ಎಲ್ಲಾ ಜಾತಿಯ ಬಡವರ ಪರವಾಗಿ ಹೋರಾಟ: ಕೆ.ಟಿ.ರಾಧಾಕೃಷ್ಣ

| Published : Apr 04 2024, 01:08 AM IST / Updated: Apr 04 2024, 09:47 AM IST

ಸಾರಾಂಶ

ಎಲ್ಲಾ ಜಾತಿಯಲ್ಲೂ ಬಡವರು ಇದ್ದಾರೆ ಅವರ ಪರವಾಗಿ ಹೋರಾಟ ಮಾಡುತ್ತೇನೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣಾ ಕ್ಷೇತ್ರದ ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿ ಕೆ.ಟಿ.ರಾಧಾಕೃಷ್ಣ ಹೇಳಿದ್ದಾರೆ.

  ತರೀಕೆರೆ : ಎಲ್ಲಾ ಜಾತಿಯಲ್ಲೂ ಬಡವರು ಇದ್ದಾರೆ ಅವರ ಪರವಾಗಿ ಹೋರಾಟ ಮಾಡುತ್ತೇನೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣಾ ಕ್ಷೇತ್ರದ ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿ ಕೆ.ಟಿ.ರಾಧಾಕೃಷ್ಣ ಹೇಳಿದ್ದಾರೆ.

ಬುಧವಾರ ಪಟ್ಟಣದ ಅರಮನೆ ಹೋಟೆಲ್.ನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದ ಚೆರಿತ್ರೆಯನ್ನು ಅಧ್ಯಯನ ಮಾಡಿ ಸಂವಿಧಾನದಲ್ಲಿ ಸರ್ವರೂ ಸಮಾನರು ಎಂದು ನಮ್ಮ ಮುಂದೆ ಇಟ್ಟಿದ್ದಾರೆ. ಸಂವಿಧಾನದ ಆಶಯ ಜಾರಿಯಾದರೆ ಸಮಾನತೆಯಿಂದ ಬಾಳಬಹುದು ಎಂಬುದು ಬಹುಜನ ಸಮಾಜ ಪಾರ್ಟಿ ಕಾನ್ಸಿರಾಂ ಅವರ ಆಶಯ. 

ಬಹುಜನ ಸಮಾಜ ಪಾರ್ಟಿ ಸ್ವಂತ ಬಲದ ಮೇಲೆ ಕಟ್ಟಿರುವ ಪಕ್ಷವಾಗಿದೆ, ಶೋಷಿತರ ಪರವಾಗಿ, ಬಡವರ ಪರವಾಗಿ ನಾನು ಲೋಕಸಭೆಯಲ್ಲಿ ಧ್ವನಿ ಎತ್ತುತ್ತೇನೆ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ ಕ್ಷೇತ್ರದಲ್ಲಿ ನನಗೆ ಅತ್ಯಂತ ಹೆಚ್ಚಿನ ಬಹುಮತ ನೀಡಿ ನನ್ನನ್ನು ಗೆಲ್ಲಿಸ ಬೇಕೆಂದು ಅವರು ಮತದಾರರಲ್ಲಿ ಅವರು ಮನವಿ ಮಾಡಿದರು.

ಬಹುಜನ ಸಮಾಜ ಪಾರ್ಟಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ ಉಸ್ತುವಾರಿ ಪಿ.ಪರಮೇಶ್ವರ್ ಮಾತನಾಡಿ ದೇಶದಲ್ಲಿ ಸಾಮಾಜಿಕ, ಅರ್ಥಿಕ ಭದ್ರತೆಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಈ ಅಸಮಾನತೆಗೆ ಆಳುವ ಸರ್ಕಾರವೇ ಕಾರಣ, ಅವರ ಯೋಜನೆಗಳು, ನೀತಿಗಳೇ ಕಾರಣವಾಗಿದೆ. ಅಡಳಿತಕ್ಕೆ ಬಂದ ಪಕ್ಷಗಳು ಆಶಯ ಈಡೇರಿಸಲು ಸಂಪೂರ್ಣ ವಿಫಲವಾಗಿದೆ. ಶಿಕ್ಷಣ ಮತ್ತು ಆರೋಗ್ಯ ಸಂಪೂರ್ಣ ಉಚಿತವಾಗಿರಬೇಕು. ಸರ್ವರಿಗೂ ಸಮಾನತೆ ಸಿಗಬೇಕು ಎಂದು ಬಹುಜನ ಸಮಾಜ ಪಕ್ಷದ ಉದ್ದೇಶ. ಪ್ರತಿಯೊಂದು ಸಮಸ್ಯೆಗಳಿಗೂ ಸ್ಪಂದಿಸುವ ಬಹುಜನ ಸಮಾಜ ಪಕ್ಷದ ಕೆ.ಟಿ.ರಾಧಾಕೃಷ್ಣ ಅವರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಅಭ್ಯರ್ಥಿ ಕೆ.ಟಿ.ರಾಧಾಕೃಷ್ಣ ಅವರಿಗೆ ಅತ್ಯಂತ ಹೆಚ್ಚಿನ ಬಹುಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು. 

ಬಹುಜನ ಸಮಾಜ ಪಾರ್ಟಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ ಕೆ.ಟಿ.ರಾಧಾಕೃಷ್ಣ ಅವರ ಸೇವೆಯನ್ನು ಗುರುತಿಸಬೇಕು ಎಂದು ಕೋರಿದರು.ಬಹು ಜನ ಸಮಾಜ ಪಾರ್ಟಿ ಚಿಕ್ಕಮಗಳೂರು ತಾಲೂಕು ಅಧ್ಯಕ್ಷ ಎಚ್.ಕುಮಾರ್ ಮಾತನಾಡಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಕೆ.ಟಿ.ರಾಧಾಕೃಷ್ಣ ಸಾಕಷ್ಟು ಹೋರಾಟ ಮಾಡಿದ್ದಾರೆ. ಕೆ.ಟಿ.ರಾಧಾಕೃಷ್ಣ ನಿಷ್ಠಾವಂತ ಅಭ್ಯರ್ಥಿಯಾಗಿದ್ದಾರೆ ಎಂದು ಹೇಳಿದರು.