು ನಿಯಮವನ್ನು ಅನುಸರಿಸಿ ಪರಿಸರ ರಕ್ಷಣೆಗೆ ಕೈಜೊಡಿಸಬೇಕೆಂದು ಎಂದು ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ ಮನವಿ ಮಾಡಿದರು.ಸ್ಥಳೀಯ ಪಪಂ ಕಾರ್ಯಾಲಯದ ಮುಂದೆ ಸೋಮವಾರ ಘನತ್ಯಾಜ್ಯ ವಸ್ತುಗಳ ನಿರ್ವಹಣೆ ನಿಯಮ- 2026 ಕುರಿತು ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ರಸ್ತೆಗಳಲ್ಲಿ ಅಥವಾ ಖಾಲಿ ಜಾಗಗಳಲ್ಲಿ ಕಸವನ್ನು ಎಸೆಯದೆ, ಮನೆಯಲ್ಲಿ ಕಸವನ್ನು ಹಸಿ ತ್ಯಾಜ್ಯ, ಒಣ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ ಹಾಗೂ ಸ್ಪೆಷಲ್ ಕೇರ್ ತ್ಯಾಜ್ಯ ಹೀಗೆ ನಾಲ್ಕು ವಿಧದಲ್ಲಿ ಪ್ರತ್ಯೇಕಿಸಿ ಇಟ್ಟುಕೊಳ್ಳುವುದು. ಮನೆ- ಮನೆಗೆ ಬರುವ ತ್ಯಾಜ್ಯ ಸಂಗ್ರಹ ವಾಹನಗಳಿಗೆ ನೀಡಬೇಕು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ಪರಿಸರಸ್ನೇಹಿ ಚೀಲಗಳನ್ನು ಬಳಸಬೇಕು ಎಂದರು.ಈ ವೇಳೆ ಸಿಬ್ಬಂದಿಗಳಾದ ಗಾಯಿತ್ರಿ ಚಲವಾದಿ, ಮುನಿರ್ ನದ್ದಿಮುಲ್ಲಾ, ದಾವಲಪ್ಪ ನಡುಗೇರಿ, ದಾವಲಪ್ಪ ಸಣ್ಣತಮ್ಮಣ್ಣವರ, ಹಾಲಪ್ಪ ಸಣ್ಣತಮ್ಮಣ್ಣವರ ಹಾಗೂ ಪೌರಕಾರ್ಮಿಕರು ಇದ್ದರು.